ಟೊಮ್ಯಾಟೋ ಬೆಳೆದು ಮಾರುಕಟ್ಟೆ ಇಲ್ಲದೇ ಕಂಗೆಟ್ಟ ರೈತ ರಾಜೇಸಾಬ್ ಜುಟದಾತ್

ವರದಿ:- ಬಸವರಾಜ ಎಂ ಕೆ ಹುಬ್ಬಳ್ಳಿ

ಜೀಲ್ಲಾ ಸುದ್ದಿಗಳು

 ರೈತರು ಜೀವನೋಪಾಯ ರೂಪಿಸಬೇಕಾದ ಬೆಳೆದ ತರಕಾರಿ ಟೊಮ್ಯಾಟೋ ಹೊಲದಲ್ಲೇ ಕೊಳೆಯುತ್ತಿರುವುದು

ಎಂಕೆ ಹುಬ್ಬಳ್ಳಿ :-ಹೌದು ಈ ಕರೋನಾ ವೈರಸ್ ಎಂಬ ಮಾರಿಯಿಂದ ತರಕಾರಿ ಬೆಳೆಯುವ ರೈತನಿಗೂ ಸಾಕಷ್ಟು ನಷ್ಟವಾಗಿದ್ದು, ಜೀವನ ನಡೆಸುವುದು ಹೇಗೆ ಎಂಬುದಕ್ಕೆ ಕಣ್ಣೀರು ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹದ್ದೇ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ರಾಜೇ ಸಾಬ್ ಜೂಟ್ ದಾತ್ ಎಂಬ ತರಕಾರಿ ಬೆಳೆಯುವ ರೈತನ ಪರಿಸ್ಥಿತಿಯೂ ತುಂಬಾನೇ ಶೋಚನೀಯ ವಾಗಿದೆ. ಸಾಲ ಮಾಡಿ 1 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 2 ಎಕರೆ ಜಮೀನಿನಲ್ಲಿ ಟೊಮ್ಯಾಟೋ ಬೆಳೆಯನ್ನು ಬಿತ್ತುತ್ತಾರೆ.

ಆದರೇ ಕೈ ಬಂದ ತುತ್ತು ಬಾಯಿಗೆ ಬರೋದಿಲ್ಲ ಎಂಬಂತೆ ಟೊಮ್ಯಾಟೋ ಬೆಳೆಗೆ ಸೂಕ್ತ ಮಾರುಕಟ್ಟೆ, ಬೆಲೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವ ಕಾರಣ ಬೆಳೆದ ಟೊಮ್ಯಾಟೋ ಕೊಳೆತು ಹೋಗುತ್ತಿವೆ.

ಸರ್ಕಾರ ನೆಪ ಮಾತ್ರಕ್ಕೆ ಮಾರುಕಟ್ಟೆ , ಸೂಕ್ತ ಬೆಲೆ ನಿಗದಿ ಮಾಡುವುದಾಗಿ ಆದೇಶ ನೀಡಿದೆ. ಆದರೇ ಕಾರ್ಯರೂಪಕ್ಕೆ ಬಂದಿಲ್ಲಾ . ಆದ್ದರಿಂದ ಇಂದು ನಮ್ಮ ಅಂಬಿಗ ನ್ಯೂಸ್ ತಂಡ ಭೇಟಿಕೊಟ್ಟು ಈ ರೈತನ ಸಮಸ್ಯೆಗಳು ಹಾಗೂ ನಷ್ಟಗಳ ಬಗ್ಗೆ ಸಮಗ್ರವಾಗಿ ವರದಿ ತಯಾರು ಮಾಡಿದರು. ಇನ್ನಾದರೂ ಸರ್ಕಾರ , ಸಂಬಂಧಿಸಿದಂತೆ ಇರುವ ಇಲಾಖೆಗಳು ಹಾಗೂ ತೋಟಗಾರಿಕೆ ಇಲಾಖೆ ಸಚಿವರು ಆದ ನಾರಾಯಣ ಗೌಡರು ಈ ರೈತನ ಹಿತ ಕಾಯುವರೇ ಎಂಬುದನ್ನ ಕಾದುನೋಡಬೇಕಿದೆ.

Be the first to comment

Leave a Reply

Your email address will not be published.


*