ಕೊರೋನಾ ಎಫೆಕ್ಟ್-ಬಸವಳಿದ ಅನಾಥ ಪ್ರಾಣಿಗಳಿಗೆ ಅನ್ನದಾತೆ ಬಳ್ಳಾರಿಯ ಅನಿತಾ.ಎಮ್ ರಾಜ್

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಪಟ್ಟಣದಲ್ಲಿ ಯುವತಿಯೊವ೯ಳು ನಿತ್ಯ ಮೂಕ ಪ್ರಾಣಿಗಳಿಗೆ ತನ್ನಿಂದ ಅನ್ನ ನೀಡುವ ಮೂಲಕ ಅವುಗಳಿಗೆ ಅನ್ನದಾತೆಯಾಗಿದ್ದಾಳೆ.ಬಳ್ಳಾರಿ ಬಾಣಪ್ಪಬಾವಿ ರೆಡ್ಡಿ ಸ್ಟೀಟ್.ರಾಧಿಕಾ ಚಿತ್ರಮಂದಿರದ ಹತ್ತಿರ ಎಸ್ಬಿಐ ಎಟಿಎಂ ಹತ್ತಿರ ವಾಸ ಇರೋ ಇವರು ಪ್ರಮುಖ ಬೀದಿಗಳ ಮೂಲಕ ಭ್ರೂಸ್ ಪೇಟೆ ಪೊಲೀಸ್ ಠಾಣೆವರೆಗೂ ನಿತ್ಯ ಬೆಳಗಿನ ಜಾವ ಹಾಗೂ ಸಾಯಂಕಾಲದ ಸಮಯದಲ್ಲಿ ದಿನದ ಎರಡೊತ್ತೂ ವಾಯುವಿಹಾರಕ್ಕಾಗಿ ಬರುತ್ತಾರೆ.

ಅವರು ಬಂದು ಹೋಗುವ ಮಾಗ೯ಮಧ್ಯದಲ್ಲಿ ಯಾವುದಾದರೂ ಅನಾಥ ಪ್ರಾಣಿ ಕಂಡರೆ ಸಾಕು ಅದಕ್ಕೆಂದು ಅವರಲ್ಲಿಯ ಬ್ಯಾಗಲ್ಲಿ ಆಹಾರ ರೆಡಿ ಇರುತ್ತದೆ.ಇದರಂತೆಯೇ ನಿತ್ಯವೂ ಎರೆಡು ಹೊತ್ತು ಹತ್ತು ಹಲವು ಬೀದಿನಾಯಿಗಳಿಗೆ ಅವುಗಳು ಇಷ್ಟಪಡಬಹುದಾದ ಆಹಾರವನ್ನು ತಾವೇ ಮನೆಯಲ್ಲಿ ತಯಾರಿಸಿಕೊಂಡು ಬಂದು ಉಣಬಡಿಸುತ್ತಾರೆ. ಬೀದಿಬದಿಯ ನಾಯಿಗಳೆಂದು ಅಲಸ್ಯ ತೋರದೇ ಅವುಗಳಿಗೆ ತಕ್ಕಷ್ಟು ಶಿಸ್ಥುಬದ್ಧವಾಗಿ ಸ್ವಚ್ಚತೆಯೊಂದಿಗೆ ಆಹಾರ ನೀಡುತ್ತಾರೆ ಅನಿತಾರವರು. ದಾರಿಮಧ್ಯ ಸಿಗುವ ಗೋವುಗಳನ್ನು ಮೈದಡವಿ ಅವುಗಳಿಗೆ ತಿನ್ನಲು ಯೋಗ್ಯ ತಿನಿಸು ತಿನ್ನಿಸುತ್ತಾರೆ. ಅವುಗಳಲ್ಲಿಯೇ ದೇವರನ್ನು ಕಾಣಬೇಕಿದೆ.ಅನ್ನ ಜೊತೆ ಸಾಂಬಾರು ಮೊಟ್ಟೆ ಹೀಗೆ ನಾಯಿಗಳಿಗೆ ಇಷ್ಟವಾದ ಆಹಾರವನ್ನು ಹಾಕುವ ಮೂಲಕ ಅವುಗಳ ಪಾಲಿಗೆ ಅನ್ನದಾತೆಯಾಗಿದ್ದಾಳೆ.ನಾಯಿ ಅಥವಾ ಆಕಳುಗಳಲ್ಲಿ ಅನಾರೋಗ್ಯ ಕಂಡುಬಂದಲ್ಲಿ ಶೀಘ್ರವೇ ಸಂಬಂಧಿಸಿದ ಪಶು ವೈಧ್ಯರ ಸಲೆಹೆಯಂತೆ ಅವುಗಳಿಗೆ ಅವರೇ ಚಿಕಿತ್ಸೆ ನೀಡುತ್ತಾರೆ.ತಾವು ವಾಸ ಇರೋ ಮನೆಯ ಹತ್ತಿರ ಬರುವ ಆಕಳು ಹಾಗೂ ಕೋತಿ,ಪಕ್ಷಿಗಳಿಗೆ ಅವುಗಳಿಗೆ ಯೋಗ್ಯವಾದ ತಿನಿಸನ್ನು ಕೊಡೋ ಮೂಲಕ ಅನಾಥ ಪ್ರಾಣಿ ಪಕ್ಷಿಗಳ ಪಾಲಿಗೆ ಅನಿತಾ ಎಮ್.ರಾಜು ರವರ ಪ್ರಾಣಿ ಪ್ರೇಮ ಎಂತವರನ್ನೂ ಛಕಿತರನ್ನಾಗಿಸುತ್ತದೆ.

ನೆಂಟರು ಉಣ್ಣುವುದನ್ನು ಸಹಿಸಿಕೊಳ್ಳದೇ ಹೊಟ್ಟೆಕಿಚ್ಚು ಪಡುವ ಖಟು ಮನೋಭಾವದವರಿದ್ದಾರೆ. ಮಕ್ಕಳು ಹೆತ್ತವರಿಗೆ ತುತ್ತನ್ನ ನೀಡಲು ಹತ್ತುಸಾರಿಯೋಚಿಸುವ ಈ ಕಾಲದಲ್ಲಿ.ತಾಯಿ ತನ್ನ ಕರುಳಿನ ಕುಡಿಗೆ ತನ್ನ ಎದೆಹಾಲುಣಿಸಬೇಕು.ಅದಿರಲಿ ಅನ್ನವನುಣಿಸಲೂ ಸಹ ಅವರಲ್ಲಿ ತಾಳ್ಮೆ ಇಲ್ಲವಾಗಿದೆ. ಈಗಿನವರ್ಯಾರೂ ಮಕ್ಕಳ ಲಾಲನೆ ಪಾಲನೆ ಮಾಡಲಾರರು.ಈಗಿನ ಯುವತಿಯರು ಮಕ್ಕಳ ಪೋಷಣೆ ಎಂದರೆ ಮೂಗುಮುರಿಯುವುದು ಸಹಜವಾಗಿದೆ ಎನ್ನುತ್ತಾರೆ. ಇಂತಹ ಸಂದಭ೯ದಲ್ಲಿ ಅನಿತಾ ಎಮ್.ರಾಜುರವರು ಬೀದಿಯಲ್ಲಿರುವ ಅನಾಥ ಮೂಕ ಪ್ರಾಣಿಗಳಿಗೂ ಈ ಯುವತಿ ಮಾತೆಯ ಮಮಕಾರದೊಂದಿಗೆ ಸ್ವತಃ ಅವುಗಳಿಗೆ ಆಹಾರ ತಿನ್ನಿಸಿ ಅವುಗಳ ಮೈದಡವಿದರೆ ತಮಗೆ ಅದೇನೋ ಉಲ್ಲಾಸವಂತೆ.ಮನಶ್ಯಾಂತಿಗಾಗಿ ನಿತ್ಯ ಎರಡೊತ್ತು ಪ್ರತಿಸಲಕ್ಕೂ ಒಂದು ತಾಸು ಕಾಲ ಅವುಗಳೊಂದಿಗೆ ಕಾಲಕಳೆಯುತ್ತಾರೆ. ಅವುಗಳೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವ ವಿಶಿಷ್ಟವಾದ ಗುಣವನ್ನು ಅನಿತಾ ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಅವರು ಮಲಗಿರೋ ನಾಯಿಯನ್ನು ಮೈದಡಕಿ ಎಬ್ಬಿಸಿ ಪೇಪರ್ ಅಥವಾ ರಟ್ಟನ್ನು ಹಾಸುತ್ತಾರೆ.ಅದರಲ್ಲಿ ಅವುಗಳಿಗಾಗಿ ತಾವೇ ಮನೆಯಲ್ಲಿ ತಯಾರಿಸಿ ತಂದಿರುವ ಅನ್ನವನಿಕ್ಕುತ್ತಾರೆ.ಮರಿಗಳಿಗೆ ಅವರೇ ತಿನಿಸುತ್ತಾರೆ.ಇವರ ಪ್ರಾಣಿ ಪ್ರೀತಿ ದೇವರಿಗೇ ಪ್ರೀತಿಯಾಗಿದೆ.ಅವುಗಳ ನಿಶ್ಕಕಲ್ಮಷ ಕಣ್ಣಿನಲ್ಲಿ ತನ್ನ ಪ್ರತಿಭಿಂಬವನ್ನು ಕಾಣುವ ಹವ್ಯಾಸವನ್ನಿಟ್ಟಿಕೊಂಡಿದ್ದಾರೆ. ಅವರು ಇದೇ ರೀತಿ ತಾವು ಚಿಕ್ಕವರಿದ್ದಾಗಿನಿಂದ ಅಭ್ಯಾಸಮಾಡಿಕೊಂಡು ಬಂದಿದ್ದು.ಅದನ್ನು ಇನ್ನೂ ಮುಂದುವರೆಸಿಕೊಂಡು ಹೋಗುವುದರಲ್ಲಿ ಆತ್ಮಸಂತೃಪ್ತಿ ಇದೆಯಷ್ಟೇ ಎನ್ನುತ್ತಾರೆ ಎಂ.ಬಿ.ಎ ವಿದ್ಯಾಥಿ೯ ಪ್ರಾಣಿ ಪ್ರೆಮಿ ಕುಮಾರಿ ಅನಿತಾ ಎಮ್.ರಾಜ.ಬಾಯಿ ಇರೋ ಮನುಷ್ಯ ಹಸಿದಾಗ ಅನ್ನ ಕೇಳಿ ಪಡೆದು ತಿನ್ನುತ್ತೇವೆ.ಆದರೆ ಅವುಗಳು ಮೂಕಪ್ರಾಣಿಗಳಾದರೂ ಅವು ನಿರುಪದ್ರವಿಗಳು,ನಾವು ಕೊಡೋ ಅನ್ನಕ್ಕೆ ಪ್ರತಿಯಾಗಿ ಅವು ನಮಗೆ ಏನನ್ನಾದರೂ ಪ್ರತಿಫಲವಾಗಿ ನೀಡುವ ಹಂಬಲ ವ್ಯಕ್ತಪಡಿಸುತ್ತವೆ ಎನ್ನುತ್ತಾರೆ ಅನಿತಾ.ಮನುಷ್ಯ ಭಾವನೆಗಳನ್ನು ಕಳೆದುಕೊಂಡು ಮೃಗವಾಗುತ್ತಿದ್ದಾನೆ. ಉಂಡಮನೆಗಳಿಗೆ ಕೆಡುಕು ಮಾಡುವ ಅಥವಾ ದ್ರೋಹ ಬಗೆಯುತ್ತಾನೆ.ಹಾಗಾಗಿ ಪ್ರಾಣಿಗಳಿಗಿಂತಲೂ ಮನುಷ್ಯ ಕೀಳು, ಪ್ರಾಣಿಗಳು ಭಾವಜೀವಿಗಳು ತುಂಬಾ ಸೂಕ್ಷ್ಮ ಬುದ್ದಿಯನ್ನು ಹೊಂದಿರು ತ್ತವೆ ಎನ್ನುತ್ತಾರೆ ಅನಿತಾ. ಅನಿತಾರ ಪ್ರಾಣಿಪ್ರೆಮವನ್ನು ನಿತ್ಯ ಗಮನಿಸಿರುವ ಭ್ರೂಸ್ ಪೇಟೆ ಪೊಲೀಸ್ ಠಾಣೆ ಪೊಲೀಸ್ ಪೇದೆ ಕೆ.ರಾಮಪ್ಪ ಮಾತನಾಡಿ ಮೂಕ ಪ್ರಾಣಿಗಳೊಂದಿಗೆ ಇವರದು ಕಲ್ಪನೆ ಮೀರಿದ ಆತ್ಮೀಯತೆ,ಪ್ರಾಣಿಪ್ರೇಮ ಎಲ್ಲಿಯೂ ಕಂಡಿಲ್ಲ ಯಾರಲ್ಲಿಯೂ ತಾವು ಈವರೆಗೂ ಕಂಡಿಲ್ಲ ಎಂದು ರಾಮಪ್ಪ ನುಡಿದಿದ್ದಾರೆ. ಮನುಷ್ಯನ ಮನಸ್ಸಿನ ಭಾವನೆಗಳನ್ನು ಪ್ರಾಣಿಗಳು ಬೇಗ ಗ್ರಹಿಸಿಕೊಳ್ಳುವುದ ರಿಂದಾಗಿ ಹೆಚ್ಚಾಗಿ ಸಂಪಕ೯ಕ್ಕೆ ದೊರಕುತ್ತವೆ.ಅವುಗಳ ಲಾಲನೆ ಪಾಲನೆಯಲ್ಲಿ ತಮಗೆ ಮನಸ್ಸಂತೋಷವಿದೆ ಎನ್ನುತ್ತಾರೆ ಅನಿತಾ.ತಮ್ಮ ಮನೆಯಲ್ಲಿ ಬೆಕ್ಕು ನಾಯಿಗಳನ್ನು ತಾವು ಸಾಕಿದ್ದು.ಕೊರೋನಾ ಲಾಕ್ ಡೌನ್ ಪರಿಣಾಮವಾಗಿ ಬೀದಿನಾಯಿಗಳ ಪಾಡು ಮತ್ತು ಬಿಡಾಡಿ ದನಗಳಿಗೆ ಆಹಾರ ಸಿಗುತ್ತಿಲ್ಲ ಈ ಕಾರಣಕ್ಕಾಗಿ ಮಾನವಿಯತೆ ದೃಷ್ಟಿಯಿಂದಾಗಿ ತಾವು ಅವುಗಳ ಕುರಿತು ಹೆಚ್ಚು ಕಾಳಜಿವಹಿಸುತ್ತಿರುವುದಾಗಿ. ಅವುಗಳ ಲಾಲನೆ ಪಾಲನೆಯಲ್ಲಿ ತಮಗೆ ಮನಸ್ಸಂತೋಷವಿದೆ ಎನ್ನುತ್ತಾರೆ ಯುವತಿ ಅನಿತಾ ಎಮ್.ರಾಜ್. *ವಿಳಾಸ-* ಅನಿತಾ ಎಮ್ ರಾಜು.ತಂದೆ ಮೋಹನ್ ಬಾಣಪ್ಪಬಾವಿ ರೆಡ್ಡಿ ಸ್ಟೀಟ್.ರಾಧಿಕಾ ಚಿತ್ರಮಂದಿರ ಹತ್ತಿರ,ಎಸ್.ಬಿ.ಐ ಏಟಿಎಂ ಬಳಿ,ಬಳ್ಳಾರಿ ಪಟ್ಟಣದಲ್ಲಿ ವಾಸವಿದ್ದಾರೆ.

Be the first to comment

Leave a Reply

Your email address will not be published.


*