ಜೀಲ್ಲಾ ಸುದ್ದಿಗಳು
ಬೀದರ್:- ನಗರದ ಕ.ರಾ.ಶಿ ಸಂಸ್ಥೆಯ ಅಡಿಯಲ್ಲಿ ನಡೆಯುವ ಕರ್ನಾಟಕ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ, ನಗರದ ನೌಬಾದ ವಲಯದ ಅಲೆಮಾರಿ ಜನಾಂಗದವರಿಗೆ ರಿಸೈನ್ ಆರ್ಗಾನೈಜೆಶನ್ ಸಂಸ್ಥೆಯ ಸಹಯೋಗದಲ್ಲಿ ಆಹಾರ ವಿತರಣೆ ಮಾಡಲಾಯಿತು.
ರಿಸೈನ್ ಆರ್ಗಾನೈಜೆಶನ್ ಸಂಸ್ಥೆಯ ಮುಖಂಡರಾದ ರೋಹನ್ಕುಮಾರ, ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ, ಎನ್.ಎಸ್.ಎಸ್. ಕಾರ್ಯಕ್ರಮದ ಅಧಿಕಾರಿ ಸಚೀನ್ ವಿಶ್ವಕರ್ಮ, ಬಿಇಡಿ ಕಾಲೇಜು ಉಪನ್ಯಾಸಕರಾದ ಜಗನ್ನಾಥ ಕಮಲಾಪುರೆ ಸೇರಿದಂತೆ ಪ.ಪೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು ಎಂದು ಸಚೀನ್ ವಿಶ್ವಕರ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದ್ದಾರೆ.
Be the first to comment