ದಿನಗೂಳಿಗಳಿಗೆ ಅನ್ನದಾತ ಎ.ಎಸ್.ಪಾಟೀಲ ನಡಹಳ್ಳಿ: 25 ಸಾವಿರ ಆಹಾರ ದಿನಸಿ ಕಿಟ್ ವಿತರಣೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜೀಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಕೊರೊನಾ ಲಾಕ್ ಡೌನ್ ಶ್ರೀಮಂತಿರಿಗೆ ಹಾಗೂ ಮದ್ಯಮ ವರ್ಗದ ಜನರಿಗೆ ಹೇಳುವಷ್ಟು ತೊಂದರೆ ಮಾಡದಿದ್ದರೂ ಬಡ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆದ್ದರಿಂದ ಬಡತನದಲ್ಲಿಯೇ ಶಿಕ್ಷಣವಂತರಾಗಿ ತುಮಕುರು ಶ್ರೀ ಸಿದ್ಧಗಂಗಾಶ್ರೀಗಳ ಆರ್ಶಿವಾದಿಂದ ಉನ್ನತಮಟ್ಟಕ್ಕೇರಿ ಅವರಂತೆಯೇ ತಾನೂ ಕೂಡಾ ದಾಸೋಹಿಯಾಗಬೇಕು ಎಂಬ ಗುರಿ ಇಟ್ಟುಕೊಂಡು  ಸದ್ಯ ಲಾಕಡೌನ್ ನಲ್ಲಿ ಬಡವರಿಗಾಗಿ ಸಹಾಯ ಹಸ್ತಚಾಚುತ್ತಿರುವ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಸೇವೆ ಶ್ಲಾಘನೀಯ.

ಹೌದು, ಹಣ ಎಲ್ಲ ಶ್ರೀಮಂತರಲ್ಲಿಯೂ ಇರುತ್ತದೆ. ಆದರೆ ಅದನ್ನು ಮನಸಾರೆ ಬಿಚ್ಚಿ ಬಡವರಿಗೆ ಸಹಾಯಹಸ್ತ ಮಾಡುವುದು ನೂರಕ್ಕೆ ಒಬ್ಬರು ಮಾತ್ರ. ಇಂತಹ ನೂರರಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರು ಇರುವುದು ಕ್ಷೇತ್ರದ ಬಹುಕೋಟಿ ಪುಣ್ಯವಾಗಿದೆ. ಇದರಲ್ಲಿ ನಡಹಳ್ಳಿ ಅವರು ಕ್ಷೇತ್ರ ಸುಮಾರು 25 ಸಾವಿರ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ್ದಾರೆ.  ನಡಹಳ್ಳಿ ಅವರು ತಮ್ಮ ಮನೆಗೆ ದಾಸೋಹ ನಿಲಯ ಎಂದು ಯಾಕೆ ಹೆಸರಿಟ್ಟಿದ್ದಾರೆ ಎಂದು ಕೆಲ ವಿರೋಧಿಗಳಿಗೆ ಸದ್ಯಕ್ಕೆ ಉತ್ತರ ಸಿಕ್ಕಂತಾಗಿದೆ.

ಹೋರಾಟದಿಂದಲೇ ಜಯಶಾಲಿಯಾದ ನಡಹಳ್ಳಿ:

ಎ.ಎಸ್.ಪಾಟೀಲ ನಡಹಳ್ಳಿ ಅವರು ಮೊದಲು ಹೋರಾಟದಿಂದಲೇಬಡ ಜನರ ಸೇವೆ ಮಾಡುತ್ತಾ ಬಂದಿದ್ದಾರೆ. ಅಲ್ಲದೇ ರೈತರ ಪರ ಹೋರಾಟದಲ್ಲಿ ಸಾಕಷ್ಟು ಬಾರಿ ಗೆಲವು ಸಾಧಿಸಿದ್ದಾರೆ. ಇವರ ಹೋರಾಟದಿಂದಲೇ ಇಂದು ಮುದ್ದೇಬಿಹಾಳ ಕ್ಷೇತ್ರದಲ್ಲಿನ ರೈತರು ನೀರಾವರಿ ಭಾಗ್ಯವನ್ನು ಕಾಣುವಂತಾಗಿದೆ. ತಾವು ರಾಜಕೀಯಕ್ಕೆ ಬಂದಾಗಲೂ ರೈತರಿಗೆ ಅನ್ಯಾವಾದಾಗ ತಮ್ಮ ಸರಕಾರದ ವಿರುದ್ಧವೇ ಹೋರಾಟಕ್ಕೆ ಇಳಿದು ಪಕ್ಷ ಉಚ್ಚಾಟನೆಗೆ ಒಳಗಾದರೂ ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿ ಜಯದ ಮಾಲೆ ತಮ್ಮದಾಗಿಸಿಕೊಂಡು ಜಯಶಾಲಿಯಾಗಿದ್ದಾರೆ.

ನಡಹಳ್ಳಿ ಜಯಕ್ಕೆ ಕುಟುಂಬವೇ ಶ್ರೀರಕ್ಷೆ:

ನಡಹಳ್ಳಿ ಅವರು ಬಡ ಜನರ ಹಾಗೂ ರೈತರಿಗಾದ ಅನ್ಯಾದ ವಿರುದ್ಧ ಹೋರಾಟ ನಡೆಸುತ್ತಿದ್ದರೆ ಇವರಿಗೆ ಬೆಂಬಲವಾಗಿ ಪತ್ನಿ ಮಹಾದೇವಿ ಸೇರಿದಂತೆ ಸಹೋದರ ಮತ್ತು ಮಕ್ಕಳು ಬೆಂಬಲ ನೀಡಿದ್ದು ಇವರ ಪ್ರತಿಯೊಂದು ಹೋರಾಟಕ್ಕೆ ಶ್ರೀರಕ್ಷೆಯಂತೆ ಬೆನ್ನೆಲುಬಾಗಿ ನಿಂತಿದ್ದಾರೆ.

ಪೌರಕಾರ್ಮಿಕರಿಂದಲೇ ಕಿಟ್ ವಿತರಣೆಗೆ ಚಾಲನೆ ನೀಡಿದ ಶಾಸಕರ ಕುಟುಂಬ:

ಕೊರೊನಾ ಹಿನ್ನೆಲೆಯಲ್ಲಿ ಸಮಾಜದಲ್ಲಿ ಪೊಲೀಸರ ಇಲಾಖೆ, ವೈದ್ಯಕೀಯ ಜೊತೆಗೆ ಪೌರ ಕಾರ್ಮಿಕರ ಸೇವೆಯೂ ಶ್ಲಾಘನೀಯವಾಗಿದ್ದು ಮುದ್ದೇಬಿಹಾಳ ಪಟ್ಟಣದ ಪುರಸಭೆ ಎದುರಿಗೆ ಮಂಗಳವಾರ ಪೌರ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸುವ ಮೂಲಕ ಶಾಸಕರ ಕುಟುಂಬ ಕಿಟ್ ವಿತರಣೆಗೆ ಚಾಲನೆ ನೀಡಿದ್ದು ಮಹತ್ವದ ವಿಷಯವಾಯಿತು.



೨೫ ಸಾವಿರ ಕಿಟ್ ವಿತರಣೆ:
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಮೊದಲಿಗೆ ಅಂದಾಜು ೨೦ ಸಾವಿರ ಆಹಾರ ಸಾಮಗ್ರಿ ಕಿಟ್ ವಿತರಣೆ ಮಾಡುವ ಉದ್ದೇಶವನ್ನು ಹೊಂದಲಾಗಿತ್ತು. ಆದರೆ ಸಂಖ್ಯೆಯಲ್ಲಿ ಹೆಚ್ಚಾಗಿದ್ದರಿಂದ ಇನ್ನೂ ಹೆಚ್ಚುವರಿಯಾಗಿ ೫ ಸಾವಿರ ಕಿಟ್‌ಗಳನ್ನು ತಯ್ಯಾರಿಸಲಾಗುತ್ತಿದೆ. ಈಗಾಗಲೇ ಮುದ್ದೇಬಿಹಾಳ ಪಟ್ಟಣದಲ್ಲಿ ೮ ಸಾವಿರ ಕಿಟ್ ವಿತರಣೆ ಮಾಡಲಾಗಿದ್ದು ತಾಳಿಕೋಟೆಯಲ್ಲಿಯೂ ಸೋಮವಾರ ಕಿಟ್ ವಿತರಣೆ ಮಾಡಲಾಗಿದೆ. ಬುಧವಾರ ನಾಲತವಾಡ ಪಟ್ಟಣದ ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

 

Be the first to comment

Leave a Reply

Your email address will not be published.


*