ಯಾದಗಿರಿ ವರದಿ
ಕಾಶ್ಮೀರದ ಪುಲ್ವಾಮಾ ಜೀಲ್ಲೆಯ ಅವಂತಿಪುರ ಬಳಿ ಉಗ್ರರ ಆತ್ಮಹುತಿ ದಾಳಿಗೆ ಹುತಾತ್ಮರಾದ 49 ವೀರ ಯೋಧರಿಗೆ ಟೋಕ್ರೆ ಕೋಲಿ ಸಮಾಜದ ಜೀಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ದೇಶ ವೀರ ಯೋಧರಗೆ ನಮನ ಸಲ್ಲಿಸಿದರು.
ಕಳೆದ ವರ್ಷ ಕಾಶ್ಮೀರದಲ್ಲಿ ಭೀಕರ ಪ್ರವಾಹಕ್ಕೆ ತುತ್ತಾದಾಗ ಇದೇ ಭಾರತೀಯ ಸೇನೆಯೇ ರಕ್ಷಣಾ ಕಾರ್ಯ ಕೈಗೊಂಡ ಕೊಚ್ಚಿಕೊಂಡು ಹೊಗುತ್ತಿದ ಜನರನ್ನು ಪ್ರಾಣ ಪಣ ಇಟ್ಟು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು
ಆದರೆ ಕಾಶ್ಮೀರದ ಕೆಲ ಮತಾಂದ ಜನರು ಪಾಪಿ ಪಾಕಿಸ್ತಾನದ ಪ್ರಚೋದನೆ ಹೋಳಗಾಗಿ ಭಾರತ ಮಾತೆಯ ರಕ್ಷರಾದ ನಮ್ಮ ಸೈನಿಕರ ಮಾರಣಹೋಮ ಮಾಡಿರುವುದು ಖಂಡನಿಯ ಇಂತ ದುಷ್ಟ ಜಂತುಗಳನ್ನು ಹುಡುಕಿ ಹುಡುಕಿ ಕೊಲ್ಲ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು
ದೇಶದಲ್ಲಿ ಎಲ್ಲರೂ ಸ್ವಾರ್ಥಿಗಳಾಗಿದ್ದೇವೆ ಆದರೆ ಕುಟುಂಬವನ್ನು ಮರೆತು ವರ್ಷಗಟ್ಟಲೆ ದೂರ ಇದು ದೇಶದ ಗಡಿಯಲ್ಲಿ ಪ್ರಾಣ ಪಣಕ್ಕಿಟ್ಟು ರಕ್ಷಣೆ ಮಾಡುವ ಸೈನಿಕರು ಮಾತ್ರ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು. ರಾಜ್ಯ ವಿಧಾನಸಭೆ ಕಲಾಪ 7 ದಿನಗಳಲ್ಲಿ 8 ಕೋಟಿಗೂ ಹೆಚ್ಚು ಹಣ ಪೋಲು ಮಾಡಿದರು.ಈ ವ್ಯರ್ಥ ಮಾಡಿದ ಹಣ ಸಮಯದ ಮೊತ್ತವನ್ನು ರಾಜ್ಯದ ರಾಜಕಾರಣಿಗಳಿಂದ ವಸೂಲಿ ಮಾಡಿ ಮಡಿದ ಯೋಧರ ಕುಟುಂಬಕ್ಕೆ ಕಳಿಕೋಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಎಸಿ ಕಾರು ಭದ್ರತೆ,ಬಂಗಲೆ ಕುಳಿತು ಹಣ ಹೇಗೆ ಲೂಟಿ ಮಾಡಬೇಕು,ಎಷ್ಟು ನಕಲಿ ಬೀಲ ಸೃಷ್ಟಿಸಿ ಹಣ ಹೋಡೆಯಬೇಕು ಎಂದೇ ಯೋಚಿಸುತ್ತಿದ್ದಾರೆ ಇಂತ ನಾಲಾಯಕರಿಗೆ ರಾಜ ಮರ್ಯಾದೆ. ದೇಶ ಕೋಳೊ ಹೋಡೆಯುವದರ ಜೊತೆಗೆ ಹಾಳುಮಾಡುತ್ತಿರುವುದೇ ಈ ದುಷ್ಟ ರಾಜಕಾರಣಿಗಳು ಎಂಬುದನ್ನು ಅರಿಯಬೇಕು. ಅಲ್ಲದೆ ದೇಶ ರಕ್ಷಣೆಗೆ ಸರ್ವಸ್ವವನ್ನೂ ತ್ಯಾಗ ಮಾಡಿ ನಮ್ಮ ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ಸಮಯಕ್ಕೆ ಸರಿಯಾಗಿ ಎಷ್ಟೋ ಕಡೆ ಊಟ ಸಹ ಸಿಗುತ್ತಿಲ್ಲ.ಇನ್ನೂ ಎಸಿ ಕಾರು ಉತ್ತಮ ಬಂಗಲೆ ಸಿಗುವುದು ಕನಸಿನ ಮಾತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖ ಮುಖಂಡರು ಇದರು
https://www.facebook.com/ambiganewstv/
Be the first to comment