ಜೀಲ್ಲಾ ಸುದ್ದಿಗಳು
ಭಾಲ್ಕಿ: ಮಹಾರಾಷ್ಟ್ರದ ಪಾಲಗರ್‍ನಲ್ಲಿ ಜೂನಾ ಅಖಾಡಾದ ಹಿಂದೂ ಸಂತರನ್ನು ಸಾಮೂಹಿಕವಾಗಿ ಹಲ್ಲೆ ನಡೆಸಿ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಖಂಡನೀಯವಾಗಿದೆ ಎಂದು ಕಟ್ಟಿಮನಿ ಹಿರೇಮಠ ಸಂಸ್ಥಾನ ಮೆಹಕರ, ತಡೋಳಾ, ಡೊಣಗಾಪೂರದ ಪೀಠಾಧಿಪತಿ ಶ್ರೀ ರಾಜೇಶ್ವರ ಶಿವಾಚಾರ್ಯರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಕಾನೂನು ತಿರಸ್ಕರಿಸುವವರಿಗೆ ಕಠಿಣ ಶಿಕ್ಷೆ ಆಗಬೇಕು. 21ನೇ ಶತಮಾನದ ಜನ ಚಿಂತನಶೀಲರಾಗಿದ್ದಾರೆ.
ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನಾವೆಲ್ಲರೂ ರಾಷ್ಟ್ರ ರಚನೆಗೆ ಮುಂದಾಗಬೇಕು. ನಮ್ಮ ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಎನ್ನುವ ಕಾನೂನು ಬರಬೇಕು. ಹಿಂದೂ ಸಂತರನ್ನು ಅಮಾನುಷವಾಗಿ ಹೊಡೆದು ಕೊಲೆಮಾಡಿದ ತಪ್ಪತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
Be the first to comment