ಜೀಲ್ಲಾ ಸುದ್ದಿಗಳು
ಜೀಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ ವತಿಯಿಂದ ಪ್ರಾರಂಭವಾದ ” ಓದಿನ ಮನೆ” ಕಾರ್ಯಕ್ರಮವು 25ನೇ ದಿನಕ್ಕೆ ಕಾಲಿಟ್ಟ ಖುಷಿ ನನಗೆ. ಜೊತೆಗೆ ಇವತ್ತು ನಮ್ಮ ಓದಿನ ಮನೆಗೆ ಕಾರ್ಯಕ್ರಮಕ್ಕೆ ಆಕಸ್ಮಿಕವಾಗಿ ಬಂದ ಸಹೋದರರಾದ ಸುನಿಲ್ ಭಾವಿಕಟ್ಟಿ ಮತ್ತು ಎಮ್ .ಪಿ. ಮುಧಾಳೆಯವರು ಮಳೆ ಬಂದ ಕಾರಣ ಓದಿನ ಮನೆಯಲ್ಲೇ ಕುಳಿತುಕೊಂಡರು.ವೈಷ್ಣವಿ ಮಹರ್ಷಿ ವಾಲ್ಮೀಕಿಯ ಕಥೆ ಓದಿದರೆ. ಮಾಯಾವತಿ ಎ. ಆರ್. ಮಣಿಕಾಂತ್ ಅವರು ಬರೆದ ರಿಕ್ಷಾದವನ ಮಗ ಐಎಎಸ್ ಆದ ಕಥೆಯನ್ನು ಓದಿದರು.
ವೈಷ್ಣವಿ ವಾಲ್ಮೀಕಿಯ ಕಥೆಯನ್ನು ಓದಿದ ನಂತರ ಅದರ ಬಗ್ಗೆ ಎಲ್ಲರೂ ಚರ್ಚಿಸಿದರು. ವಾಲ್ಮೀಕಿ ಮಹರ್ಷಿ ಗಳು ಹುತ್ತದಿಂದ ಹೊರ ಬರುವಾಗಲೇ ಅವರಿಗೆ ವಯಸ್ಸಾಗಿತ್ತು. ಈ ಪುಸ್ತಕದಲ್ಲಿ ಸಾವಿರ ವರ್ಷಗಳ ನಂತರ ನಡೆಯುವ ರಾಮನ ಚರಿತ್ರೆಯನ್ನು ಮೊದಲೇ ಬರೆದರೆಂದು ಹೇಳಲಾಗಿದೆ.ಅದು ಹೇಗೆ ಸಾಧ್ಯ?
ವಾಲ್ಮೀಕಿಯವರು ಲವ ಕುಶನನ್ನು ಸಾಕಿ ಸಲವುತ್ತಾರೆ. ಅಂದ್ರೆ ವಾಲ್ಮೀಕಿ ಮಹರ್ಷಿಗಳು ಸಾವಿರಕ್ಕೂ ಹೆಚ್ಚು ವರುಷಗಳ ಕಾಲ ಬದುಕಿದ್ದರೇ? ಅದು ಹೇಗೆ ಸಾಧ್ಯ ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕೊನೆಗೆ ವಾಲ್ಮೀಕಿ ಮಹರ್ಷಿ ರಾಮನ ಸಮಕಾಲೀನರಾಗಿದ್ದರು. ಪಂಡಿತರು ವಿದ್ವಾಂಸರೂ ಆಗಿದ್ದರು . ಅಂತೆಯೇ ಸಂಸ್ಕೃತದಲ್ಲಿ ಶ್ಲೋಕಗಳನ್ನು ಬರೆಯಲು ಸಾಧ್ಯವಾಗಿದೆ ಎಂದೆಲ್ಲಾ ಚರ್ಚೆ ನಡೆಯಿತು.
ಎರಡನೇ ಕಥೆ
ಬಡತನದಲ್ಲಿ ಹುಟ್ಟಿ , ಬಡತನದಲ್ಲೇ ಬೆಳೆದು ಕಷ್ಟ ಪಟ್ಟು ಓದಿ ಐಎಎಸ್ ಅಧಿಕಾರಿಯಾದ ರಿಕ್ಷಾ ಚಾಲಕನೊಬ್ಬನ ಮಗನ ಸಾಹಸದ
ಕಥೆ. ಈ ಕಥೆಯಿಂದ ಮನಸ್ಸೊಂದಿದ್ದರೆ ಸಾಕು ಏನು ಬೇಕಾದರೂ ಮಾಡಬಹುದು ಎಂದೆನಿಸಿತು.
ಇಂದು ನಮ್ಮ ಓದಿನ ಮನೆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸಹೋದರರಿಬ್ಬರಿಗೂ ಅನಂತ ಅನಂತ ಧನ್ಯವಾದಗಳು. ಎಂದು ಪಾವ೯ತಿ ವಿಜಯಕುಮಾರ್ ಸೋನಾರೆ ದಂಪತಿಗಳು ತಿಳಿಸಿರುತ್ತಾರೆ.
ಬಾಂಧವರೇ ಮನೆಯಲ್ಲೇ ಇರಿ.
ಕರೋನಾ ಓಡಿಸಲು ಕೈ ಜೋಡಿಸಿ.
Be the first to comment