ಜೀಲ್ಲಾ ಸುದ್ದಿಗಳು
ಬೀದರ್, ಪಶು ಸಂಗೋಪಣೆ, ವಕ್ಪ್ ಹಚ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಏಪ್ರೀಲ್ 11ರಂದು ಬೀದರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಏಪ್ರೀಲ್ 11ರ ಬೆಳಗ್ಗೆ 8.30ಕ್ಕೆ ಬೋಂತಿ ತಾಂಡಾದಿಂದ ನಿರ್ಗಮಿಸಿ ಭಾಲ್ಕಿಗೆ ತೆರಳಿ ಬೆಳಗ್ಗೆ 11.30ಕ್ಕೆ ಭಾಲ್ಕಿ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕರೋನಾ ಮುಂಜಾಗ್ರತಾ ಕ್ರಮಗಳ ಕುರಿತು ಸಭೆ ನಡೆಸುವರು.
ಬಳಿಕ ಭಾಲ್ಕಿಯಿಂದ ರಸ್ತೆ ಮೂಲಕ ಗೋರ್ಟಾ, ಮುಜಳಮ್ ಮಾರ್ಗವಾಗಿ ಬಸವಕಲ್ಯಾಣಕ್ಕೆ ಪ್ರಯಾಣ ಬೆಳೆಸುವರು. ಮಧ್ಯಾಹ್ನ 2.30ಕ್ಕೆ ಬಸವಕಲ್ಯಾಣ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕರೋನಾ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುವರು.
ಬಳಿಕ ಹುಮನಾಬಾದಗೆ ಪ್ರಯಾಣಿಸಿ ಹುಮಾನಾಬಾದ್ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕರೋನಾ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸುವರು. ಬಳಿಕ ಭಾಲ್ಕಿ ಮತ್ತು ಕಮಲನಗರ ಮಾರ್ಗವಾಗಿ ಬೋಂತಿ ತಾಂಡಾಕ್ಕೆ ತೆರಳಿ ವಾಸ್ತವ್ಯ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.
Be the first to comment