ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲವೆಂಬ ಆರೋಪಗಳು ಕೇಳಿಬಂದಿವೆ.ಈ ಕುರಿತು ಪಟ್ಟಣದ ಛಾಯಗ್ರಾಹಕರೋವ೯ರು ಸಾಮಾಜಿಕ ಕಾಳಜಿಯಿಂದಾಗಿ ಸಾಮಾಜಿಕ ಅಂತರ ನಿಯಮವನ್ನು ಪಾಲಿಸುತ್ತಿಲ್ಲ.ಕೊರೋನಾ ವಿರುದ್ಧದ ಸಕಾ೯ರದ ಸಮರಕ್ಕೆ ಇವರ ಸಹಮತವೇ ಇಲ್ಲವೆಂದು ದೂರಲಾಗಿದೆ.ಸಕಾ೯ರದ ಸೌಮ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ನಿಯಮ ಉಲ್ಲಂಘಿಸಲಾಗಿದೆ.
ಇದು ಖಂಡನೀಯ ಎಂದು ಮಹಿಳಾ ಸಘಗಳು ಆಕ್ರೋಶವ್ಯೆಕ್ತಪಡಿಸಿವೆ. ಪಟ್ಟಣದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಪಡಿತರ ಪಡೆಯಲು ಹೋದಾಗ ಕಂಡ ದೃಶ್ಯಗಳನ್ನು ವೀಡಿಯೊ ಮಾಡಿದ್ದಾರೆ.ಕೊರೋನಾ ನಿಯಂತ್ರಣಕ್ಕಾಗಿ ಸಕಾ೯ರ ಹಗಲಿರುಳು ಶ್ರಮಿಸುತ್ತಿದೆ.ಆದರೆ ಸಕಾ೯ರದ ಆದೇಶಗಳನ್ನು ಗಾಳಿಗೆ ತೂರಿದ್ದಾರೆ.ಗ್ರಾಹಕರಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ನಿವ೯ಹಿಸುವಲ್ಲಿ ಪಟ್ಟಣದ ಈ ನ್ಯಾಯಬೆಲೆ ಅಂಗಡಿಯವರು ವಿಫರಾಗಿದ್ದಾರೆಂದು ಯುವ ಛಾಯಗ್ರಾಹಕ ತೀವ್ರ ಆತಂಕ ವ್ಯೆಕ್ತಪಡಿಸಿದ್ದಾರೆ.ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಕೊರೋನಾ ರೋಗದ ಭೀಕರತೆ ತಿಳಿದಿದ್ದರೂ ಕೆಲ ನ್ಯಾಯಬೆಲೆ ಅಂಗಡಿಯವರು ಸಾಮಾಜಿಕ ಅಂತರ ನಿವ೯ಣೆ ಮಾಡುತ್ತಿಲ್ಲ ಈ ಸಂಬಂದ ತಾಲೂಕು ಆಡಳಿತ ಖುದ್ದು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ಥು ಕ್ರಮಕೈಗೊಳ್ಳುವಂತೆ ಸಾವ೯ಜನಿಕರು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ನ್ಯಾಯಬೆಲೆ ಕೆಲ ನ್ಯಾಯಬೆಲೆ ಅಂಗಡಿಯವರು ಕಾನೂನಿನ ನಿಯಮಗಳನ್ನು ಗಾಳಿಗೆ ತೂರೋದನ್ನು ಹವ್ಯಾಸಮಾಡಿಕೊಂಡಿದ್ದಾರೆ.ಇಲ್ಲಿ ಯಾವುದೇ ನಿಯಮಗಳನ್ಮು ಪಾಲಿಸಿಲ್ಲ.ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜಿಲ್ಲಾಡಳಿತ ಹಾಗು ತಾಲೂಕು ಆಡಳಿತದ ಆದೇಶವನ್ನು ಸಕಾ೯ರದ ಆದೇಶಕ್ಕೆ ಅಗೌರವಿಸಿರೋದು ಸಾಬೀತಾಗಿದೆ ಎಂದು ಸಾವ೯ಕನಿಕರು ದೂರಿದ್ದಾರೆ.
Be the first to comment