ಜೀಲ್ಲಾ ಸುದ್ದಿಗಳ
ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ತಹಶಿಲ್ದಾರರವರ ಕಚೇರಿಯಲ್ಲಿ ಡಾ॥ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನಾಚರಣೆ ಜುರುಗಿತು.ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರು ಮಾತನಾಡಿ ಅಂಬೇಡ್ಕರ್ ರವರು ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ ಪ್ರಪಂಚದ ಶ್ರೇಷ್ಠ,ಗಣ್ಯ ವ್ಯಕ್ತಿಯಾಗಿದ್ದಾರೆ.ಅವರ ಸಾಮಾಜಿಕ ಕಳಕಳಿಯ ಪ್ರತಿಫಲವೇ ಸಂವಿಧಾನವಾಗಿದೆ.ಅದು ನಮ್ಮ ದೇಶದ ಆಸ್ಥಿಯಾಗಿದೆ,ಅವರು ಅತ್ಯಂತ ಶ್ರೇಷ್ಠ ಶೈಕ್ಷಣಿಕ ಆಥಿ೯ಕ,ರಾಜಕೀಯ,ಕಾನೂನು ತಜ್ಞರಾಗಿದ್ದರು.ಅವರು ದೇಶದ ಮಹಾ ಆಸ್ಥಿಮಾತ್ರವಲ್ಲ ಪ್ರಪಂಚದ ಆಸ್ಥಿಯಾಗಿದ್ದಾರೆ.
ಅವರು ನಿಮಿ೯ಸಿರುವ ಸಂವಿಧಾನದ ಕಾನುನಿನ ಅಂಶಗಳನ್ನು ಎಲ್ಲರೂ ಪಾಲಿಸೋಣ ಎಂದರು.ತಹಶಿಲ್ದಾರವರ ಕಚೇರಿ ಸಿಬ್ಬಂದಿ,ಪಟ್ಟಣಪಂಚಾಯ್ತಿ ಸದಸ್ಯರು.ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು.ವಿವಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
*ವಿವಿದೆಡೆಗಳಲ್ಲಿ ಆಚರಣೆ-*
ಕೂಡ್ಲಿಗಿ ಪಟ್ಟಣದ ಡಾ॥ಬಿ.ಆರ್.ಅಂಬೇಡ್ಕರ್ ರವರ ವೃತ್ತದಲ್ಲಿ ಪಟ್ಟಣದ ಪೌರಕಾಮಿ೯ಕರು ಡಾ॥ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಿದರು.ಪೌರಕಾಮಿ೯ಕರ ಮುಖಂಡ ಪರಶುರಾಮಪ್ಪ,ಆರೋಗ್ಯಾಧಿಕಾರಿ ಶ್ರೀಮತಿ ಲತಾ ಹಾಗು ಇತರರು ಭಾಗಿಯಾಗಿದ್ದರು.
ತಾಲೂಕಿನ ದೂಪದಳ್ಳಿ ತಾಂಡಾದ ಸಕಾ೯ರಿ ಶಾಲೆಯಲ್ಲಿ ಡಾ॥ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಆಚರಿಸಲಾಯಿತು.ಎಸ್ಡಿಎಮ್ಸಿ ಪಾದಾಧಿಕಾರಿಗಳು,ಶಿಕ್ಷಕರು.ಗಣ್ಯರು ಭಾಗಿಯಾಗಿದ್ದರು.
Be the first to comment