ಜೀಲ್ಲಾ ಸುದ್ದಿಗಳು
ಬೀದರ:- ಕೊರೊನಾ ಸಂಕ್ರಮಣದ ವಿರುದ್ಧದ ಹೋರಾಟದಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಯವರಿಗೆ ಬೀದರ ಸಂಸದರಾದ ಭಗವಂತ ಖೂಬಾ ಅವರು ಅಭಿನಂದನಾ ಪತ್ರವನ್ನು ನೀಡಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇಡೀ ಮನುಷ್ಯ ಸಂಕುಲವನ್ನೇ ಒಂದು ಸಣ್ಣ ವೈರಾಣು ಭಯಭೀತರನ್ನಾಗಿ ಮಾಡಿದೆ.
ಅದರ ನಿಗ್ರಹಕ್ಕೆ ವೈದ್ಯರು, ಪೊಲೀಸ್ ಮತ್ತು ಅನೇಕ ಇಲಾಖಾ ಅಧಿಕಾರಿಗಳು ಹಗಲಿರುಳೂ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ತಾವು ಕೂಡ ಶುಚಿತ್ವಕ್ಕೆ ಒತ್ತು ಕೊಡಲು ಶ್ರಮಿಸುತ್ತಿದ್ದೀರಿ. ನಿಮ್ಮ ಈ ಸೇವೆಯು ಸದಾ ಸ್ಮರಿಸುವಂತದ್ದು ಎಂದು ಸಂಸದರಾದ ಖೂಬಾ ಅವರು ಸ್ವಚ್ಚತಾ ಸಿಬ್ಬಂದಿಯ ಜನಪರ ಕಾರ್ಯವನ್ನು ಶ್ಲಾಘಿಸಿದ್ದಾರೆ.
Be the first to comment