ಜೀಲ್ಲಾ ಸುದ್ದಿಗಳು
ಕಲಬುರಗಿ : ಕಲಬುರಗಿ ಜಿಲ್ಲೆಯ ನ್ಯಾಯ ಬೆಲೆ ಅಂಗಡಿ ಮತ್ತು ಸಗಟು ಮಾರಾಟ ಮಳಿಗೆಗಳಲ್ಲಿ ಸತ್ಯಾಪನೆ ಮತ್ತು ಮುದ್ರೆ ಇಲ್ಲದ ತೂಕದ ಯಂತ್ರಗಳ ಬಳಕೆ ಮತ್ತು ಕಡಿಮೆ ತೂಕದಲ್ಲಿ ಮಾರುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ 16 ಮೊಕದ್ದಮೆಗಳನ್ನು ದಾಖಲಿಸಿದೆ.
ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ ನೇತೃತ್ವದ ಅಧಿಕಾರಿಗಳ ತಂಡ ಕಳೆದ ಏಪ್ರಿಲ್ 7 ರಿಂದ 10ರ ವರೆಗೆ ಜಿಲ್ಲೆಯಾದ್ಯಂತ ಸುಮಾರು 82 ನ್ಯಾಯ ಬೆಲೆ ಅಂಗಡಿ ಹಾಗೂ ಸಗಟು ಮಾರಾಟ ಮಳಿಗೆಗಳ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದೆ.
ಇದರಲ್ಲಿ ಕಡಿಮೆ ತೂಕದಲ್ಲಿ ಮಾರುತ್ತಿದ್ದದವರ ಮೇಲೆ 6 ಮೊಕದಮ್ಮೆ ಹಾಗೂ ಸತ್ಯಾಪನೆ ಮತ್ತು ಮುದ್ರೆ ಇಲ್ಲದ ತೂಕದ ಯಂತ್ರಗಳ ಬಳಸುತ್ತಿದ್ದಕ್ಕಾಗಿ 10 ಮೊಕದಮ್ಮೆ ಸೇರಿ ಒಟ್ಟು 16 ಮೊಕದಮ್ಮೆ ದಾಖಲಿಸಿ 28000 ರೂ. ಅಭಿ ಸಂಧಾನ ದಂಡ ವಿಧಿಸಲಾಗಿದೆ ಎಂದು ರಫೀಕ್ ಲಾಡಜಿ ತಿಳಿಸಿದಾರೆ.
ದಾಳಿಯ ತಂಡದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ನಿರೀಕ್ಷಕರಾದ ಅಮರೇಶ್ ಹೊಸಮನಿ, ಅಶ್ವತ್ ಕುಮಾರ್ ಪತ್ತಾರ್ ಮತ್ತು ವಿಶ್ವನಾಥ್ ರೆಡ್ಡಿ ಇದ್ದರು.
ನ್ಯಾಯಬೆಲೆ ಅಂಗಡಿಗಳ ತೂಕದಲ್ಲಿ ವ್ಯತ್ಯಾಸವಿದಲ್ಲಿ ಗ್ರಾಹಕರು ದೂರವಾಣಿ ಸಂಖ್ಯೆ: 08472-278678 ಕರೆ ಮಾಡಿ ದೂರು ದಾಖಲಿಸಬಹುದು ಎಂದು ಸಹಾಯಕ ನಿಯಂತ್ರಕ ರಫೀಕ್ ಲಾಡಜಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Be the first to comment