ಕೊರೋನಾ ಎಫೆಕ್ಟ್ :ಮಾಸ್ಕ್ ಹಾಗೂ ಆರೋಗ್ಯ ಕಿಟ್ ಗಳಿಂದ ಹುಡಿತುಂಬೋದು

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಕೊರೋನಾ ಎಫೆಕ್ಟ್ ವಿಶಿಷ್ಟವಾಗಿದೆ.ಹಿಂದು ಸಂಪ್ರದಾಯದಲ್ಲಿ ಮನೆಗೆಬಂದವರು ಅಥಿತಿ ಮಾತ್ರವಲ್ಲ ಅವರೇ ದೇವರು ಎಂಬ ಮಾತಿತ್ತು.ಅಂತೆಯೇ ಅಥಿತಿಯನ್ನು ಬೀಳ್ಕೊಡುವಾಗ ತಮ್ಮ ಶಕ್ತಾನುಸಾರ ಚಿಕ್ಕ ಉಡುಗೊರೆ ಕೊಡೋದು.ಮುತ್ತೈದೆಯರು ಆಗಮಿಾಿದರೆ ಅವರಿಗೆ ಮುತ್ತೈದೆಯ ಸಂಕೇತವಾದ ಅರಶಿನ ಕುಂಕುಮ ಸೆವೆಯೊಂದಿಗೆ ಕುಪ್ಪಾದ ಬಟ್ಟೆಯನ್ನು ಸೇರಿಸಿ ಹುಡಿತುಂಬುತ್ತಾರೆ.ಇದು ಹಿಂದೂ ಆಥಿತ್ಯ ಸಂಪ್ರದಾಯವಾಗಿದೆ.ಕೆಲವು ಪ್ರತಿಷ್ಠಿತ ಮನೆತನಗಳ ಮನೆಗಳಲ್ಲಿ ಹಾಗೂ ಉತ್ತಮ ಆಥಿ೯ಕ ಸ್ಥಿತಿವಂತರ ಮನವಗಳಲ್ಲಿ ಅಲಿಖಿತ ಕಾನೂನು ಆಗಿ ಜಾರಿಯಲ್ಲಿರುತ್ತದೆ.ಅಂತೆಯೇ ಪಟ್ಟಣದ ಬಳ್ಳಾರಿ ರಸ್ಥೆಯಲ್ಲಿರುವ ಶ್ರೀಮತಿ ಕಾವೇರಮ್ಮರಾಮ ಕಾಟ್ವ. ಎಂಬುವರು ತಮ್ಮ ಮನೆಗೆ ಬಂದ ಅಥಿತಿಗಳಿಗೆ ಹಾಗೂ ಆತ್ಮೀಯರಿಗೆ ಆದರ ಆಥಿತ್ಯ ನೀಡುವ ರೂಡಿ ಇದೆ. ಕೊನೆಯಲ್ಲಿ ಅಥಿತಿಗಳನ್ನು ಬೀಳ್ಕೊಡುವ ಸಂದಭ೯ದಲ್ಲಿ ಹುಡಿತುಂಬಿ ಕಳುಹಿಸುವ ಸಂಪ್ರದಾಯ ಪಾಲಿಸುತ್ತಿದ್ದಾರೆ.ಆದರೆ ಈಗ ಕೊರೋನಾ ರೋಗದ ಕುರಿತು ಜಾಗೃತ ವಹಿಸುವಂತೆ ಸಲಹೆ ಸೂಚನೆಗಳನ್ನು ನೀಡುತ್ತಾರೆ.ಜೊತೆಗೆ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಬಳಸುವ ಮಾಸ್ಕ ಹಾಗೂ ಸೂಕ್ತ ಕೊರೋನಾ ಆರೋಗ್ಯ ಕಿಟ್ ನ್ನು ಉಡಿತುಂಬಿ ಜಾಗ್ರೆತಿ ಹೊಂದುವಂತೆ ಸೂಚಿಸಿ ಶುಭಕೋರುತ್ತಾರೆ ಕಾವೇರಮ್ಮ.ಅಥಿತಿಗಳು ಪುರುಷರಾಗಿದ್ದಲ್ಲಿ ರಾಮಕಾಟ್ವರವರು ಮಾಸ್ಕ್ ಹಾಗೂ ಆರೋಗ್ಯ ಕಿಟ್ ನೀಡಿ ಶುಭಕೋರಿ ಜಾಗ್ರೆತಿ ಮೂಡಿಸುತ್ತಾರೆ.ಅಥಿತಿಗಳು ದಂಪತಿಗಳಾಗಿದ್ದಲ್ಲಿ ಇವರಿಬ್ಬರೂ ಸೇರಿ ಅವರಿಗೆ ಆಧರಸಿ ಮಾಸ್ಕ್ ಹಾಗೂ ಆರೋಗ್ಯ ಕಿಟ್ ನೀಡಿ ಅವರಲ್ಲಿ ಕೊರೋನಾ ಕುರಿತು ಜಾಗೃತಿ ಮೂಡಿಸುತ್ತಾರೆ.ಇದನ್ನು ಕೊರೋನಾ ರೋಗದ ಕುರಿತು ಜಾಗೃತಿ ಹೊಂದಲು ಕರೆ ನೀಡುವ ಸಲುವಾಗಿ ವಿಶಿಷ್ಟವಾದ ರೂಡಿಯನ್ನು ಜಾರಿತಂದಿದ್ದಾರೆ.ಅಪ್ಪಟ ಹಿಂದೂ ಸಂಪ್ರದಾಯಗಳನ್ನು ತಪ್ಪದೇ ಪಾಲಿಸಲಾಗುತ್ತದೆ ಅದರ ಜೊತೆಗೆ ಕೊರಾನೋ ಜಾಗೃತಿ ಮೂಡಿಸುವ ಸಂಪ್ರದಾಯವನ್ನೂ ರೂಡಿಗೊಳಿಸಿಕೊಂಡಿದ್ದಾರೆ ಕಾವೇರಮ್ಮನವರು.ಅವರ ಪತಿ ರಾಮಕಾಟ್ವರವರು ಸಂಗ ಪರಿವಾರದ ಸಂಘಟಕರಾಗಿದ್ದಾರೆ,ದೇಶಪ್ರೇಮ ಹಾಗು ಹಿಂದೂ ಸಂಪ್ರದಾಯದೊಂದಿಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ತಮ್ಮ ಪತಿಯವರ ಸಹಕಾರನೇ ಯಶಸ್ಸಿಗೆ ಕಾರಣ ಎನ್ನುತ್ತಾರೆ ಕಾವೇರಮ್ಮ.

Be the first to comment

Leave a Reply

Your email address will not be published.


*