“ಹಳೆಂಬರ ವೀರಭದ್ರಪ್ಪನವರು ಪವಾಡಗಳ ಮಹಾಪುರುಷರು”

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಇಡೀ ಜಗತ್ತಿಗೆ ಕಂಟಕವಾಗಿ ಕಾಡುತ್ತಿರುವ ಕೊರೋನಾ ವೈರಸ್‌ ರೋಗದಿಂದ ದೇಶದ ಪ್ರಸಿದ್ಧ ದೇವರ ಜಾತ್ರೆಗಳು, ಹಬ್ಬಗಳು, ನಿಂತುಹೋಗಿವೇ ಸರಕಾರವೇ ಇವೆಲ್ಲವನ್ನೂ ನಿಷೇಧಿಸಿ ಆದೇಶವನ್ನು ಹೊರಡಿಸಿದೆ. ಆದರಲ್ಲಿಯೂ ಬೀದರ್ ಜಿಲ್ಲೆಯ ಹಳೆಂಬರ ಗ್ರಾಮದ ಪವಾಡ ಪುರುಷ ಶ್ರೀ ವೀರಭದ್ರಪ್ಪವರ ಜಾತ್ರೆಯು ಪ್ರತಿವರ್ಷ ಎಪ್ರಿಲ್ ತಿಂಗಳಲ್ಲಿ ನಡೆತ್ತಾ ಇತ್ತು , ಈ ಕೊರೋನಾ ವೈರಸ್‌ ರೋಗ ಹರಡಿದರಿಂದ ಭಕ್ತರು ಯಾರು ದೇವಾಲಯಗಳಲ್ಲಿ ಹೊಗುವಂತಿಲ್ಲ, ಜಾತ್ರೆಗೆ ಬರುವಂತಿಲ್ಲ, ಸರಕಾರದ ಆದೇಶ ಎಲ್ಲರೂ ಪಾಲಿಸಬೇಕು, ಗೌರವಿಸಬೇಕು, ಈ ಮಹಾಮಾರಿ ರೋಗದಿಂದ ದೇಶದ ಜನತೆ ಸುರಕ್ಷಿತವಾಗಿರಬೇಕು ಜನರ ಜೀವ ಎಲ್ಲಕ್ಕಿಂತ ಮುಖ್ಯ, ಹೀಗಾಗಿ ಮುಂದಿನ ವಷ೯ ಅದ್ದೂರಿಯಾಗಿ ಆಚರಣೆ ಮಾಡುವುದೇ ಎಲ್ಲರ ಮಹಾದಾಶೆವಾಗಿದೆ.

..ಬೀದರ್ ಜಿಲ್ಲೆಯು ಶರಣ ಸಂಸ್ಕೃತಿಗೆ ಹೆಸರುವಾಸಿಯಾಗಿದ್ದ ಜಿಲ್ಲೆಯಾಗಿದ್ದು ಇಲ್ಲಿ, ಅನೇಕ ಖುಷಿ ಮುನಿಗಳು,ಸಾಧು ಸಂತರು,ಜನ್ಮ ತಾಳಿದ ಭೂಮಿದ್ದು ಅಂತವರಲ್ಲಿಯೇ ಹಳೆಂಬರ(ಅಲಿಯಂಬರ) ವೀರಭದ್ರಪ್ಪನವರು ಒಬ್ಬರು, ಇವರು ಬೀದರ್ ತಾಲ್ಲೂಕಿನ ಹಳೆಂಬರ ಗ್ರಾಮದವರಗಿದ್ದು,ಶಿವಶೇಟ್ಟೆ ಎನ್ನುವ ಮನೆತನದಲ್ಲಿ ಜೀತಪ್ಪಾ ಹಾಗೂ ಗ್ಯಾನಮ್ಮರ ದಂಪತಿಗಳ ಉದರದಲ್ಲಿ ಕ್ರಿ.ಶ 1876 77ರ ಸುಮಾರಿಗೆ ಜನ್ಮತಾಳಿದ್ದಾರೆಂದು ತಿಳಿಯಲಾಗಿದೆ, ಬೀದರ ತಾಲ್ಲೂಕಿನ ಮಹಾ ಸಂತರು ಎಂಬ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಬರೆದ ವ್ಯಕ್ತಿ ಚಿತ್ರಣ ಇದಾಗಿದೆ, ಗ್ರಾಮದ ಪರಮ ಪೂಜ್ಯರಾದ ಶ್ರೀ ಯಲ್ಲಪ್ಪಾ ಮುತ್ಯರು ಶ್ರೀ ವೀರಭದ್ರಪ್ಪನವರಿಗೆ ಆಧ್ಯಾತ್ಮಿಕ ಗುರುಗಳಾಗಿ ಲಿಂಗ ಧಿಕ್ಷೆಯನ್ನು ನೀಡಿದರು, ಅದರಂತೆಯೇ ಶ್ರೀಗಳು ಗುರುವಿನ ಮಾಗ೯ದಲ್ಲಿ ನಡೆದು ಯಲ್ಲಪ್ಪಾ ಮುತ್ಯಾರ ಪ್ರೀತಿಗೆ ಶ್ರೀಗಳು ಪಾತ್ರರಾದರು,ಮುಂದೆ ವೀರಭದ್ರಪ್ಪನವರಿಗೆ ಲಿಂಗಾಯತ ಧರ್ಮದ ಪ್ರಕಾರ ಲಿಂಗ ದಿಕ್ಷೆಯನ್ನು ಹರಿಸಿ ಮಗುವಿಗೆ ವೀರಭದ್ರಪ್ಪನೆಂದು ನಾಮಕರಣ ಮಾಡಿದರು.
ನಿಜಾಮರ ಆಡಳಿತ ಇರುವುದರಿಂದ ತನ್ನ ಹುಟ್ಟುರಾದ ಹಳೆಂಬರ ಗ್ರಾಮದಲ್ಲಿಯೇ ಉದು೯ ಭಾಷೆಯಲ್ಲಿ ನಾಲ್ಕನೇ ತರಗತಿವರೆಗೆ ಶಿಕ್ಷಣವನ್ನು ಪಡೆದಿದ್ದಾರೆ ಎಂದು ತಿಳಿಯಬಹುದಾಗಿದೆ.ಪೂಜ್ಯರು ತನ್ನ ತಂದೆ ತಾಯಿ ಹೇಳಿದ ಕೆಲಸಕಾಯ೯ವನ್ನು ಮಾಡುತ್ತಾ ಸಾಯಂಕಾಲ ಗ್ರಾಮದ ಹಿರಿಯರ ಭಜನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು,ಊಟಕ್ಕೂ ಲೆಕ್ಕಿಸದೆ ಭಜನೆಯಲ್ಲಿ ಮಗ್ನರಾಗುತ್ತಿರುವುದನ್ನು ಕಂಡು ತಂದೆಯವರು ತಮ್ಮ ಮನೆಯ ದನ ಕರುಗಳನ್ನು ಕಾಯಲು ತಿಳಿಸಿದರು, ತಂದೆಯ ಅಪ್ಪಣೆಯಂತೆ ಶ್ರೀಗಳು ದನಕರುಗಳನ್ನು ಕಾಯಲು ಪ್ರಾರಂಭಿಸಿದರು,ಅಡವಿಯಲ್ಲಿಯೇ ದನಕರುಗಳನ್ನು ಮೇಯಲು ಬಿಟ್ಟು, ಶ್ರೀಗುರು ದತ್ತನ ಧ್ಯಾನವನ್ನು ಮಾಡುತ್ತಾ ಕುಳಿತುಕೊಳ್ಳುತ್ತಿದ್ದರು.ಸಾಯಂಕಾಲ ಎಂದಿನಂತೆ ಮಂದಿರಕ್ಕೆ ಬಂದು ಭಜನೆಯಲ್ಲಿ ಸೇರುತ್ತಿದ್ದರು,ಒಂದು ದಿವಸ ತನ್ನ ಸ್ವಂತ ಹೊಲದಲ್ಲಿ ಬೆಳೆದು ನಿಂತ ಭತ್ತವನ್ನು ದನಕರುಗಳು ತಿಂದು ಹಾಕಿದವು, ಇದನ್ನೇಲ್ಲನೋಡಿದ ಶ್ರೀಗಳ ತಂದೆವರು ವೀರಭದ್ರಪ್ಪನವರಿಗೆ ಸಿಟ್ಟಿನ ಭರದಲ್ಲಿ ಮೂರು ನಾಲ್ಕು ಏಟು ಹಾಕಿ, ಹೊಟ್ಟೆಗೆ ನಾವು ಎನು ತಿನ್ನಬೇಕೆಂದು ಏರು ಧ್ವನಿಯಲ್ಲಿ ಮಾತನಾಡಿ ಹೊರಟರು,ಭತ್ತವನ್ನು ಹಾಳಾಗಿದ್ದನ್ನು ಕಂಡು ಚಿಂತಿಸತೊಡಗಿದ್ದರು ನಾಲ್ಕೈದು ದಿವಸಗಳ ನಂತರ ಹೊಲಕ್ಕೆ ಹೋದರು, ಅದೇ ಹೊಲದ್ದಲ್ಲಿ ಹಚ್ಚು ಹಸಿರಾದ ಭತ್ತ ಬೆಳೆದಿರುವುದ್ದನ್ನು ಕಂಡು ತಂದೆಯವರಿಗೆ ಆಶ್ಚರ್ಯವಾಗುವುದು.ಅವರು ಭತ್ತವನ್ನು ನಿರೀಕ್ಷೆ ಮಾಡಿದಕ್ಕಿಂತಲೂ ಮೂರು ಪಟ್ಟು ಭತ್ತವನ್ನು ಬೆಳೆಯಿತ್ತು. ತಂದೆಗೆ ತನ್ನ ಮಗನ ದಿವ್ಯ ಶಕ್ತಿಯ ಬಗ್ಗೆ ಅರಿವಾಗತೊಡಗಿತ್ತು.
#ಸಂಸಾರಿಕ ಜೀವನ.
ವೀರಭದ್ರಪ್ಪವನರು ಹೀಗೆ ಧ್ಯಾನಕ್ಕೆ ಕುಳಿತುಕೊಳ್ಳುದ್ದನು ಕಂಡು ತಂದೆಯವರು ಹೀಗೆ ಬಿಟ್ಟರೆ ಮನೆ ಕೆಲಸದಲ್ಲಿ ಆಸಕ್ತಿ ತೋರುವುದಿಲ್ಲವೆಂದು ಮಗನಿಗೆ ಮದುವೆ ಮಾಡಲು ಮುಂದಾಗುವರು, ಪಕ್ಕದ ಗ್ರಾಮವಾದ ರಾಜನಾಳ ಎನ್ನುವ ಗ್ರಾಮದಲ್ಲಿ ತಾಯಮ್ಮ ಎನ್ನುವ ಕನ್ಯೆಯನ್ನು ನೋಡಿ ವೀರಭದ್ರಪ್ಪವರಿಗೆ ವಿವಾಹ ಮಾಡಿದರು.ಆದರೂ ಸಹ ಅವರು ಮೊದಲಿಗಿಂತಲೂ ಹೆಚ್ಚಾಗಿ ಧ್ಯಾನವನ್ನು ಮಾಡಲು ತೊಡಗಿದರು.ತಾಯಮ್ಮ ಅವರು ಸಹ ಪತಿಗೆ ತಕ್ಕ ಸತಿಯಾಗಿ ನಿಂತುಕೊಂಡರು.
…ಪವಾಡಗಳು…..
ಇವರ ತಂದೆ ಜೀತಪ್ಪನವರು ಒಂದು ದಿವಸ ಬೀಗರ ಮನೆಗೆ ತೆರಳುವಾಗ ಮಗನಿಗೆ ಹೊಲದ ಕಡೆ ನೋಡಿಕೋ ಎಂದು ಹೇಳಿ ಹೋದರು.ಜೋಳದ ಹೊಲದಲ್ಲಿ ದನಕರುಗಳು ಬಿಡದಂತೆ ನೋಡಿಕೋ ಎಂದರು. ಆದರೆ ಹಕ್ಕಿಗಳ ಹಿಂಡು ಸಾಲು ಸಾಲಾಗಿ ಬಂದವು, ಜೋಳದ ತೆನೆಯನ್ನು ತಿನ್ನತೊಡಗಿದ್ದವು, ಅದನ್ನು ನೋಡಿ ವೀರಭದ್ರಪ್ಪನವರು ಅವುಗಳಿಗೆ ಮಣ್ಣಿನ ಮಡಿಕೆಯನಿಟ್ಟು, ನೀರು ಕುಡಿಸಿದ್ದರು. ಹೊಟ್ಟೆ ತುಂಬಾ ಜೋಳವನ್ನು ತಿಂದು ಹೊರಟು ಹೋದವು. ಎಂದಿನಂತೆ ಜೀತಪ್ಪನವರು ಹೋಲಕ್ಕೆ ಬಂದು ನೋಡಿದಾಗ ಜೋಳದ ತೆನೆಯು ಬರಾಡಾಗಿದ್ದನ್ನು ಕಂಡು ಶ್ರೀಗಳಿಗೆ ಬೈದರು.ನಾನು ಹದಿನಾಲ್ಕು,ಹದಿನೈದು,ಚೀಲ ಜೋಳವು ಆಗುವುದೆಂದು ನಿರೀಕ್ಷೆ ಮಾಡಿದ್ದೆನೆ. ಆದರೆ ಈಗ ಜೋಳವು ಬರಡಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಮುಂದೆ ಆ ಬರಡು ಜೋಳದ ತೆನೆಯಲ್ಲಿಯೇ ನಿರೀಕ್ಷೆಗಿಂತಲೂ ಹೆಚ್ಚು ಜೋಳದ ರಾಶಿ ಮಾಡಿದಾಗ ಗೊತ್ತಾಗುವುದು.ತಂದೆಯವರಿಗೆ ನನ್ನ ಮಗನಿಗೆ ದೇವರ ಅನುಗ್ರಹವಾಗಿದೆ, ಆದರಿಂದಲೆ ಇಂತಹ ಪವಾಡಗಳನ್ನು ನಡೆಯುತ್ತವೆ,ಎಂದು ಗೊತ್ತಾಗುವುದು, ಶ್ರೀಗಳ ಪವಾಡಗಳನ್ನು ಸುತ್ತ ಮುತ್ತಲಿನ ಜನರು ಗ್ರಾಮದ ಭಕ್ತರು,ಹರುಷದಿಂದ ಕೊಂಡಾಡಿದರು.ಇವರ ದಶ೯ನಕ್ಕೆ ಭಕ್ತ ಸಾಗರವೇ ಹಳೆಂಬರ ಗ್ರಾಮಕ್ಕೆ ಬರತೊಡಗಿತ್ತು.ಗಾಯಮುಖದಲ್ಲಿ ಹುಲಿಯ ದಶ೯ನ,ಮೈಲಾರ ಮಲ್ಲಣ್ಣ ದಶ೯ನ, ಮಾಡಿ, ಬಾಳೂರಿನಲ್ಲಿ ನಾಲ್ಕೈದು ತಿಂಗಳು, ಅನುಷ್ಠಾನ ಗೈದರು.ಧಾರ್ಮಿಕಕ್ಕೆ ಹೆಸರುವಾಸಿಯಾದ ಪಾಪನಾಶ ಸ್ಥಳದಲ್ಲಿ,ಅನುಷ್ಠಾನ ಮಾಡಿದ್ದರೆಂದು, ತಿಳಿಯಲಾಗಿದೆ.ಮಧ್ಯರಾತ್ರಿಯಲ್ಲಿಯೇ ಹಿಂತಿರುಗುತ್ತಿದ್ದರು.

ಶ್ರೀಗಳ ಕೊನೆಯುಸಿರು…….
1946-47ರ ಸುಮಾರಿಗೆ ಹಳೆಂಬರ ಗ್ರಾಮದಲ್ಲಿ ಗಡ್ಧಿ, ರೋಗದಿಂದ ಜನರು ಸಾಯುತ್ತಿದ್ದರು.ವೀರಭದ್ರಪ್ಪನವರು ಬೇರೆ ಕಡೆ ತಪಸ್ಸಿಗೆ ಕುಳಿತುಕೊಂಡಿದ್ದರು, ಗ್ರಾಮದ ಜನರು ಸೇರಿಸಿಕೊಂಡು ಶ್ರೀಗಳಿಗೆ ವಿಷಯವನ್ನು ತಿಳಿಸಿದರು.ಈ ರೋಗದ ದುರಂತದಿಂದ ನಮ್ಮನ್ನು ತಪ್ಪಿಸಿ,ರಕ್ಷಿಸಿ, ಎಂದು ಬೇಡಿಕೊಂಡರು.ವೀರಭದ್ರಪ್ಪನವರು ಜನರಿಗೆ ನಿಮಗೆ ಯಾವುದೇ ರೋಗ ಬರುವುದಿಲ್ಲ ನೀವು ಚೆನ್ನಾಗಿರಿ ಎಂದರು. ಊರಿಗೆ ಬಂದ ರೋಗವು ನನಗೆ ಬರಲಿ ಎಂದು ಶಿವನಲ್ಲಿ ಪ್ರಾಥಿ೯ಸಿಕೊಂಡರು.ಶ್ರೀಗಳನ್ನು ಗ್ರಾಮಕ್ಕೆ ಬರಬೇಕೆಂದು ಬೇಡಿಕೊಂಡರು, ಜನರ ಒತ್ತಡಕ್ಕೆ ಮಣಿದು ಹಳೆಂಬರ ಗ್ರಾಮಕ್ಕೆ ಬಂದರು.ಕೆಲವು ದಿನಗಳ ನಂತರ ಪೂಜ್ಯರಿಗೆ ತೊಡೆಯ ಸಂದಿಯಲ್ಲಿ ಗಡ್ಡೆಯನ್ನು ಹುಟ್ಟಿಕೊಂಡಿತು.ದಿನೆ ದಿನೆ ದೊಡ್ಡದಾಗಿ ಬೆಳೆಯಿತು, ಊರಿಗೆ ಬಂದ ರೋಗ ನನಗೆ ಬರಲಿ ಎಂದ ಶ್ರೀಗಳಿಗೆ ನುಡಿದಂತೆ ಬಂದೇ ಬಿಟ್ಟಿತು.ಪೂಜ್ಯರಿಗೆ ಗೊತ್ತಾಯಿತು, ಈ ಬೇನೆಯಿಂದ ಹೆಚ್ಚುಕಾಲ ಉಳಿಯುದಿಲ್ಲವೆಂದು ಮನಸಾಕ್ಷಿಯಾಗಿತ್ತು.ಸ್ವಂತ ಊರಾದ ಹಳೆಂಬರ ಗ್ರಾಮಕ್ಕೆ ಅವರನ್ನು ಕರೆತಂದರು, ತಂದ ಸ್ವಲ್ಪ ಹೊತ್ತಿನಲ್ಲಿಯೇ ಕ್ರಿ.ಶ 1948 ರ ಸುಮಾರಿಗೆ ಗುರುವಾರದಂದು ಶ್ರೀಗಳು ಲಿಂಗೈಕ್ಯರಾದರು.ಬಾಳೂರ ಗ್ರಾಮದವರು ಸುತ್ತಮುತ್ತಲಿನ ಕೆಲವು ಗ್ರಾಮದವರು ಪೂಜ್ಯರ ಶವವನ್ನು ನಮ್ಮೂರಿಗೆ ಕೊಂಡೊಯ್ಯುತ್ತೆವೆ ಎಂದು ಬಂದರು.ಆದರೆ ಭಕ್ತರು ಕೊನೆಯಲ್ಲಿ ತಿಮಾ೯ನಿಸಿ ಪೂಜ್ಯರ ಅಂತ್ಯಕ್ರಿಯೆ ಹುಟ್ಟುರಾದ ಹಳೆಂಬರ ಗ್ರಾಮದಲ್ಲಿಯೇ ನಡೆಯಬೇಕೆಂದು ತಿಮಾ೯ನ ಮಾಡಿದ್ದರು.ಅದರಂತೆಯೇ ಹಳೆಂಬರ ಗ್ರಾಮದಲ್ಲಿಯೇ ನಡೆಯಿತು.ಬಾಳೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಶ್ರೀಗಳ ಮೇಲಿದ್ದ ಹೂವಿನ ಹಾರವನ್ನು ಭಕ್ತರಿಗೆ ಕೊಟ್ಟರು.ಅವರವರ ಗ್ರಾಮಗಳಲ್ಲಿ ಹಾರವನ್ನು ಒಯ್ದು, ಮಂದಿರವನ್ನು ಕಟ್ಟಿಸಿದರು.ಹಳೆಂಬರ ಗ್ರಾಮದಲ್ಲಿ ಪ್ರತಿವರ್ಷ ಎಪ್ರಿಲ್ ತಿಂಗಳಲ್ಲಿ ಅದ್ದೂರಿಯಾಗಿ ನಡೆಯುವುದು, ಭಕ್ತ ಜನಸಾಗರವೇ ಹರಿದು ಬರತ್ತಾ ಇತ್ತು, ಆದರೆ ಈ ವಷ೯ ಕೊರೋನಾ ವೈರಸ್‌ ಎಂಬ ಮಹಾಮಾರಿ ರೋಗ ಹರಡಿದರಿಂದ ಸರಕಾರವೇ ಎಲ್ಲಾ ಜಾತ್ರೆ, ಉತ್ಸವ, ಹಬ್ಬಗಳು, ಸರಕಾರಿ ಅರೆ ಸರಕಾರಿ ಕಾರ್ಯಕ್ರಮವನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದೆ.ಬಂದ ಭಕ್ತರಿಗೆ ಹುಗ್ಗಿ, ಅನ್ನ,ಸಾಂಬಾರ, ವಿತರಣೆ ಮಾಡುತ್ತಿದ್ದರು.ಶ್ರೀಗಳು ಜೀವಾಂತ ಇರುವಾಲೇ ಧೂಳಯ್ಯಾ ಮುತ್ಯರಿಗೆ ದಿಕ್ಷೆಯನ್ನು ನೀಡಿದರು.ಮುಂದೆ ಶ್ರೀ ವೀರಭದ್ರಪ್ಪನವರ ಮಹಾ ಮಂದಿರವನ್ನು ಅದ್ಬುತವಾಗಿ ಬೆಳೆಯಲು ಮುರಳಿಧರ ಮಹಾರಾಜರು ಕಾರಣರಾದರು.ದೇಶದ ನಾನಾ ಕಡೆ ಪ್ರಸಿದ್ಧ ದೇವಾಲಯಗಳಲ್ಲಿ ಸಪ್ತಾಹ ಆಯೋಜಿಸಿ ಶ್ರೀ ವೀರಭದ್ರಪ್ಪನವರ ತತ್ವ ಸಿದ್ಧಾಂತಗಳನ್ನು ,ಪವಾಡಗಳನ್ನು, ಸತ್ಯತೆಯನ್ನು, ದೇಶದ ಮೂಲೆ ಮೂಲೆಗಳಲ್ಲಿ ಪಸರಿಸಿದರು. ಇವರು ಲಿಂಗೈಕ್ಯರಾದ ನಂತರ ಬಂಡು ಮಹಾರಾಜರು ಪ್ರಸ್ತುತವಾಗಿ ಮಂದಿರದ ಉತ್ತರಾಧಿಕಾರವನ್ನು ವಹಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published.


*