ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಸುರಪುರ
ಹೌದು ತುಂಬಾ ದಿನಗಳಿಂದ ಸುಮಾರು 4-5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಾಲೂಕಿನ ಕುರುಬನ ತಳ್ಳಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಇಂದು ಕಾಲ ಕೂಡಿ ಬಂದಿದೆ.
ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಸರ್ಕಾರ ನಿರ್ಮಿಸಿರುವ ಈ ಕುಡಿಯುವ ನೀರಿನ ಘಟಕ ನಾಲ್ಕು ವರ್ಷಗಳ ಹಿಂದೆಯೆ ಪ್ರಾರಂಭವಾಗಿ 6-7 ತಿಂಗಳಗಳ ಕಾಲ ಕಾರ್ಯನಿರ್ವಹಿಸಿತ್ತು ನಂತರದ ದಿನಗಳಲ್ಲಿ ವಿದ್ಯುತ್ ಸಂಪರ್ಕ ಸೇರಿದಂತೆ ನಾನಾ ಕಾರಣಗಳಿಂದ ಮಶಿನ್ ಗಳೆಲ್ಲ ತುಕ್ಕು ಹಿಡಿದು ಅಂತ್ಯ ಕಂಡಿದ್ದವು.
ಹೀಗಾಗಿ ದಿನನಿತ್ಯ ಹತ್ತಾರು ಜನರು ತಮ್ಮ ವಾಹನಗಳಲ್ಲಿ 2 ರಿಂದ 3 ಕಿಲೋ ಮೀಟರ್ ಚಿಕ್ಕನಳ್ಳಿ ಗ್ರಾಮಕ್ಕೆ ತೆರಳಿ ಅಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಪ್ರತಿ ದಿನ ಕಷ್ಟ ಪಟ್ಟು ತಂದು ಕುಡಿಯುವ ಪರೀಸ್ಥಿತಿ ಬಂದೊದಗಿತ್ತು.
5 ರೂಪಾಯಿಗಳಿಗೆ 20 ಲೀಟರ್ ನೀರು ದೊರೆಯಲಿದ್ದು ಸಧ್ಯ ಈ ಕುಡಿಯುವ ನೀರಿನಿಂದ ಸಮೀಪದ ಕಚಕನೂರ, ಕನ್ನೆಳ್ಳಿ, ಯಡಹಳ್ಳಿ,ಮಂಗಳೂರು, ಬೈಚಬಾಳ ಗ್ರಾಮದಗಳಿಗೆ ಅನುಕೂಲವಾಗಲಿದೆ.
ಈ ಬಗ್ಗೆ ಸುಮಾರು ಭಾರಿ ಸುರಪುರ ಶಾಸಕ ರಾಜುಗೌಡರಿಗೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ, ಜಿಲ್ಲಾ ಪಂಚಾಯಿತಿ
ಸಿ. ಇ. ಓ. ಶಿಲ್ಪಾ ಶರ್ಮಾ, ತಾಲ್ಲೂಕು ಪಂಚಾಯಿತಿ
ಇ. ಒ. ಜಗದೇವಪ್ಪ ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ AWE ಹನುಮಂತಪ್ಪ ಅಂಬಲಿ,
ಜೆ.ಇ. ಸ್ಪೂರ್ತಿ ಸೇರಿದಂತೆ ಹಲವು ಅಧಿಕಾರಿಗಳ ಗಮನಕ್ಕೆ ತಂದರೂ ಯಾವೊಬ್ಬ ಅಧಿಕಾರಿಗಳು ಕಿಂಚಿತ್ತೂ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯ ಜೀವಿ ಭೀಮಣ್ಣ ಮಾಸ್ತರ.
➡️ಅಂಬ್ರೀಶ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ.
ಮುಂದೆಯೂ ಸಹ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲೆ ಇದ್ದರೂ ನನ್ನ ಗಮನಕ್ಕೆ ತನ್ನಿ.
ನಂತರದಲ್ಲಿ ಸಮಸ್ಯೆ ಗಮನಕ್ಕೆ ತೆಗೆದುಕೊಂಡ ನಮ್ಮ ಅಂಬಿಗ ನ್ಯೂಸ್ ತಂಡ ಸಧ್ಯ ಈಗಿರುವ ತಾಲ್ಲೂಕು ಪಂಚಾಯಿತಿ
ಇ. ಓ. ಅಂಬ್ರೇಶ ಸರ್ ಜೊತೆ ಮಾತನಾಡಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದಾಗ ಮಾನ್ಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಒಂದು ವಾರದ ಒಳಗಾಗಿ ಕೊಟ್ಟ ಮಾತಿನಂತೆ ನಡೆದುಕೊಂಡು ಕುಡಿಯುವ ನೀರಿನ ಸಮಸ್ಯೆಗೆ ನಾಂದಿ ಹಾಡಿದ್ದಾರೆ.
ಸುಮಾರು ವರ್ಷಗಳಿಂದ ನಾನಾ ಕಾರಣಗಳಿಂದ ಬಂದ್ ಮಾಡಲಾಗಿದ್ದು ಶುದ್ಧ ಕುಡಿಯುವ ನೀರು ಇಂದಿನಿಂದ ಗ್ರಾಮದಲ್ಲಿ ಆರಂಭವಾಗಿದ್ದು ಜನತೆ ಸಹಕರಿಸಿ 5 ರೂ ಕೊಟ್ಟು 20 ಲೀಟರ್ ನೀರು ಖರೀದಿಸಿ ಕುಡಿಯುವ ಮೂಲಕ ಆರೋಗ್ಯವಂತರಾಗಿರಲಿ.
➡️ಮಹಿಬೂಬ್ ಜೈನಾಪೂರ (ಮೆಕ್ಯಾನಿಕಲ್ ಎಂಜಿನಿಯರ್)
ನಮ್ಮೂರಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಆರ್ಶನಿಕ ಅಂಶ ಹೆಚ್ಚಿರುವ ಕಾರಣದಿಂದಾಗಿ ನನ್ನ ಮಗನಿಗೆ ಹೊಟ್ಟೆಯಲ್ಲಿ ಕಿಡ್ನಿ ಲಿವರ್ ಬಾವು ಬಂದಿದೆ ಎಂದು ವಿಜಯಪುರದ ಅಶ್ವಿನಿ ಬಿದರಿ ಆಸ್ಪತ್ರೆಯ ವೈದ್ಯರು ತಿಳಿಸಿದರು ಮಗುವಿಗೆ ಶುದ್ಧ ಕುಡಿಯುವ ನೀರು ದಿನನಿತ್ಯ ಕೊಡುವಂತೆ ಸೂಚಿಸಿದ್ದರು ಬಿಜಾಪುರದ ಅಶ್ವಿನ್ ಬಿದರಿ ಆಸ್ಪತ್ರೆಗೆ ದಾಖಲು ಮಾಡಿ 25,000 ರೂಪಾಯಿಗಳು ಖರ್ಚು ಮಾಡಿ ಬಂದ ನಂತರ 2 ತಿಂಗಳುಗಳಿಂದ ನಮ್ಮ ಮಗನಿಗೆ ಯಾವುದೇ ರೀತಿಯ ಹೊಟ್ಟೆ ನೋವು ಲಿವರ್ ಬಾವು ಕಾಣಿಸಿಕೊಂಡಿಲ್ಲ ಹಾಗಾಗಿ ನಮ್ಮ ಗ್ರಾಮದಲ್ಲಿ ಮತ್ತೆ ಕುಡಿಯುವ ನೀರು ಆರಂಭವಾಗಿರುವುದು ತುಂಬಾ ಸಂತೋಷದ ವಿಷಯ.
➡️ಮಲ್ಲಿಕಾರ್ಜುನ ಮಾಸ್ತರ
ಕೆ. ತಳ್ಳಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಅಂಬಿಗ ನ್ಯೂಸ್ ವರದಿಗಾರರು ನಮ್ಮನ್ನು ಸಂಪರ್ಕಿಸಿ ಮನವರಿಕೆ ಮಾಡಿದ್ದರು ಇದನ್ನು ಗಮನಕ್ಕೆ ತೆಗೆದುಕೊಂಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮರುಕಳಿಬಾರದು ಎನ್ನುವ ಉದ್ದೇಶದಿಂದ ಲಾಕ್ ಡೌನ್ ಆದೇಶ ಉಲ್ಲಂಘನೆ ಆಗದಿರಲಿ ಎಂದು ಕೆ. ತಳ್ಳಳ್ಳಿ ಗ್ರಾಮದಲ್ಲಿ ರುವ ಕುಡಿಯುವ ನೀರಿನ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಿದ್ದೇವೆ.
ಇದೇ ಸಂದರ್ಭದಲ್ಲಿ ಚನ್ನಪ್ಪ ಬೆಳ್ಳಿಕಟ್ಟಿ, ಭೀಮಣ್ಣ ಬೋನ್ಹಾಳ,ಮಲ್ಲಿಕಾರ್ಜುನ ಮಾಸ್ತರ, ಲಾಲಸಾಬ್ ಕಂಬಾರ, ಚಂದಪ್ಪ ಹರಿಜನ, ಶರಣಪ್ಪ ಹರಿಜನ, ಮೆಕ್ಯಾನಿಕಲ್ ಎಂಜಿನಿಯರ್ ಮಹಿಬೂಬ್ ಜೈನಾಪೂರ ಸೇರಿದಂತೆ ಕೆ. ತಳ್ಳಳ್ಳಿ ಗ್ರಾಮದ ಹಲವರು ಉಪಸ್ಥಿತರಿದ್ದರು.
Be the first to comment