ಜೀಲ್ಲಾ ಸುದ್ದಿ ಗಳು
ಅಂಬಿಗ ನ್ಯೂಸ್ : ಸುರಪುರ ಕೊರೋನಾ ವೈರಸ್ ಸಾಂಕ್ರಮಿಕ ರೋಗವಾಗಿದ್ದರಿಂದ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಅದರಂತೆ ಯಾದಗಿರಿ ಜಿಲ್ಲೆಯಲ್ಲಿ ಈವರೆಗೂ ಯಾವುದೇ ಕೊರೋನಾ ಪತ್ತೆಯಾಗಿಲ್ಲ. ಆದರೂ ಆರೋಗ್ಯ ಇಲಾಖೆಯು ಹೆಲ್ತ್ ಕ್ಯಾಂಪ್ ಗಳನ್ನು ಆಯೋಜಿಸಿ ಬೆಂಗಳೂರು ಸೇರಿದಂತೆ ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಂದ ಬಂದ ಜನ್ರಿಗೆ ತಪಾಸಣೆ ನಡೆಸುತ್ತಿದ್ದಾರೆ.
ಸುರಪುರ ತಾಲೂಕಿನಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 14ರವರೆಗೆ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಪ್ರತಿಯೊಂದು ಹಳ್ಳಿ ಗಳಿಗೆ ತೆರಳಿ ತಪಾಸಣೆ ಮಾಡಲಾಗ್ತಿದೆ. ಶುಕ್ರವಾರ ಮಂಗಿಹಾಳ ಗ್ರಾಮದಲ್ಲಿ ಹೆಲ್ತ್ ಕ್ಯಾಂಪ್ ನಡೆಸಿದ ಸುರಪುರ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ, ಬೇರೆಡೆಯಿಂದ ಬಂದ ಸುಮಾರು 45 ಕ್ಕೂ ಹೆಚ್ಚು ಜನರನ್ನ ತಪಾಸಣೆ ನಡೆಸಿದರು.
ಜೊತೆಗೆ ಟೆಂಪ್ ರೇಚರ್ ಮಷಿನ್ ನಿಂದ ಚೆಕ್ ಮಾಡಿದರು. ಅಲ್ಲದೇ ತಲೆ ನೋವು, ನೆಗಡಿ ಇದ್ದಂತವರಿಗೆ ಮಾತ್ರೆಗಳು ಸಹ ನೀಡಿದರು. ಇನ್ನು ಈ ತಪಾಸಣಾ ಶಿಬಿರದಲ್ಲಿ ಸುರಪುರ ತಾಲೂಕು ಆರೋಗ್ಯ ಕೇಂದ್ರದ ಶುಶ್ರೂಷಕ ಅಶೋಕ್, ಕಿರಿಯ ಆರೋಗ್ಯ ಸಹಾಕರಾದ ಶ್ರೀಕಾಂತ್, ನೇತ್ರಾಧಿಕಾರಿ ಶಮೀಮ, ಕಿರಿಯ ಆರೋಗ್ಯ ಸಹಾಕರಾದ ಸೌಮ್ಯ, ಪೇಠ ಅಮ್ಮಾಪುರ ಪ್ರಾಥಮೀಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಸಹಾಯಕಿ ಬಸಲಿಂಗಮ್ಮ, ಮಂಗಿಹಾಳ ಗ್ರಾಮ ಅಂಗನವಾಡಿ ಶಿಕ್ಷಕರಾದ ಅರುಣಾ, ಶಿವು ಅಂಗಡಿ, ಯಮನಪ್ಪ ಮಡಿವಾಳರ ಹಾಗೂ ಇತರರಿದ್ದರು.
Be the first to comment