ಜೀವ ಇದ್ದರೆ ಜೀವ,ಲಾಕ್ ಡೌನ್ ಸವ೯ರೂ ಪಾಲಿಸೋಣ-ದಲಿತ ಮುಖಂಡ ಈಶ್ವರಪ್ಪ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು,ಹುಡೇಂ ಉಪ ಆರೋಗ್ಯ ಕೇಂದ್ರ ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರ ಇರುವ ಸಿದ್ದಾಪುರ ಗ್ರಾಮದಲ್ಲಿ ಜನತೆಗೆ ಕೊರೋನಾ ಕುರಿತು ಮಾಹಿತಿ ಹಾಗು ಜಾಗೃತಿ ನೀಡಲಾಯಿತು.ದಲಿತ ಸಂಘಷ೯ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಡಿ.ಎಂ.ಈಶ್ವರಪ್ಪ ಮಾತನಾಡಿದರು.ಕೊರೋನಾ ಚೀನಾದ ಪಾಪದ ಕೂಸಾಗಿದೆ.ಸೋಂಕಿತರು ಬದುಕಿದ್ದು ಅವರು ಸವಿನ ಕದತಟ್ಟಿ ಬಂದಿದ್ದಾರೆ.ಜೀವ ವಿದ್ದರೆ ಜೀವನ ಮಾಡಬಹುದು.ಕಾರಣ ಆರೋಗ್ಯ ಇಲಾಖೆ ಸೂಚಿಸಿರುವ ಎಲ್ಲಾ ಸೂಚನೆಗಳನ್ನು ಮತ್ತು ಸಕಾ೯ರ ವಿಧಿಸಿರುವ ಲಾಕ್ ಡೌನ್ ಹಾಗೂ144ಸೆಕ್ಷನ್ಎಲ್ಲರೂ ಪಾಲಿಸಲೇಬೇಕಾಗಿದೆ ಎಂದರು.

ಆರೋಗ್ಯ ಸಹಾಯಕ ಪ್ರಕಾಶ ಮಾತನಾಡಿ.ಔಷಧಿ ಇಲ್ಲದ ಕೊರೋನಾ ರೋಗ ಕುರಿತು ಭಯ ಬೇಡ ಜಾಗೃತಕ್ರಮಗಳನ್ನು ಪಾಲಿಸಿದ್ದಲ್ಲಿ ಆತಂಕ ಪಡುವ ಅಗತ್ಯವಿಲ್ಲ.ಅಪರಿಚಿತರ ಬಗ್ಗೆ ವಿಶೇಷ ಗಮನವಿಡಿ,ಅಗತ್ಯ ವಿದ್ದಲ್ಲಿ ಉಪ ಆರೋಗ್ಯಕೆಂದ್ರ ಅಥವಾ ಪೊಲೀಸ್ ಠಾಣೆಗೆ ಸಪಕಿ೯ಸಿ ನೆರವು ಪಡೆಯಬಹುದಾಗಿದೆ ಎಂದರು.ಆರೋಗ್ಯ ಸಹಾಯಕಿ ಅನಿತಾ.ಗ್ರಾಮಪಂಚಾಯ್ತಿ ಸದಸ್ಯ ಶಿವಪ್ರಸಾದ.ಅಂಜಿನಪ್ಪ.ಕೆ.ಟಿ.ರವಿಕುಮಾರ.ಆಶಾಕಾಯ೯ಕತೆ೯ ಗೀತಮ್ಮ.ಅಂಗನವಾಡಿ ಶಿಕ್ಷಕಿ ಭಾಗ್ಯಮ್ಮ.ಗ್ರಾಮದ ಮುಖಂಡರಾದ ವೀರಭದ್ರಪ್ಪ.ಗೊಂಚಿಗೇರ ನಾಗೇಶ.ಜಯಪ್ಪ.ಲೋಕೇಶಪ್ಪ.ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*