ಜೀಲ್ಲಾ ಸುದ್ದಿಗಳು
ಹುಕ್ಕೇರಿ ಕೋರನ ವೈರಸ್ ಹೋಂ ಕ್ವಾರೆಂಟ್ ಮಾಡಲು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಹುಕ್ಕೇರಿ ನಗರದ ಹೋರವಲಯದ ಬಾಪೂಜಿ ಶಾಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕರೋನಾ ಕ್ವೆರೆಂಟೈನ್ ಮಾಡಲು ತಾಲೂಕು ಆಡಳಿತ ತಯಾರಿ ನಡೆಸಿದ ಹಿನ್ನಲೆಯಲ್ಲಿ ನಗರದ ಪುರಸಭೆ ಸದಸ್ಯರು, ಮುಖಂಡರು ಮತ್ತು ಜಾಬಾಪೂರ ಗ್ರಾಮದ ಜನರು ಹುಕ್ಕೇರಿ ತಹಸಿಲ್ದಾರ ಅಶೋಕ ಗುರಾಣಿ ಯವರಿಗೆ ಮನವಿ ಸಲ್ಲಿಸಿ ವಿರೋಧ ವ್ಯಕ್ತಪಡಿಸಿದರು.
ಗುರುವಾರ ಸಂಕೇಶ್ವರ ನಗರದಲ್ಲಿ ಪಾಸಿಟೀವ್ ಕೇಸ್ ಬಂದ ಹಿನ್ನಲೆಯಲ್ಲಿ ತಾಲೂಕಾ ಆಡಳಿತ ಮುಂಜಾಗ್ರತೆ ಕ್ರಮವಾಗಿ ಪಟ್ಟಣದ ಹೋರವಲಯದ ಬಾಪೂಜಿ ಶಾಲೆಯಲ್ಲಿ ಕ್ವೆರೆಂಟೈನ್ ಮಾಡಲು ಮುಂದಾದಾಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಪುರಸಭೆ ಸದಸ್ಯ ರಾಜು ಮುನ್ನೋಳಿ,ಎ ಕೆ ಪಾಟೀಲ ಮಾತನಾಡಿ ಹುಕ್ಕೇರಿ ನಗರ ಇಲ್ಲಿಯವರಗೆ ಯಾವದೇ ವೈರಸ್ ಇಲ್ಲದೆ ಶಾಂತವಾಗಿದೆ. ಆದರೆ ಬೇರೆ ಕಡೆಯ ಜನರನ್ನು ಇಲ್ಲಿ ತಂದು ಕ್ವೆರೆಂಟೈನ್ ಮಾಡುವದರಿಂದ ಸೋಂಕು ಈ ಭಾಗದಲ್ಲಿ ಹರಡುವ ಸಾದ್ಯತೆ ಇದೆ ಕಾರಣ ಹುಕ್ಕೇರಿ ನಗರ ಮತ್ತು ಸಮಿಪದ ಸ್ಥಳಗಳಲ್ಲಿ ಸಂಯಯಾಸ್ಪದ ವ್ಯಕ್ತಿ ಗಳನ್ನು ಇಲ್ಲಿ ತಂಗಲು ಅವಕಾಶ ನೀಡಬಾರದು. ಇಲ್ಲವಾದರೆ ನಾವು ಉಗ್ರ ಹೋರಾಟ ಮಾಡಲಾಗುವದು ಎಂದರು.
ಇಷ್ಟೇಲ್ಲಾ ಬೆಳವಣಿಗೆಗಳು ನಡೆಯುವಾಗ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು.
Be the first to comment