ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಆಲಮಟ್ಟಿಯ ಕೆಬಿಜೆಎನ್ನೆಲ್‌ನ ಎಎಲ್‌ಬಿಸಿ ವಿಭಾಗದ ಎಸ್ಟಿಪಿ, ಟಿಎಸ್ಪಿ ಪ್ಯಾಕೇಜ್ ಕಾಮಗಾರಿಗಳಿಗೆ ಕರೆದಿರುವ ಟೆಂಡರ್ ಪ್ರಕ್ರಿಯೆ ಕಾನೂನುಬಾಹಿರವಾಗಿದ್ದು ಕೂಡಲೇ ರದ್ದುಪಡಿಸಬೇಕು ಈ ಕುತಂತ್ರದ ಹಿನ್ನೆಲೆಯಾಗಿರುವ ಇಇ ಎಂ.ಆರ್.ಹಲಗತ್ತಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ ಆಗ್ರಹಿಸಿದ್ದಾರೆ.
ಮುದ್ದೇಬಿಹಾಳ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ಅಭಿವೃದ್ಧಿಗಾಗಿ ಸಾಕಷ್ಟು ಜನ ಗುತ್ತಿಗೆದಾರರಿದ್ದಾರೆ. ಆದರೆ ಹಲಗತ್ತಿ ಅಧಿಕಾರಿ ಮಾತ್ರ ತಮಗೆ ಬೇಕಾದ ಗು್ತಿಗೆದಾರರಿಗೆ ಟೆಂಡರ್ ಒದಗಿಸುವಲ್ಲಿ ನಾನಾ ಕುತಂತ್ರಗಳನ್ನು ನಡೆಸಿದ್ದಾರೆ. ಅಲ್ಲದೇ ಸರಕಾರಕ್ಕೆ ಅನ್ಯಾಯಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕೊರೊನಾ ಹಿನ್ನೆಲೆ ಒಂದು ಟೆಂಡರ್ ಮುಂದಕ್ಕೆ ಹಾಕಿ ಇನ್ನೊಂದನ್ನು ಕರೆಯೋದು ತಪ್ಪು. ಕೇಂದ್ರ ಸರ್ಕಾರವೇ ಎಲ್ಲವನ್ನೂ ಮುಂದಕ್ಕೆ ಹಾಕಿದೆ. ಲಾಕಡೌನ್ ಮುಗಿದ ನಂತರ ಮತ್ತೊಮ್ಮೆ ನಿಯಮಾನುಸಾರ ಈ ಕಾಮಗಾರಿಗೆ ಟೆಂಡರ್ ಕರೆಯಬೇಕು. ತಮಗೆ ಲಾಭ ಆಗುವಂತೆ, ದುಡ್ಡು ತಿಂದು ಮಜಾ ಮಾಡುವವರಿಗೆ ಅನುಕೂಲ ಕಲ್ಪಿಸಲು ಜಿಲ್ಲೆಯಲ್ಲಿ ಒಬ್ಬರಿಗೆ ಮಾತ್ರ ಅನುಕೂಲ ಮಾಡಿಕೊಡಲು ಟೆಂಡರ್ ಕರೆದಿರುವುದು ಸರಿ ಅಲ್ಲ. ಇದರ ಹಿಂದಿರುವ ಕಾಣದ ಕೈ ಯಾರದ್ದು, ಅಧಿಕಾರಿಗಳು ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗಬೇಕು. ಬೇರೆ ಕ್ಷೇತ್ರದಲ್ಲಿ ಸಮಸ್ಯೆ ಆಗಿಲ್ಲ. ಮುದ್ದೇಬಿಹಾಳ ಮತಕ್ಷೇತ್ರಲ್ಲಿ ಮಾತ್ರ ಆಗಿದೆ. ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಕೆಬಿಜೆಎನ್ನೆಲ್ ಎಎಲ್‌ಬಿಸಿ ವಿಭಾಗದ ಇಇ ಹಲಗತ್ತಿ ಮೇಲೆ ಶಿಸ್ತಿನ ಕ್ರಮ ಆಗಬೇಕು. ಇದನ್ನು ಮಂತ್ರಿಗಳಿಗೆ, ಇಲಾಖೆ ಅಧಿಕಾರಿಗಳಿಗೆ ಬರೀತೇನೆ. ಈ ಬಗ್ಗೆ ಗಾಂಧಿ ಮಾರ್ಗದಲ್ಲಿ ಉಪವಾಸ ಸತ್ಯಾಗ್ರಹವನ್ನೂ ಮಾಡಬೇಕಾಗುತ್ತದೆ ಎಂದು ನಾಡಗೌಡರು ಎಚ್ಚರಿಸಿದ್ದಾರೆ.
Be the first to comment