ಜೀಲ್ಲಾ ಸುದ್ದಿ
ಅಂಬಿಗ ನ್ಯೂಸ್ ಸುರಪುರ :-ಕೊರೊನಾ ವೈರಸ್ನಿಂದಾಗಿ ದೇಶದ ಎಲ್ಲಾ ಮಠ ಮಂದಿರಗಳು ಬಾಗಿಲು ಹಾಕಿವೆ. ಅಲ್ಲದೆ ಪ್ರತಿ ವರ್ಷದಂತೆ ಜರುಗುತ್ತಿದ್ದ ಉತ್ಸವ ಹಾಗೂ ಜಾತ್ರೆಗಳನ್ನು ರದ್ದು ಮಾಡಲಾಗಿದೆ. ಇದೀಗ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಶರಣಬಸವೇಶ್ವರ ಜಾತ್ರೆಯ ಏಪ್ರಿಲ್ 17ರಂದು ನಡೆಯಬೇಕಾಗಿದ್ದ ಈ ವರ್ಷದ ಜಾತ್ರಾ ಮಹೋತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.
ದೇಶದಾದ್ಯಂತ ಕೊರೊನಾ ವೈರಸ್ ವಿರುದ್ಧ ಹೋರಾಡುವ ಉದ್ದೇಶದಿಂದ ಲಾಕ್ಡೌನ್ ಆದೇಶ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಇಲ್ಲಿನ ಶರಣಬಸವೇಶ್ವರ ಮಠದಲ್ಲಿ ಏಪ್ರಿಲ್ 17ರಂದು ನಡೆಯಬೇಕಾಗಿದ್ದ ವರ್ಷದ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ಸುರಪುರ ತಹಸೀಲ್ದಾರ್ ನಿಂಗಣ್ಣ ಬಿರದಾರ ಹಾಗೂ ಶ್ರೀ ಶರಣಬಸವೇಶ್ವರ ಕಮಿಟಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನೂ ಇದೇ ಸಂದರ್ಭದಲ್ಲಿ ಮಠದ ಪೀಠಾಧಿಪತಿ ಶ್ರೀ ಶರಣಪ್ಪ ಶರಣರು ಪಿಎಸ್ಐ ಸುದರ್ಶನರಡ್ಡಿ ಕಂದಾಯ ನಿರಕ್ಷ ರಾಜೇಸಾಬ ಗ್ರಾಮಲೆಕ್ಕಾಧಿಕಾರಿ ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment