ಕೊರೊನಾ ಭೀತಿಗೆ ಯಾದಗಿರಿಯ ರಸ್ತಾಪೂರದ ಅದ್ಧೂರಿ ಶರಭಲಿಂಗೇಶ್ವರ ರಥೋತ್ಸವ ರದ್ದು

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಯಾದಗಿರಿ

ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ದೇವಾಲಯಗಳನ್ನು ಮುಂಜಾಗೃತಾ ಕ್ರಮವಾಗಿ ಬಂದ್ ಮಾಡಲಾಗಿದೆ.

ಅಲ್ಲದೇ ಯಾವುದೇ ಜಾತ್ರಾ ಮಹೋತ್ಸವಗಳು ನಡೆಯದಂತೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ಜಿಲ್ಲೆಯ ಶಹಪುರ ತಾಲೂಕಿನ ರಸ್ತಾಪೂರ ಗ್ರಾಮದ ಆರಾಧ್ಯ ದೈವ ಶ್ರೀ ಶರಭಲಿಂಗೇಶ್ವರ ರಥೋತ್ಸವ ಹಾಗೂ ಜಾನುವಾರುಗಳ ಜಾತ್ರೆಯನ್ನು ರದ್ಧು ಮಾಡಲಾಗಿದ್ದು, ಭಕ್ತಾದಿಗಳು ಜಾತ್ರೆಯ ನಿಮಿತ್ತ ಬರುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಯಾದಗಿರಿ: ಜಿಲ್ಲೆಯ ಸುಕ್ಷೇತ್ರ ರಸ್ತಾಪೂರದಲ್ಲಿ ಇದೇ ತಿಂಗಳ ಏಪ್ರಿಲ್ 28ರಂದು ನೆರವೇರಬೇಕಾಗಿದ್ದ ಮಹಾತ್ಮ ಶರಭಲಿಂಗೇಶ್ವರ ರಥೋತ್ಸವ ಹಾಗೂ ಜಾನುವಾರು ಜಾತ್ರೆಯನ್ನ ಕೊರೊನಾ ಹಿನ್ನೆಲೆ ರದ್ದುಗೊಳಿಸಲಾಗಿದೆ.

ಜಿಲ್ಲೆಯ ಶಹಪುರ ತಾಲ್ಲೂಕಿನ ರಸ್ತಾಪೂರ ಗ್ರಾಮದ ಆರಾಧ್ಯ ದೈವ ಶ್ರೀ ಶರಭಲಿಂಗೇಶ್ವರ ರಥೋತ್ಸವ ಹಾಗೂ ಜಾನುವಾರುಗಳ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿತ್ತು. ಆದರೆ, ಈ ವರ್ಷದ ಜಾತ್ರೆಗೆ ಕೊರೊನಾ ವೈರಸ್ ಭೀತಿ ಎದುರಾಗಿದೆ.

ಕೊರೊನಾ ಭೀತಿಗೆ ಯಾದಗಿರಿಯ ರಸ್ತಾಪೂರದ ಅದ್ದೂರಿ ಶರಭಲಿಂಗೇಶ್ವರ ರಥೋತ್ಸವ ರದ್ದುಶ್ರೀ ಮಠದ ಧರ್ಮಾಧಿಕಾರಿಗಳಾದ ಶ್ರೀ ಶರಭೇಶಯ್ಯ ಸ್ವಾಮಿಗಳು ಭಕ್ತಾದಿಗಳಿಗೆ ಮನವಿ ಮಾಡಿದ್ದು, ರಥೋತ್ಸವದ ವಿಧಿವಿಧಾನಗಳನ್ನು ಸಾಂಕೇತಿಕವಾಗಿ ನೆರವೇರಿಸಲು ನಿರ್ಧರಿಸಲಾಗಿದ್ದು, ಭಕ್ತಾದಿಗಳು ಜಾತ್ರೆಯ ನಿಮಿತ್ತ ಬರುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*