ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಜಂಗ ಮುರಾಳ ವ್ಯಾಪ್ತಿಗೆ ಬರುವ ಚಿಮ್ಮಲಗಿ ಏತ ನೀರಾವರಿ ವಿತರಣಾ ಕಾಲುವೆ ಸಂಖ್ಯೆ ೧೩-ಬಿ ಕಾಮಗಾರಿಯು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದರೂ ಇದರ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಆಲಮಟ್ಟಿ ಕೆಬಿಜೆಎನ್ಎಲ್ ಇಇ ಎಂ.ಆರ್.ಹಲಗತ್ತಿ ಅವರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಹಿರೇಮುರಾಳ ಗ್ರಾಮದ ರೈತ ಸಂಗಮೇಶ ಅಂಗಡಿ ಅವರು ಗುರುವಾರ ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ ಆರ್.ಪಿ.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
೧೩-ಬಿ ಕಾಲುವೆಯು ತಾಲೂಕಿನ ಅಡವಿ ಸೋಮನಾಳ ಗ್ರಾಮದ ರಸ್ಥೆಯನ್ನು ಅಡ್ಡಲಾಗಿ ಹಾಯ್ದು ಹೋಗಿದ್ದು ಕಾಲುವೆ ಸಿಡಿಯನ್ನು ಅವೈಜ್ಞಾನಿಕವಾಗಿ ಮಾಡಿದ್ದಾರೆ. ಇದರ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಅಧಿಕಾರಿಗಳು ಬೇಜವಾಬ್ದಾರಿತ ಉತ್ತರ ನೀಡಿ, ‘ನಿಮಗೆ ಕಾಲುವೆಯನ್ನೇ ನೀಡಬಾರದಿತ್ತು. ಅದನ್ನು ಬಂದ್ ಮಾಡುತ್ತೇನೆ’ ಎಂದು ಹೇಳುತ್ತಿದ್ದಾರೆ. ಅಲ್ಲದೇ ಹಲಗತ್ತಿ ಅವರು ತಮಗೆ ಬೇಕಾದ ಗುತ್ತಿಗೆದಾರರಿಗೆ ವಿವಿಧ ಟೆಂಡರ್‌ಗಳನ್ನು ನೀಡಿ ಹಣ ದೋಚುತ್ತಿದ್ದು ಗುತ್ತಿಗೆದಾರರು ಕಾಲುವೆ ಕಾಮಗಾರಿಯನ್ನು ಕಳೆಪಟ್ಟದಿಂದ ನಿರ್ಮಿಸುತ್ತಿದ್ದಾರೆ. ಆದ್ದರಿಂದಲೇ ಈ ಭಾಗದ ರೈತರಿಗೆ ಅನ್ಯಾವಾಗುತ್ತಿದೆ. ಕೂಡಲೇ ಹಲಗತ್ತಿ ಅವರು ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
Be the first to comment