ರಾಜ್ಯದ ಸುದ್ದಿಗಳು
ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೋನ್ ಪರಿಣಾಮದಿಂದಾಗಿ ಅಲೆಮಾರಿಗಳ ಜೀವನ ಅತಂತ್ರವಾಗಿದೆ.ಅಂತಹ ಕುಟುಂಬಗಳಿಗೆ ಸೂಕ್ತ ನೆರವು ನೀಡಬೇಕೆಂದು ವಂದೇ ಮಾತರಂ ಜಾಗೃತಿ ವೇದಿಕೆ ಸಕಾ೯ರಕ್ಕೆ ಈ ಮೂಲಕ ಒತ್ತಾಯಿಸಿದೆ.ಪದಾಧಿಕಾರಿಗಳು ಮಾತನಾಡಿ ಸಕಾ೯ರ ಅವರ ನೆರವಿಗಾಗಿ ಆಶ್ರಯ ಕೇಂದ್ರಗಳನ್ನು ತೆರೆದಿದೆ,ಅವು ಕೆಲವೆಡೆಗಳಲ್ಲಿ ಸಮ೯ಪಕವಾಗಿ ಕಾಯ೯ನಿವ೯ಹಿಸುತ್ತಿಲ್ಲ.ಬೃಹತ್ ಪಟ್ಟಣಗಳಲ್ಲಿರುವ ನಿರಾಶ್ರಿತರಿಗೆ ಸೌಲಭ್ಯ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಬೃಹತ್ ಪಟ್ಟಣಗಳಲ್ಲಿನ ಅನಿವಾಸಿಗಳು ಅಕ್ಷರಸಃ ನಲುಗಿಹೋಗಿವೆ,ಅವರ ರೋಧನ ಅರಣ್ಯ ರೋಧನವಾಗಿದೆ.
ಇದಕ್ಕೆ ನಿದಶ೯ನ ನ್ಯೂ ಬಾಂಬೆಯಲ್ಲಿರುವ ವಿಜಯಪುರ ಜಿಲ್ಲೆಯ ಮುದೋಳ ಹಾಗು ಸಿಂದಗಿ ತಾಲೂಕಿನ ಅಲೆಮಾರಿ ಕುಟುಂಬಗಳೇ ಸಾಕ್ಷಿ.ಅಲ್ಲಿಯ ಸ್ಥಳೀಯ ಆಡಳಿತ ತಮ್ಮ ನೆರವಿಗೆ ಬಂದಿಲ್ಲ,ಕನಿಷ್ಟ ನೆರವು ನೀಡಿಲ್ಲ ಸಂಕಷ್ಟ ಆಲಿಸುತ್ತಿಲ್ಲ ಎಂದು ಅವರು ತಮ್ಮಬಳಿ ಅಳಲನ್ನು ತೋಡಿಕೊಂಡಿದ್ದು. ಸಕಾ೯ರದ ಗಮನ ಸೆಳೆಯುವ ನಿಟ್ಟಿನಲ್ಲಿ ಸಹಾಯ ಹಸ್ಥಕ್ಕಾಗಿ ಕಾದಿದ್ದಾರೆಂದರು.ಅವರು ಅಲೆಮಾರಿ ಸಮುದಾಯದವರಿದ್ದು,ಹೊಟ್ಟೆ ಹೊರೆಯಲು ತಾವು ಬಹುದಿನಗಳ ಹಿಂದಯೇ ಬಾಂಬೆ ಸೇರಿದ್ದು,ಲಾಕ್ ಡೌನ್ ನಿಂದಾಗಿ ಹಾಗೂ ಸ್ಥಳೀಯ ಆಡಳಿತದ ನಿಲ೯ಕ್ಷ್ಯದಿಂದಾಗಿ ಬೀದಿಗೆ ಬಿದ್ದಿರುವುದಾಗಿ ಅವರು ಅಳಲು ತೋಡಿಕೊಂಡಿದ್ದಾರೆ. ವಾಟ್ಸಾಫ್ ಮೂಲಕ ಕುಟುಂಬಗಳ ಸದಸ್ಯರು ನೆರವು ಕೋರಿದ್ದಾರೆ.ಸಕಾ೯ರ ಕೊರೋನಾ ಲಾಕ್ ಡೌನ್ ಜನಹಿತಕ್ಕಾಗಿ ಪರಿಣಾಮ ಕಾರಿಯಾಗಿ ಜಾರಿತಂದಿರುವುದು ಸ್ವಾಗತಾಹ೯,ಅಲ್ಲಿಯ ಸ್ಥಳೀಯ ಆಡಳಿತಗಳ ಕಳಪೆ ನಿವ೯ಹಣೆಯಿಂದಾಗಿ ಅಶ್ರಯದೊರಕದೇ ಅವರು ಅಕ್ಷರಸಃ ಬೀದಿಗೆ ಬಿದ್ದಿದ್ದಾರೆ.ಸಕಾ೯ರ ಸ್ಥಳೀಯ ಆಡಳಿತಗಳಿಗೆ ಚಾಟಿ ಏಟುನೀಡಬೇಕಿದೆ ಎಂದಿದ್ದಾರೆ. *ವಿಳಾಸ-* ನ್ಯೂಬಾಂಬೆ ವ್ಯಾಪ್ತಿಯ ಮಹಾಪೆ ಗ್ರಾಮದಲ್ಲಿ, ಬಲಾಪುರ ರಸ್ಥೆಯಲ್ಲಿ ಚೋಪಡಿ ಹಾಕಿಕೊಂಡು ವಾಸವಿದ್ದಾರೆ.ಸುಮಾರು ಇಪ್ಪತ್ತು ಜನರಿರುವ ಇವರು ಅರಕಲು ಮುರುಕಲು ಚೋಪಡಿಗಳಲ್ಲಿ ವಾಸವಿದ್ದಾರೆ.ಸ್ಥಳೀಯ ಆಡಳಿತದ ನಿಲ೯ಕ್ಷ್ಯದಿಂದಾಗಿ ಅವರು ಅಕ್ಷರಸಃ ನಿರಾಶ್ರಿತರಾಗಿದ್ದಾರೆ.
*ವಿಜಯಪುರ ಸಂಸದರು ನೆರವು ನೀಡಿ-* ವಿಜಯಪುರ ಜಿಲ್ಲೆಯ ಮುದೋಳ ಹಾಗೂ ಸಿಂದಗಿಯವರಾದ ಈ ಕುಟುಂಬಗಳು ಬಾಂಬೆಯಲ್ಲಿ,ಕರೋನಾ ಲಾಕ್ ಡೌನ್ ಪರಿಣಾಮ ಸಂಕಷ್ಟದಲ್ಲಿದ್ದು,ಸಕಾ೯ರದ ಆಶ್ರಯ ಅವರಿಗೆ ಲಭ್ಯವಾಗಿಲ್ಲದ ಕಾರಣ ದಿನದೂಡುವುದು ದುಸ್ಥರವಾಗಿದೆ.ಕೆಲದಿನಗಳಿಂದ ತುತ್ತು ಅನ್ನಕ್ಕಾಗಿ ಈ ಕುಟುಂಬಗಳು ಪರಿತಪಿಸುವಂತಹ ದುಸ್ಥಿತಿಯಲ್ಲಿವೆ ಕಾರಣ ಅನಿವಾಸಿ ಬಾಂಬೆ ವಾಸಿಗಳಾದ ಇವರ(ಅವರ ಮೊನಂ-+91 77158 85565 ) ನೆರವಿಗೆ ವಿಜಯಪುರ ಜಿಲ್ಲೆಯ ಸಂಸದರು ಹಾಗೂ ಜಿಲ್ಲಾಧಿಕಾರಿಗಳು,ಉಸ್ಥುವಾರಿಸಚಿವರು ಅವರ ನೆರವಿಗೆ ಮುಂದಾಗಬೇಕೆಂದು ವಂದೇ ಮಾತರಂ ವೇದಿಕೆ ಪದಾಧಿಕಾರಿಗಳು ಈ ಮೂಲಕ ಮನವಿ ಮಾಡಿದ್ದಾರೆ.ಬಾಂಬೆ ಸಕಾ೯ರ ಹಾಗೂ ಸ್ಥಳೀಯ ಆಡಳಿತಕ್ಕೆ ರಾಜ್ಯದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ಚಾಟಿ ಏಟು ನೀಡೋ ಮೂಲಕ ಅಗತ್ಯ ನೆರವು ಹಾಗೂ ಆಶ್ರಯ ಒದಗಿಸಬೇಕಿದೆ.ಇಂತಹ ಬೃಹತ್ ಪಟ್ಟಣಗಳಲ್ಲಿನ ಅನಿವಾಸಿಗಳ ಅಳಲನ್ನು ಸ್ಥಳೀಯ ಆಡಳಿತಗಳು ಆಲಿಸಬೇಕಿದೆ,ಜಿಲ್ಲಾಧಿಕಾರಿಗಳು ಅವರ ನೆರವಿಗೆ ಮುಂದಾಗುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
Be the first to comment