ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ-ಪವಿತ್ರ ರಂಜಾನ್ ಹಬ್ಬವನ್ನು ಕಾನೂನಿನ ನಿಬಂಧನೆಗಳನ್ವಯದಂತೆ ಆಚರಿಸಬೇಕಿದೆ,ಎಂದು ತಹಶಿಲ್ದಾರರಾದ ಎಸ್.ಮಹಾಬಲೇಶ್ವರ ವರು ಸೂಚಿಸಿದರು.ತಮ್ಮ ಕಚೇರಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸಲ್ಮಾನ್ ಬಾಂಧವರ ಸಭೆಯಲ್ಲಿ ಮಾತನಾಡಿದರು.ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಹಾಗೂ 144ಸೆಕ್ಷನ್ ಜಾರಿ ಇರುತ್ತದೆ,ಆರೋಗ್ಯ ಇಲಾಖೆಯ ನಿಧೇ೯ಶನಗಳನ್ನು ಪಾಲಿಸಬೇಕು,ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಕಾರಣ ಸಾಮೂಹಿಕ ಪ್ರಾಥ೯ನೆ ನಿಷಿದ್ಧ,ಧ್ಬನಿವಧ೯ಕ ಬಳಕೆ ನಿಷಿದ್ಧ,ಸೇರಿದಂತೆ ವಿವಿದ ರೀತಿಯ ನಿಬಂಧನೆಗಳನ್ನು ಸಕಾ೯ರ ವಿಧಿಸಿದ್ದು,ಅವುಗಳನ್ನು ಎಲ್ಲಾರೂ ಖಡ್ಡಾಯವಾಗಿ ಪಾಲಿಸಬೇಕಿದೆ ಎಂದರು.ಡಿವೈಎಸ್ಪಿ ಶಿವಕುಮಾರವರು ಮಾತನಾಡಿ,ಕೊರೋನಾ ನಿಯಂತ್ರಣದಲ್ಲಿ ಸಕಾ೯ರದೊಂದಿಗೆ ಸಾವ೯ಜನಿಕರ ಸಹಕಾರ ಅತ್ಯಗತ್ಯ.ಬಳ್ಳಾರಿ ಜಿಲ್ಲೆಯ ಬಹುತೇಕ ಜನತೆ ಇಲಾಖೆಗಳೊಂದಿಗೆ ಸಹಕರಿಸಿದ್ದಾರೆ ಇದು ಶ್ಲಾಘನೀಯ ಎಂದರು.ಕೊರೋನಾ ಮಹಾಮಾರಿಯನ್ನು ಎಲ್ಲರೂ ಒಟ್ಟಾಗಿ ಹಿಮ್ಮೆಟ್ಟಿಸೋಣ,ಯುವಕರು ಅನತ್ಯ ತಿರುಗಾಡುವುದನ್ನು ನಿಲ್ಲಿಸಬೇಕು,ಸಕಾ೯ರದ ನಿಬಂಧನೆಗಳನ್ನು ಎಲ್ಲರೂ ಗೌರವಿಸಿ,ಕೊರೋನಾ ನಿಯಂತ್ರಣಕ್ಕೆ ಅಗತ್ಯ ಮುಂಜಾಗೃತ ಕ್ರಮಗಳ ಜೊತೆಗೆ,ಧಾಮಿ೯ಕ ಶ್ರದ್ಧೆಯಿಂದ ರಂಜಾನ್ ಹಬ್ಬವನ್ನು ಸೌಹಾಧ೯ಯುತವಾಗಿ ಆಚರಿಸಬೇಕೆಂದರು. ಸಿಪಿಐ ಪಂಪನಗೌಡ ಮಾತನಾಡಿ, ಸಾಮಾಜಿಕ ಜಾಲತಾಣವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ,ಅದು ಕಾನೂನು ರೀತ್ಯ ಅಕ್ಷಮ್ಯ ಅಪರಾಧವಾಗಿದೆ.
ಕೊರೋನಾ ನಿಯಂತ್ರಮಣಕ್ಕಾಗಿ ಸಕಾ೯ರದ ಆದೇಶಗಳನ್ನು ಎಲ್ಲರೂ ಪಾಲಿಸಲೇಬೇಕು.ಉಲ್ಲಂಘಿಸಿದ್ದಲ್ಲಿ ಕಾನೂನು ರೀತ್ಯ ನಿಧಾ೯ಕ್ಷಿಣ್ಯ ಕ್ರಮಜರುಗಿಸಲಾಗುವುದು. ಕಾರಣ ಎಲ್ಲಾ ಸಮುದಾಯಗಳ ಹಿರಿಯರು ಇದರ ಕುರಿತು ಪ್ರಮುಖವಾಗಿ ಯುವಪೀಳಿಗೆಗೆ ಹಾಗೂ ಸವ೯ರಿಗೂ ಅರಿವು ಮೂಡಿಸಬೇಕು ಎಂದರು.ಪಪಂ ಮುಖ್ಯಾಧಿಕಾರಿ ಪಕೃದ್ಧೀನ್ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಮಖ್ಬುೂಲ್ ಮೌಲ್ವೀಸಾಬ್.ಇಬಾದುಲ್ಲಾ ಮೌಲ್ವೀಸಾಬ್. ಹಫೀಜಾ ಅನ್ವರ್ ಮೌಲ್ವೀ ಸಾಬ್.ಫಿರೋಜ್ ಅಲಾಮ್ ಮೌಲ್ವೀ ಸಾಬ್.ಅಭ್ದುಲ್ವಾಹಬ್ ಮೌಲ್ವೀ ಸಾಬ್.ಹಫೀಜುದ್ಧೀನ್ ಮೌಲ್ವೀ ಸಾಬ್.ಮತ್ತು ಸಮಾಜದ ಮುಖಂಡರಾದ ಅಹಲೇ ಅದೀಸ್ ಅಧ್ಯಕ್ಷ ಎ.ಎಮ್.ಭಾಷಾಸಾಬ್,ಮಾದಳ್ಳಿ ನಜೀರ್ ಸಾಬ್,ಪಟ್ಟಣ ಪಂಚಾಯ್ತಿ ಸದಸ್ಯ ಸೈಯದ್ ಶುಕೂರ್,ಜಿಲಾನ್,ಪಕೃದ್ಧೀನ್.ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Be the first to comment