ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಸುರಪುರ
ಎಪ್ರಿಲ್ .14 ಇಡೀ ಪ್ರಪಂಚದ ಜನರನ್ನು ಕಾಡುತ್ತಿರುವ ಮಹಾಮಾರಿ ಕರೊನಾ ವೈರಸ್ ತಡೆಗಟ್ಟವ ಹಿನ್ನಲೆಯಲ್ಲಿ ಹಗಲಿರಳು ಶ್ರಮಿಸುತ್ತಿರುವ ವೈದ್ಯರು,ಸಿಬ್ಬಂದಿಗಳು,
ಪೊಲೀಸ್ ರು ,ಇನ್ನೀತರ ಅಧಿಕಾರಿಗಳಂತೆಯೇ ಆಶಾ,ಅಂಗನವಾಡಿ ಕಾರ್ಯಕರ್ತೆಯರು ತಮಗೆ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವುದಕ್ಕೆ ಶಾಸಕ ರಾಜುಗೌಡ ಮೆಚ್ಚುಗೆ ವ್ಯಕ್ತ ಪಡಿಸಿದರು.
ಹುಣಸಗಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು ನಾನು ಕ್ಷೇತ್ರದಲ್ಲಿ ಸಂಚರಿಸುವಾಗ ಆಶಾ,ಅಂಗನವಾಡಿ ಕಾರ್ಯಕರ್ತೆಯರು ಸುಡು ಬಿಸಿಲಿನಲ್ಲಿ ತಮಗೆ ಕೊಟ್ಟ ಕೆಲಸವನ್ನು ಜವಾಬ್ದರಿಯಿಂದ ಚಾಚು ತಪ್ಪದೇ ಸರ್ವೇ ಮಾಡುವುದನ್ನು ಗಮನಿಸಿದ್ದೇನೆ.
ಈಗಾಗಲೇ ಬೆಂಗಳೂರ,ಮುಂಬಯಿ ಸೇರಿದಂತೆ ವಿವಿಧ ಭಾಗಗಳಿಗೆ ಗುಳೆ ಹೋಗಿದ್ದ ಜನರು ಹಳ್ಳಿಗಳಲ್ಲಿ ಬಂದಿರುವವರ ಬಂದಿರುವ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಲು ಬಂದಾಗ ಅವರಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಯಕರ್ತೆಯರು ಮನೆ,ಮನೆಗೆ ಭೇಟಿ ನೀಡುವಾಗ ತಮ್ಮ ಸುರಕ್ಷತೆಗೆ ಹೆಚ್ಚು ಒತ್ತು ಕೊಡಬೇಕು ಕಡ್ಡಾಯವಾಗಿ ಮಾಸ್ಕ್ ಹಾಕಿ ಕೊಳ್ಳಿ ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಆಗಾಗ ಕೈಗಳನ್ನು ತೊಳೆಯಲು ಮರೆಯಬೇಡಿ ಎಂದು ಕಿವಿ ಮಾತು ಹೇಳಿದರು.ನಿಮಗೆ ಏನೇ ಸಮಸ್ಯೆ ಆದರೂ ನೇರವಾಗಿ ನನ್ನ ಗಮನಕ್ಕೆ ತನ್ನಿ ಸರಿಪಡಿಸುತ್ತೇನೆ . ತಮ್ಮ ಕುಟುಂಬವನ್ನು ಮರೆತು ಜನರ ಸೇವೆಗಾಗಿ ಜನಮುಖಿಯಾಗಿ ಸೇವೆ ಮಾಡುತ್ತಿರುವ ನಿಮ್ಮ ಹಾಗೂ ನಿಮ್ಮ ಕುಟುಂಬದ ಹಿತವನ್ನು ಕಾಪಾಡಲು ಸದಾ ಸಿದ್ದನಿದ್ದೇನೆ ನೀವು ಭಯ ಪಡುವ ಅಗತ್ಯವಿಲ್ಲ ವೆಂದು ಧೈರ್ಯ ತುಂಬಿದರು.
ತಾಲೂಕಿನ ಜನರ ಸೇವೆ ಮಾಡುತ್ತಿರುವುದಕ್ಕೆ ಆಶಾ,ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಆರೋಗ್ಯಾಧಿಕಾರಿ ಡಾ:ವೆಂಕಪ್ಪನಾಯಕ ,
ವೈದ್ಯಾಧಿಕಾರಿಗಳಾದ ಡಾ: ಧರ್ಮರಾಜ ಹೊಸಮನಿ ,ಡಾ:ಮಹೇಶ್ವರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Be the first to comment