ಜಗತ್ತಿನಲ್ಲಿ ಕೊರೋನಾದೇ ಹವಾ,,ಮನೆಯಲ್ಲಿದ್ದವರೇ ಶೂರರು.!ಅಶಕ್ತರಿಗೆ ನೆರವಾಗುವವರೇ ದಾನ ಶೂರರು..!! ಅದನ್ನು ಬಿತ್ತರಿಸುವವರೇ ಮಹಾ ಶೂರರು..!!!

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಅಂಕಣ

ಬಳ್ಳಾರಿ ಜಿಲ್ಲೆ ಎಂದರೆ ಇತ್ತೀಚೆಗೆ ನೆನಪಿಗೆ ಬರುವುದು ಗಣಿಧಣಿ ಜನಾಧ೯ನರೆಡ್ಡಿ. ಭಾರೀ ತಾಪಮಾನ ಹಾಗೂ ಭಾರೀ ಬಿಸಿಲು.ಹೆಸರಾಂತ ಕವಿಗಳು. ಪ್ರಖ್ಯಾತ ಕಲಾವಿದರು.ಹುಣುಸೆ ಉತ್ಪನ್ನ.ಜೀನ್ಸ್ ಉಧ್ಯಮಕ್ಕೆ ಬಳ್ಳಾರಿ ಹೆಸರಾಗಿದೆ.ಹಲವು ಸ್ವತಂತ್ರ ಹೋರಾಟಗಾರರನ್ನು ಜಿಲ್ಲೆ ಹೊಂದಿತ್ತು.ಮಹಾತ್ಮಗಾಂಧಿ ಚಿತಾಭಸ್ಮ ಸ್ಮಾರಕ, ಕರಡಿದಾಮ,ಹಂಪೆ.ಇತ್ತ್ಯಾದಿ.ರಾಜ್ಯ,ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ವೈಶಿಷ್ಟ್ಯತೆಯೊಂದಿಗೆ ರಾಜಕೀಯ ರಂಗದಲ್ಲಿ ಗುರಿತಿಸಿಕೊಂಡಿರುವ ಅನೇಕ ರಾಜಕಾರಣಿಗಳನ್ನು ಬಳ್ಳಾರಿ ಹೊಂದಿದೆ.ಇತ್ತೀಚಿನ ಅತೀ ಪ್ರಭಾವೀ ರಾಜಕಾರಣಿ ಗಣಿಧಣಿ.ಅವರು ಶ್ರೀ ವೆಂಕಟೇಶ್ವರನಿಗೆ ಹಲವು ಕೋಟಿಗಳಷ್ಟು ಬೆಲೆಬಾಳುವ ಕಿರೀಟಕೊಟ್ಟರು ಆದ್ರೆ ತಮ್ಮನ್ನು ತಮ್ಮಕುಟುಂಬವನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಎತ್ತರದ ಸ್ಥಾನಕ್ಕೆ ಕೊಂಡೊಯ್ದಿದೆ ಜಿಲ್ಲೆ. ಜಿಲ್ಲೆಯ ಸಮಸ್ಥ ಜನತೆಗೆಲ್ಲಾ ಸುರಕ್ಷಾ ಸಾಮಾಗ್ರಿಗಳನ್ನು ಕೊಡುವಷ್ಟು ಶಕ್ತಿಯನ್ನು ಅವರಲ್ಲಿ ಬಳ್ಳಾರಿ ತುಂಬಿದೆ.ತಾವು ಪ್ರತಿನಿಧಿಸಿದ್ದ ಕ್ಷೆತ್ರದ ಜನತೆಗೆ ಕೊರೋನಾದಿಂದ ದೂರ ಇರೋಕೆ ಬೇಕಾಗಿರೋ ಗೇಣುದ್ದ ಅರಿವೆ ಕೊಡೋ ಮೂಲಕ ಕ್ಷೇತ್ರದ ಜನತೆಯ ಋಣ ತೀರಿಸುವ ಸನ್ನಿವೇಶ ಕೂಡಿಬಂದಿದೆ.ಸದುಪಯೋಗ ಪಡದುಕೊಳ್ಳಬೇಕಿದೆ ಅವರು. ಅವರಂತೆಯೆ ಶ್ರೀಮಂತಿಕೆಯ ಉಳ್ಳವರೆಲ್ಲರೂ ಈ ಕಷ್ಟದ ಕಾಲದ ಗಂಭೀರತೆಯನ್ನು ತಿಳಿದು ದಾನ ಧಮ೯ಮಾಡಲು ಮನಸ್ಸು ಮಾಡಬೇಕಿದೆ.ಇದು ದಾನ ಧಮ೯ಕ್ಕೆ ಸಂಬಂಧಿಸಿದಂತೆ ಸಾಂದಭಿ೯ಕವಾಗಿ ಬಳ್ಳಾರಿ ಮತ್ತು ಗಣಿಧಣಿ ವಿಚಾರ ಪ್ರಸ್ಥಾಪಿಸಲಾಗಿದೆ ಆಷ್ಟೇ. ಇದನ್ನು ಅನಗತ್ಯ ಅನ್ಯರೀತಿಯಲ್ಲಿ ಅಥ೯ಕಲ್ಪಿಸಿಕೊಳ್ಳುಬಾರದಾಗಿದೆ.ಇಂತಹ ಆಗಭ೯ ಶ್ರೀಮಂತರು ಎಲ್ಲಾ ಜಿಲ್ಲೆಗಳಲ್ಲಿ ಎಲ್ಲಾ ಪಕ್ಷಗಳಲ್ಲಿದ್ದಾರೆ. ರಾಜ್ಯದ ಬಹುತೇಕ ತಾಲೂಕುಗಳಲ್ಲಿದ್ದಾರೆ. ಅವರೂ ಕೂಡ ಈ ವಿಷಯಕ್ಕೆ ಪಾತ್ರದಾರಿಗಳು.ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿಯೂ ಮತ್ತು ಕಿರಿದಾದ ಗ್ರಾಮದಿಂದ ಬೃಹತ್ ನಗರ ಪ್ರದೇಶಗಳಲ್ಲಿ.ಗ್ರಾಮ ಪಂಚಾಯ್ತಿ ಸದಸ್ಯ ನಿಂದ ಕೆಲ ಪ್ರಭಾವಿ ರಾಜ್ಯ ಕೇಂದ್ರ ಸಚಿವರು.ಕೆಲ ಶಾಸಕರು ಸಂಸದರು ಕೊರೋನಾ ವಿಷಯದಲ್ಲಿ ಜನರೊಂದಿಗಿನ ಸಂಬಂಧ ಅಷ್ಟಕ್ಕಷ್ಟೇ.ಕೊರೋನಾದಿಂದ ದೂರವಿರಲು ಪ್ರತಿಯೊಬ್ಬರೂ ಬಳಸಲೇಬೇಕಾದ ಸುರಕ್ಷತೆಗಾಗಿ ವೈಧ್ಯರು ಸೂಚಿಸಿರುವ ಅಗತ್ಯ ಸಲಕರಣೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾಯ೯ವನ್ನು ಮಾಡಬಹುದಾಗಿತ್ತು. ತಮ್ಮ ಸ್ವಂತ ಹಣದಿಂದ ಜನರಿಗೆ ಕೊಡಿಸಲಿಕ್ಕಾಗದಿದ್ದರೂ ಮತದಾರರ ಪಟ್ಟಿಗನುಗುಣವಾಗಿ ಪಡಿತರ ಚೀಟಿ ಆಧಾರದಂತೆ ಸಕಾ೯ರದಿಂದಾದರೂ ಕೊಡಿಸುವ ಕೆಲಸ ಮಾಡಬಹುದಾಗಿತ್ತು.ಬಿಪಿಎಲ್ ಹೊಂದಿರುವ ಬಡವರಿಗೆ ಜೀವನಕ್ಕೆ ಬೇಕಾಗಿರೋ ಅಕ್ಕಿಗಿಂತ.ಜೀವ ತೆಗಿಬಹುದಾದ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ ಮತ್ತು ಇತರೆ ಸುರಕ್ಷಾ ಸಾಮಾಗ್ರಿಗಳ ಅಗತ್ಯ ಇದೆ.ಅವುಗಳನ್ನು ನ್ಯಾಯಬೆಲೆ ಅಂಗಡಿಯ ಮೂಲಕ ಉಚಿತವಾಗಿ ನೀಡುವ ಕಾಯ೯ವನ್ನು ಸಕಾ೯ರ ಶೀಘ್ರವೇ ಮಾಡಬೇಕಿದೆ. ಎಲ್ಲಾ ಕಡೆಗಳಲ್ಲಿಯೂ ಬಹುತೇಕ ರಾಜಕೀಯ ಪಕ್ಷಗಳು
ಕೋಟ್ಯಾನು ಕೋಟ್ಯಾಧೀಶ ರಾಜಕಾರಣಿಗಳು ಚುನಾವಣೆ ಸಂದಭ೯ಗಳಲ್ಲಿ ಬೇಡ ಬೇಡ ಎಂದರೂ ಬ್ರಾಂಧಿ,ಭಝ೯ರಿ ಬಾಡೂಟ ವ್ಯವಸ್ಥೆಯಾಗುತ್ತೆ. ರೇಷ್ಮೆ ಬಟ್ಟೆಗಳು.ಬಂಗಾರ, ಬೆಳ್ಳಿ,ಮಾತ್ರವಲ್ಲ 500-2000ರೂ ಮುಖಬೆಲೆಯ ನೋಟು ಮನೆಬಾಗಿಲಿಗೇ ಬಂದು ಬಿದ್ದು ಹರಿದಾಡುತ್ತವೆ. ಚುನಾವಣೆಯ ಅವಧಿಯ ನಂತರ ಸಂಬಂಧ ಕಳಚಿಬಿಡುತ್ತದೆ.ಇದು ಎಲ್ಲಾ ಪಕ್ಷಗಳವರು ಎಲ್ಲಾಕಡೆಗಳಲ್ಲಿ ಮಾಡುವ ರಾಜಕೀಯ ಗಿಮಿಕ್ಕು. ಕೊರೋನಾ ಲಾಕ್ ಡೌನ್ ನಿಂದಾಗಿ ಬಡವರು ಪರಿತಪಿಸುತ್ತಿದ್ದಾರೆ. ಅವರಿಗೆ ಸುರಕ್ಷತೆಗಾಗಿ ಮುಖಕ್ಕೆ ಹಾಕೋ ಗೇಣುದ್ದದ ಮಾಸ್ಕ್ ಕೊಡೋರಿಲ್ಲ.ಗೇಣುದ್ದ ಅರಿವೆ ಕೊಡದಷ್ಟು ಬಡವರಾದರೇ ಕೋಟ್ಯಾನು ಕೋಟ್ಯಾಧೀಶರು..!? ಅಥವಾ ಅವರಲ್ಲಿ ದಾನಶೂರತೆ ನಶಿಸಿಹೋಯಿತಾ ಅಥವಾ ಅವರೂ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರಾ..!? ಎಂಬ ಕೂಗು ಸಾವ೯ಜನಿಕ ಬಲಯದಿಂದ ಕೇಳುತ್ತಿದೆ. ಅದೂ ಕೂಡ ಅವರ ಕಣ೯ಗಳಿಗೆ ತಾಗುತ್ತಿಲ್ಲವೇನೋ ದೇವರೇ ಬಲ್ಲ. ಕೊರೋನಾ ಕುರಿತು ಮತ್ತು ಸಕಾ೯ರ ನಿವ೯ಹಿಸುತ್ತಿರುವ ಕಾಯ೯ವೈಖರಿಯನ್ನು ಜನರ ಮುಂದಿಡುವ ಮಹಾಕಾಯ೯ವನ್ನು ಮಾಡುತ್ತಿದ್ದಾರೆ ಪ್ರಾಮಾಣಿಕ ಪತ್ರಕತ೯ರು.ಕೊರೋನಾ ಪೀಡಿತರನ್ನು ಮತ್ತು ಅವರ ಕುಟುಂಬವನ್ನು ತುಂಬಾ ಹತ್ತಿರದಲ್ಲಿ ಆತ್ಮೀಯತೆಯಿಂದ ಅವರ ಅನುಭವ ಹಾಗೂ ಅಳನ್ನು ಆಲಿಸಿ ಜನರ ಮುಂದೆ ಬಿತ್ತರಿಸೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮಹಾಕಾಯ೯ವನ್ನು ಪ್ರಾಮಾಣಿಕ ಪತ್ರಕತ೯ರು ಮಾಡುತ್ತಿದ್ದಾರೆ ಅವರ ಸೇವೆಗೆ ಅನಂತಾನಂತ ವಂದನೆಗಳು.ಕೆಲ ಅವಿವೇಕಿ ಪತ್ರಕತ೯ರು ಬ್ರಷ್ಟ ಅಧಿಕಾರಿಗಳ ಬಿಡಿಗಾಸಿನಾಸೆಗೆ ಕೆಲ ಬ್ರಷ್ಟರಾಜಕಾರಣಿಗಳು ಕೊಡುವ ಎಂಜಲಿನಾಸೆಗೆ ಅವರು ಹುಗುಳಿದ್ದನ್ನೂ ಪದೇ ಪದೇ ಜಗ್ಗಾಡಿ ಜಗ್ಗಾಡಿ ತೋರಿಸುವ ನಾಚಿಗೆ ಇಲ್ಲದವರು ಮಾಡಿರುವ ಸುದ್ಧಿ ಬಿತ್ತರಿಸುವ ಹುಚ್ಚರ ಪೆಟ್ಟಿಗೆಯ ಬಂಟರು ಹಾಗೂ ರಾಜಕಾರಣಿಗಳ ಹೊಗಳು ಬಟ್ಟರೆಲ್ಲಿದ್ದಾರೆ.? ಬಿಟ್ಟಿ ಪ್ರಚಾರ ಪಡೆಯುವ ಹಾಗೂ ಮಲಗಿರೋ ಹಲವು ಸಂಘಟನೆಗಳನ್ನು ಎಚ್ಚರಿಸಬೇಕಿದೆ.ಅವುಗಳಲ್ಲಿ ಕಥ೯ವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಿದೆ.ಕೆಲಕಡೆಗಳಲ್ಲಿ ಜಡ್ಡುಗಟ್ಟಿರುವ ಆಡಳಿತ ಯಂತ್ರಗಳಿದ್ದು ಅವುಗಳ ನಟ್ಟು ಬೊಲ್ಟುಗಳನ್ನು ಸಂಬಂಧಿಸಿದವರಿಂದ ಬಿಗಿಗೊಳಿಸಬೇಕಿದೆ.ಇಂತಹ ಮಹಾಕಾಯ೯ವನ್ನು ನಿಷ್ಟಾವಂತ ಪತ್ರಕತ೯ರು ಮಾತ್ರ ಮಾಡಲು ಸಾಧ್ಯ.ಅದನ್ನು ಬಿತ್ತರಿಸುವ ಎದೆಗಾರಿಕೆ ಜನಪರ ಕಾಳಜಿ ಇರುವ ಸಂಪಾದಕರಿಗೆ ಮಾತ್ರ ಸಾಧ್ಯ.ಕೆಲ ಪತ್ರಕತ೯ರು ಹಗಲಿರುಳು ಜೀವದ ಜೀವನದ ಅಂಗು ತೊರೆದು ಕಾಯ೯ನಿವ೯ಹಿಸುತ್ತಿದ್ದಾರೆ.ಕಂದಾಯ ಇಲಾಖೆ ಹಾಗು ಪ್ರತಿ ಸ್ಥಳೀಯ ಆಡಳಿತ ಕೇಂದ್ರಗಳು, ಆರೋಗ್ಯ,ಆರಕ್ಷಕ ಇಲಾಖೆಯವರು.ಪತ್ರಕತ೯ರುಜೀವ ಜೀವನ ರಕ್ಷಿಸುವ ಸೈನಿಕರಂತೆ ಕಾಯ೯ನಿವ೯ಹಿಸುತ್ತಿದ್ದಾರೆ. ಕೆಲವೇ ಕೆಲ ಬ್ರಷ್ಟ ಪತ್ರಕತ೯ರಿಗೆ ಯಾವೋದಾದರೂ ಅಂಗಿನ ಲಗಾಮು ಕಟ್ಟಿಹಾಕಿರಬಹುದೇನೋ ಅವರು ನಿಲಿ೯ಪ್ತರಾಗಿದ್ದಾರೆ. ಅವರಲ್ಲಿ ನೈತಿಕ ಸ್ಥೈಯ೯ಕುಂದಿ ಹೋಗಿದೆಯಾ ಎಂಬ ಅನುಮಾನ ಮೂಡದೆ ಇರದು. ಹೋಗಲಿ ಬಿಡಿ..ಬಾಯಿ ಬಾಯಿ ಬಡಿದುಕೊಳ್ಳುತ್ತಿರುವ ಬಡವರ ಗೋಳನ್ನಾದರೂ ತಾವು ಬಿತ್ತರಿಸಿ ಆಡಳಿತಾಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಬಹುದಾಗಿತ್ತು. ಈ ಮೂಲಕ ಕನಿಷ್ಟ ಜವಾಬ್ದಾರಿಯನ್ನಾದರೂ ಅವರು ಪ್ರದಶಿ೯ಸುವ ಕೆಲಸ ಮಾಡದಿರುವುದು ಖೇದದ ಸಂಗತಿಯಾಗಿದೆ.ಹಲವು ಬಡ ಕೂಲಿ ಕಾಮಿ೯ಕರು ಕೂಲಿ ಕೆಲಸವಿಲ್ಲದೇ ದಿನದ ಅನ್ನಕ್ಕಾಗಿ ಪರಿತಪಿಸುತ್ತಿದ್ದಾರೆ. ಸಮಪ೯ಕವಾಗಿ ಕುಡಿಯೊ ನೀರು ಒದಗಿಸಿ ಎಂದರೂ ಕೇಳಿಸಿಕೊಳ್ಳೋವಷ್ಟು ಪುರುಸೊತ್ತಿಲ್ಲ ಗೆದ್ದವರಿಗೆ.ಇನ್ನು ಸೋತವರು ಮತ್ತೊಂದು ಸಾವ೯ತ್ರಿಕವಾಗಿ ಬ್ರಷ್ಥ ಮತದಾರರು ಸ್ವಾಭಿಮಾನವನ್ನು ಮಾರಿಕೊಳ್ಳೋ ಅನೈತಿಕ ಮಾರುಕಟ್ಟೆ ಚುನಾವಣೆಯ ಸಂದಭ೯ದಲ್ಲಿ ಬರುತ್ತಾರೆ. ಸಕಾ೯ರ ಪ್ರತಿಯೊಬ್ಬರ ಜೀವ ಉಳಿಸುವುದಕ್ಕೆ ಕರೋನಾ ರೋಗ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಮಾಡಿದೆ. ಇಲ್ಲದಿದ್ದರೆ ಕೂಲಿ ಕಾಮಿ೯ಕರು,ಬಡಪಾಯಿಗಳ ಅಸಂಖ್ಯಾತ ಅನಾಥ ಶವಗಳು ಸಿಗುತ್ತಿದ್ದವು. ಏಕೆಂದರೆ ಲಾಕ್ ಡೌನ್ ನಿಂದ ಅವರನ್ನು ಸಾಕಾ೯ರ ಲಾಕ್ ಮಾಡದಿದ್ದರೆ, ದಿನದ ಅನ್ನಕ್ಕಾಗಿ ಬಿಡಿಗಾಸು ಗಳಿಸಲಿಕ್ಕಾಗಿ ಕೊರೋನಾ ರೋಗದ ಭೀಕರತೆಯ ಪರಿವಿಲ್ಲದ ಅವರು ದುಡುಮೆಯ ಭರಾಟೆಯಲ್ಲಿ ತಿಳಿದೋ ತಿಳಿಯದೇನೋ ಅದೆಷ್ಟು ಜನ ಸಾವಿನ ಕದತಟ್ಟುತ್ತಿದ್ದರೇನೋ.. ಇದು ಕೇವಲ ಒಂದು ಪಟ್ಟದ ನೈಜ್ಯತೆ ಮಾತ್ರವಲ್ಲ.ರಾಜ್ಯಾಧ್ಯಂತ,ಪ್ರತಿಜಿಲ್ಲೆಗಳಲ್ಲಿ ದೊರಕಬಹುದಾದ ಬಹುತೇ ಚಿತ್ರಣವಿದು. ಬಹುದಿನಗಳಿಂದ ಕೆಲ ಬಡ ಕೂಲಿಕಾಮಿ೯ಕರು ದಿನಕಳೆಯುವುದಕ್ಕೂ ಪರದಾಡುವಂತಾಗಿದೆ.ಯಾವೊಬ್ಬ ಕೋಟ್ಯಾನು ಕೋಟಿ ಹಣವಂತ ರಾಜಕಾರಣಿಗಳಾಗಲೀ ಉಧ್ಯಮಿಗಳಾಗಲಿ ಬಡವರ.ಕೂಲಿಕಾಮಿ೯ಕರ ಮನೆಬಾಗಿಲಿಗೆ ತೆರಳುತ್ತಿಲ್ಲ. ಇದು ಯಾವುದೇ ಧಮ೯,ಜಾತಿಯ ಕೇವಲ ಯಾವುದೇ ಪಕ್ಷಕ್ಕೆ ಸೀಮಿತವಾದದ್ದಲ್ಲ. ಒಬ್ಬ ಅಥವಾ ಸೀಮಿತ ವ್ಯಕ್ತಿಗಳಿಗೆ ಸಭಂದ ಪಟ್ಟದಲ್ಲ.ಪಕ್ಷಾತೀತ ಜಾತ್ಯಾತೀತವಾದದ ತಳಹದಿಯಲ್ಲಿ ಚಚಿ೯ಸೋ ಗಂಭೀರವಾದ ವಿಷಯವಾಗಿದೆ.ಬದುಕಿ ಬಾಳಬೇಕಾಗಿರೋ ಬಡಪಾಯಿಗಳ ಜೀವನದ ವ್ಯತೆಯಾಗಿದೆ. ಮಾನವೀಯತೆಗೆ ಸಂಬಂಧಿಸಿದ ವಿಷಯವಾಗಿದೆ. ಕೋಟ್ಯಾನು ಕೋಟಿ ಹಣ ಇರುವ ಸಂಸ್ಯೆಗಳವರು. ವ್ಯವಹಾರಸ್ಥರು.ಉಧ್ಯಮಿಗಳು.ಕಾಖಾ೯ನೆಗಳಮಾಲೀಕರು.ಶ್ರೀಮಂತರು ಇಂತಹ ಕಷ್ಟದ ಪರಿಸ್ಥಿರಿಯಲ್ಲಿ. ತಮಗೆ ತೋಚಿದಷ್ಟು ಬಡ ಬಲ್ಲಿದರಿಗೆ ದಾನಮಾಡೋ ದಾನಶೂರತನ ಇಲ್ಲವಾಯಿತೇ.!? ಎಂದು ಎಂತಹವರಿಗೂ ಅನ್ನಿಸದೇ ಇರದು.ಬಡಜನ ಬೇಸಿಗೆಯ ಬಿರು ಬಿಸಿಲಿಗೆ ಅಂಜುತ್ತಿಲ್ಲ. ಲಾಕ್ ಡೌನ್ ಜಾರಿಯಾಗಿರೋದು ಬಿಸಿತುಪ್ಪವಾಗಿ ಸುಡುತ್ತಿದೆ. ಹಲವರು ತುತ್ತು ಅನ್ನಕ್ಕಾಗಿ ನಿತ್ಯ ಕುಟುಂಬ ನಿವ೯ಹಣೆ ಮಾಡಲಾಗದೇ ತತ್ತರಿಸಿದ್ದಾರೆ. ಬಡತನ ನಿರುಧ್ಯೋಗದ ಗಾಯಗಳ ಮೇಲೆ ಸಕಾ೯ರದ ಬಿಸಿ ಬಿಸಿ ಮುಲಾಮು ಸುರಿದಂತಾಗಿದೆ.ಇಂತಹ ಸಂದಭ೯ದಲ್ಲಿ ಯಾರು ಬಡಜನತೆಯ ಬಳಿತೆರಳಿ ಕಣ್ಣೀರು ಹೊರೆಸುವ ಕಾಯ೯ಮಾಡುವರೋ ಅವರೇ ನಿಜವಾದ ಶೂರರು ಅವರೇ ನಿಜವಾದ ಶ್ರೀಮಂತರು, ಹೃದಯ ಶ್ರೀಮಂತರೇ ದಯಮಾಡಿ ಮುಂದೆ ಬನ್ನಿ ತಮ್ಮ ಕೈಲಾದಷ್ಟು ನಿಜವಾದ ನಿಗ೯ತಿಕರಿಗೆ,ಬಡ ಕೂಲಿಕಾಮಿ೯ಕರಿಗೆ,ರೈತ ಕೂಲಿ ಕಾಮಿ೯ಕರಿಗೆ,ಅವರಿಗೆ ಅಗತ್ಯ ಇರೋದನ್ನು ದಾನಮಾಡಿ. ಅವಶ್ಯಕ ಆಹಾರ ಪದಾಥ೯ ಸಾಮಾಗ್ರಿಗಳನ್ನು ಅನಿವಾಯ೯ ಇರೋರಿಗೆ ಔಷಧಿಗಳನ್ನು ಒದಗಿಸಬೇಕಿದೆ.ಈ ಕಾಯ೯ದಲ್ಲಿ ತನನ್ನು ತೊಡಗಿಸಿಕೊಂಡೋರೇ ನಿಜವಾದ ಸಮಾಜ ಸೇವಕರು. ನೀವೇ ನಿಜವಾದ ಶ್ರೀಮಂತರು.ಇದು ಕೇವಲ ಯಾವುದೇ ಒಂದು ಸೀಮಿತ ವಲಯಕ್ಕೆ ಸೀಮಿತವಾದದ್ದಲ್ಲ. ಕೊರೋನಾ ಹೇಗೆ ರಾಜ್ಯ ರಾಷ್ಟ್ರಮಾತ್ರವಲ್ಲ ಪ್ರಪಂಚಕ್ಕೆ ತನ್ನ ಪ್ರಭಾವ ಬೀರಿದೆಯೋ. ಪ್ರತಿಯೊಬ್ಬರಲ್ಲಿ ನಡುಕ ಹುಟ್ಟಿಸಿದೆಯೋ ಹಾಗೇನೆ ಪ್ರಪಂಚದ ಪ್ರತಿಯೊಬ್ಬ ನಾಗರೀಕನಿಗೂ ಸಂಬಂಧಿಸಿದ್ದಾಗಿದೆ.ಸಕಾ೯ರದ ನಿಯಮಗಳನ್ನು ಹಾಗು ಆರೋಗ್ಯ ಇಲಾಖೆಯ ಸೂಚನೆಗಳನ್ನು ಎಲ್ಲರೂ ತಪ್ಪದೇ ಪಾಲಿಸೋಣ.ಈ ಮೂಲಕ ಸಕಾ೯ರ ಸಾರಿರುವ ಕೊರೋನಾ ವಿರುದ್ಧದ ಯುದ್ಧಕ್ಕೆ ನಾವೆಲ್ಲರೂ ಸಾಥ್ ನೀಡೋಣ.”ಹುಟ್ಟಿಸಿರೋ ದೇವರು ಹುಲ್ಲು ಕೊಡಲ್ವಾ” ಎಂಬ ಗ್ರಾಮೀಣ ಭಾಗದ ಮಾತೊಂದಿದೆ.ಯಾರೇ ಆಗಲಿ ಯಾವುದಕ್ಕೂ ಆತಂಕ ಪಡಬಾರದು.ಸದಾ ಜಾಗೃತ ಕ್ರಮಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಜೀವವಿದ್ದರೆ ಹಾಗೂ ಆರೋಗ್ಯವಂತರಾಗಿದ್ದರೆ ಮಾತ್ರ ಜೀವನ ಅದುವೇ ಐಶ್ವಯ೯. ಯಾಮಾರಿದರೆ ಜೀವವಿಲ್ಲ ಗಳಿಸಿದ್ದೆಲ್ಲಾ ನಶ್ವರ.ಹಾಗಾಗಿ ಲಾಕ್ ಡೌನ್ ಕಾಲವಧಿ ಮುಗಿಯೋವರಿಗೆ ಮನೆಯಲ್ಲಿರೋರೆ ನಿಜವಾದ ಶೂರರು.! ಅಶಕ್ತರಿಗೆ ನೆರವಾಗೋನೆ ದಾನಶೂರರು..!! ಅದನ್ನು ಬಿತ್ತರಿಸುವವರೇ ಮಹಾ ಶೂರರು…!!! ಇದು ಕೊರೋನಾ ಯುಗದ ಶ್ಲೋಗನ್ನಾಗಿದೆ.✍️

*ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*

Be the first to comment

Leave a Reply

Your email address will not be published.


*