ಮುದ್ದೇಬಿಹಾಳ:
ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಅನುಸರಿಸುತ್ತಿರುವಂತೆ ಮುದ್ದೇಬಿಹಾಳ ಪಟ್ಟಣದ ತಾಲೂಕಾ ಆಸ್ಪತ್ರೆಯನ್ನು ಕೇವಲ ಕೊರೊನಾ ಸಂಬಂಧಿಸಿದ ರೋಗಿಗಳ ಆಸ್ಪತ್ರೆಯನ್ನಾಗಿ ಮಾರ್ಪಡಿಸುವುದು ಅವಶ್ಯವಿದ್ದು ಕೂಡಲೇ ಜಿಲ್ಲಾ ಆಡಳಿತ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಪಟ್ಟಣದ ಪ್ರತಿಷ್ಠಿತ ವೈದ್ಯ ಡಾ.ಉತ್ಕರ್ಷ ನಾಗೂರ ಸಲಹೆ ನೀಡಿದ್ದಾರೆ.
ಈಗಾಗಲೇ ತಾಲೂಕಿನಲ್ಲಿ ಒಂದು ತಾಲೂಕು ಸರ್ಕಾರಿ ಆಸ್ಪತ್ರೆ, ೩ ಸಮುದಾಯ ಆರೋಗ್ಯ ಕೇಂದ್ರ, ೮ ಪ್ರಾಥಮಿಕ ಆರೋಗ್ಯ ಕೇಂದ್ರ ಇವೆ. ಇದರಲ್ಲಿ ತಾಲೂಕಾ ಆಸ್ಪತ್ರೆಯನ್ನು ಕೊರೊನಾಗೆ ಸಿಮಿತಗೊಳಿಸಿ ಕಾಳಗಿಯ ಸಮುದಾಯ ಕೇಂದ್ರವನ್ನು ಹೆರಿಗೆಗೆ ಸೀಮಿತಗೊಳಿಸಿ ಇನ್ನೂಳಿದ ಆಸ್ಪತ್ರೆಗಳಿಗೆ ವಿವಿಧ ವಿಭಾಗಿಗಳನ್ನಾಗಿ ವಿಂಗಡಿಸಿ ವೈದ್ಯರಿಗೆ ಚಿಕಿತ್ಸೆ ಒದಗಿಸುವಲ್ಲಿ ಸೌಲಭ್ಯ ಕಲ್ಪಸಿಕೊಡಬೇಕು. ಇದರಿಂದ ನಿತ್ಯ ತಾಲೂಕಾ ಆಸ್ಪತ್ರೆಗೆ ಆಗಮಿಸುವ ವಿವಿಧ ರೋಗಿಗಳ ಜನಸಂಧಣಿಯನ್ನು ತಡೆಗಟ್ಟಬಹುದಾಗಿದ್ದು ಇದರಿಂದ ಕೊರೊನಾ ಹರಡುವಿಕೆಯನ್ನೂ ತಡೆಗಟ್ಟುವಂತಾಗುತ್ತದೆ ಎಂದು ಅವರು ಜಿಲ್ಲಾ ಆಡಳಿತಕ್ಕೆ ಸಲ್ಲಿಸಿನ ಮನವಿಯಲ್ಲಿ ತಿಳಿಸಿದ್ದಾರೆ.
ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಕೇವಲ ಕೊರೊನಾಗೆ ಸಂಬಂಧಿಸಿದ ಆಸ್ಪತ್ರೆಯಾಗಿ ಮಾರ್ಪಾಡು ಮಾಡಬೇಕು. ಕಾಳಗಿ ಸಮುದಾಯ ಆರೋಗ್ಯ ಕೇಂದ್ರವನ್ನು ಹೆರಿಗೆ, ಸ್ತ್ರೀರೋಗಿಗಳಿಗೆ ಸೀಮಿತಿವಾಗಿರಿಸಬೇಕು. ಇನ್ನುಳಿದವುಗಳನ್ನು ವಿಭಾಗಗಳಾಗಿ ವಿಂಗಡಿಸಿ ದೈನಂದಿನ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡುವ ರೀತಿಯಲ್ಲಿ ಮಾರ್ಪಾಡು ಮಾಡುವುದು ಉತ್ತಮ ಮಾರ್ಗ ಎಂದು ಸಲಹೆ ನೀಡಿದ್ದಾರೆ.
Be the first to comment