ಅಕ್ಕಿ ಬೇಳೆಗಿಂತ ಗುಟ್ಕಾ ಸಿಗ‘ರೇಟ್’ ಜಾಸ್ತಿ !” ಇಲ್ಲಿ ಎಣ್ಣೆಕಾಳಿಗಿಂತ ಕಳ್ಳಭಟ್ಟಿಯೇ ತುಟ್ಟಿ !

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಜಿಲ್ಲಾ ವರದಿ

ಹೌದು ಕಿಲ್ಲರ್ ಕೊರೊನಾ ವೈರಸ್ ನಿಂದಾಗಿ ಈಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ
ಜಿಲ್ಲೆಯಲ್ಲಿ ಕಳ್ಳಮಾರ್ಗದ ಮೂಲಕ ಮಾರಾಟವಾಗುತ್ತಿರುವ ಮದ್ಯ ಮಾರಾಟ ಹಾಗೂ ತಂಬಾಕು ಉತ್ಪನ್ನಗಳ ಬೆಲೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ.

ಪ್ರತಿ ಕೆಜಿ ಅಕ್ಕಿ ೪೪ ರೂ., ಬೇಳೆ ೬೫ ಹಾಗೂ ಪಾಮ್ ಆಯಿಲ್ ೮೦ ರೂಪಾಯಿ ಗಳಷ್ಟಿದ್ದು, ನೂರು ರೂಪಾಯಿಗಳ ಗಡಿ ದಾಟಿಲ್ಲ.

ಆದರೆ, ಕಿಂಗ್ ಸೈಜ್ ಸಿಗರೇಟ್ ರೇಟು ದುಪ್ಪಟ್ಟಾಗಿದೆ, ಮಾನಿಕ್ಚಂದ್ ₹60 ಕೊಟ್ಟರೂ ಸಿಗುತ್ತಿಲ್ಲವಂತೆ !

ಇನ್ನೂ ಹಳ್ಳಿಗಳಲ್ಲಿ ಈ ಮೊದಲು 5 ರೂಗೆ ಮಾರಾಟವಾಗುತ್ತಿದ್ದ ತಂಬಾಕು ಹಾಗೂ ಗುಟ್ಕಾ ಬೆಲೆಗಳಂತೂ 20 ರೂಪಾಯಿಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನುವುದು ಜನರ ಮಾತು.

ಪ್ರತಿಯೊಂದು ವಸ್ತುಗಳು ಕೂಡಾ ಹೆಚ್ಚಿನ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ 5 ರೂನ ಪಾರ್ಲೇಜಿ ಬಿಸ್ಕತ್ತು ಕೂಡ ಇಂದು 10 ರೂಪಾಯಿಗಳಂತೆ ಮಾರಾಟ ಮಾಡುತ್ತಿರುವುದು ಜನರ ನೋವಿನ ಮಾತು.

ಇನ್ನು, ಹಂಡ್ರೆಡ್ ಪೈಪರ್ ಬಾಟಲಿ ಈಗ ೬ ಸಾವಿರ ರು., ಬ್ಲಾಕ್ ಆಂಡ್ ವ್ಹೈಟ್ ಎಂಟು ಸಾವಿರ ರು. ಅಂತೆ! ೪೫-೫೦ ರು.ಗಳಿಗೆ ಮಾರಾಟವಾಗುತ್ತಿದ್ದ ಚೀಪ್ ಲಿಕ್ಕರ್‌ಗಳ ಬೆಲೆ ಡಬ್ಬಲ್, ತ್ರಿಬಲ್…
ತಾಲೂಕಿನ ಹಲವು ತಾಂಡಾಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿರುವ ಕಳ್ಳಭಟ್ಟಿ ಬೆಲೆ ಅಂತೂ ಮಿತಿ ಮೀರಿದೆ..!

ವಾಸ್ತವ ಸ್ಥಿತಿ ಅದೇನೆ ಇರಲಿ ಇಂಥ ಪರಿಸ್ಥಿತಿಯಲ್ಲಿ ವ್ಯಾಪಾರಿಗಳು ಜನರ ಹತ್ತಿರ ಸುಲಿಗೆ ಮಾಡುವುದನ್ನು ಬಿಟ್ಟು ಮಾನವೀಯತೆಯನ್ನು ಮರೆಯದಿರಲಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಮೂಲಕ ಎಲ್ಲ ಅಕ್ರಮ ವ್ಯವಹಾರಗಳಿಗೆ ಬ್ರೇಕ್ ಹಾಕುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದೇ ನಮ್ಮ ಆಶಯ.

Be the first to comment

Leave a Reply

Your email address will not be published.


*