ಇಬ್ಬರಲ್ಲಿ‌ ಕೊರೋನಾ ವೈರಾಣು ಸೋಂಕು ದೃಢ

ಸುನೀಲ್ ಭಾವಿಕಟ್ಟಿ ಸುದ್ದಿ ಸಂಪಾದಕರು ಬೀದರ

ಬೀದರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮದ 35 ವರ್ಷದ ವ್ಯಕ್ತಿ ಹಾಗೂ ಅವನ 11 ವರ್ಷದ ಮಗಳಲ್ಲಿ ಕೊರೋನಾ ವೈರಾಣು ಸೋಂಕು ದೃಢ ಪಟ್ಟಿದೆ.
ಕೊರೋನಾ ವೈರಾಣು ಸೋಂಕು ದೃಢಪಟ್ಟ 35 ವರ್ಷದ ವ್ಯಕ್ತಿಯು ಪ್ರಕರಣ ಸಂಖ್ಯೆ 169ರ ವ್ಯಕ್ತಿಯ ಸಹೋದರರಾಗಿದ್ದು, ಪ್ರಸ್ತುತ ತಂದೆ ಮತ್ತು ಮಗಳು ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಐದು ವ್ಯಕ್ತಿಗಳಲ್ಲಿ ಕೊರೋನಾ ವೈರಾಣು ಸೋಂಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಕೇರಳ ರಾಜ್ಯದ ನಿವಾಸಿ ಹಾಗೂ ಉಳಿದ ನಾಲ್ಕು ಜನರು ಹೊಸಕೋಟೆ ತಾಲ್ಲೂಕಿನ ಬೈಲನರಸಾಪುರ ಗ್ರಾಮದ ನಿವಾಸಿಗಳಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*