ಪ್ರಾಯಶ್ಚಿತ್ತಕ್ಕಾಗಿ ಕಾಮಿ೯ಕ ಸಂಘಟನೆಯಿಂದ ಉಪವಾಸ ಸತ್ತ್ಯಾಗ್ರಹ-ಸಂಚಾಲಕಿ ಎಮ್.ಬಿ.ಕೊಟ್ರಮ್ಮ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಗ್ರಾಮ ಸೇವಾ ಕಾಮಿ೯ಕ ಸಂಘದ ಪದಾಧಿಕಾರಿಗಳಿಂದ ಪ್ರಾಯಶ್ಚಿತ್ತಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದರು.ಹಗರಿಬೊಮ್ಮನಹಳ್ಳಿ ತಾಲೂಕು ಸಂಚಾಲಕರ‍ದ ಎಮ್.ಬಿ.ಕೊಟ್ರಮ್ಮ ಮಾತನಾಡಿದರು.ಇಂದು ಬೆಂಗಳೂರಿನಲ್ಲಿ ರಾಜ್ಯ ಸಂಘಟನೆಯಿಂದ “ಪ್ರಾಯಶ್ಚಿತ್ತಕ್ಕಾಗಿ ಉಪವಾಸ ಸತ್ತ್ಯಾಗ್ರಹ”ಕ್ಕೆ ಕರೆನೀಡಲಾಗಿತ್ತು.ಕೊರೋನಾ ಲಾಕ್ ಡೌನ್ ಮತ್ತು 144ಸೆಕ್ಷನ್ ನಿಯಮ ಪಾಲನೆ ತಾವು ಬೆಂಗಳೂರಿಗೆ ತೆರಳಲು ಸಾಧ್ಯವಾಗಿಲ್ಲ.

ಸ್ಥಳೀಯ ತಾಲೂಕು ಆಡಳಿತ ಕಛೇರಿ ಹಾಗೂ ಯಾವುದೇ ಸ್ಥಳದಲ್ಲಿ ಸಾಮೂಹಿಕ ಸಾಂಕೇತಿಕ ಸತ್ತ್ಯಾಗ್ರಹ ಮಾಡುವುದು ಕಾನೂನು ಭಂಗಕ್ಕೆ ಕಾರಣವಾಗಲಿದೆ. ಈ ಹಿನ್ನಲೆಯಲ್ಲಿ ಸಂಘಟನೆಯವರೆಲ್ಲರೂ ತಮ್ಮ ತಮ್ಮ ನಿವಾಸದಲ್ಲಿಯೇ ಇದ್ದುಕೊಂಡು ಮನಃಪೂವ೯ಕವಾಗಿ ಉಪವಾಸವಿದ್ದು.ರಾಜ್ಯ ಸಂಘಟನೆಯ ಕರೆಗೆ ವಿನೂತನವಾದ ಸತ್ತ್ಯಾಗ್ರಹದ ಮೂಲಕ ಸ್ಪಂಧಿಸಲಾಗಿದೆ ಎಂದರು. *ಸತ್ತ್ಯಾಗ್ರಹದ ಉದ್ಧೇಶ ಪ್ರಾಯಶ್ಚಿತ್ತ:* ರಾಜ್ಯಾಧ್ಯಂತ ಗ್ರಾಮ ಸೇವಾ ಸಂಘ ಅಸಂಘಟಿತ ಕ್ಷೇತ್ರದ ಕಾರ್ಮಿಕ ಸಂಘಟನೆ ಆಗಿದ್ದು.ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಾಗು ತಾಲೂಕು ಗ್ರಾಮೀಣಭಾಗಗಳಲ್ಲಿ ಕಾಯ೯ನಿವ೯ಹಿಸುತ್ತಿದೆ. ಕಾರ್ಮಿಕರು ಹಾಗು ಬಡ ಜನರು.ನಿರುಧ್ಯೋಗಿ ಗ್ರಾಮೀಣ ಜನರುನ್ನು ಗುಳೆ ಹೋಗುವುದನ್ನು ಸಂಘಟಿಸುವಲ್ಲಿ ಪ್ರಯತ್ನ ಮಾಡಲಾಗಿದೆ.ಯಶಸ್ಸು ಸಾಧಿಸುವಲ್ಲಿ ವಿಫಲವಾಗಿದ್ದು.ಅದು ಕೊರೋನಾ ರೋಗದ ಭಯದಿಂದ ಕಾಮಿ೯ಕರು ವಾಪಾಸಾದಾಗ ಸಂಘಟನೆಗೆ ಪಾಪದ ಪ್ರಜ್ಞೆ ಜಾಗೃತಗೊಂಡಿದೆ.ಅವರ ಸಂಕಷ್ಟದಲ್ಲಿ ಭಾಗಿಯಾಗಲಾರದ ದುಸ್ಥಿತಿ ಉಂಟಾಗಿದೆ.ನಮ್ಮ ಅಸಹಾಯಕತೆಯಿಂದಾಗಿ ನೈತಿಕ ಪ್ರಜ್ಞೆ ನಮ್ಮನ್ನು ಕಾಡಿಸುತ್ತಿದೆ.ಈ ಕಾರಣಕ್ಕಾಗಿ ಸಂಘಟನೆ ಬೆಂಗಳೂರಲ್ಲಿ ಪ್ರಾಯಶ್ಚಿತ್ತಕ್ಕಾಗಿ “ರಾಷ್ಟ್ರೀಯ ಉಪವಾಸ” ಸತ್ತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.ರಾಜ್ಯದ ಗಣ್ಯ ವ್ಯಕ್ತಿಗಳು ಹಾಗೂ ಸಂಘಟನೆಯ ರಾಜ್ಯ ಕಮಿಟಿಯವರ ನೇತೃತ್ವದಲ್ಲಿ ಸತ್ತ್ಯಾಗ್ರಹ ಜರುಗಿದೆ.ಜಿಲ್ಲೆಗಳ ಹಾಗೂ ತಾಲೂಕು ಗ್ರಾಮೀಣಭಾಗದ ಸಂಘಟನೆಯವರು ಭಾಗಿಯಾಗಲಿದ್ದಾರೆ.ಈ ಮೂಲಕ ಗ್ರಾಮೀಣ ಸೇವಾ ಕಾಮಿ೯ಕ ಸಂಘಟನೆ ರಾಜ್ಯ ಹಾಗೂ ಎಲ್ಲಾ ಪದಾಧಿಕಾರಿಗಳು ಹಾಗೂ ಸವ೯ಸದಸ್ಯರು ಸ್ವಯಂ ಆತ್ಮ ವಿಮಶೆ೯ಯೊಳಗಾಗಿ ಉಪವಾಸ ಸತ್ತ್ಯಾಗ್ರಹದ ಮೂಲಕ ಪ್ರಾಯಶ್ಚಿತ ಮಾಡಿಕೊಳ್ಳುತ್ತಿದ್ದೇವೆ ಎಂದರು. ಸಂಘಟನೆಯ ರಾಜ್ಯ ಖೋಶಾಧಿಕಾರಿ ಮಲ್ಲೇಶ್ ಕೋಗಳಿ.ಸಂಡೂರು ಸಂಚಾಲಕರಾದ ಅಕ್ಕಮಹಾದೇವಿ. ಮರಬ್ಬಿಹಾಳು ಹಾಗೂ ಬೆಣ್ಣಿಕಲ್ಲಿನ ತ್ರಿವೇಣಿ.ಕೋಡಿಹಳ್ಳಿಯ ಪವಿತ್ರ.ಕೋಗಳಿಯ ರೇವಮ್ಮ. ರತ್ನಮ್ಮ.ಕಮಲಮ್ಮ. ಹರೆಗೊಂಡನಹಳ್ಳಿಯ ಕೊಟ್ರೇಶ್ ಅಡವಿ ಆನಂದ ದೇವನಹಳ್ಳಿ ಪ್ರವೀಣ್.ಮುಂತಾದವರು ತಮ್ಮ ರೀತಿಯಲ್ಲಿ ಮನೆಯಲ್ಲಿದ್ದುಕೊಂಡೇ ಉಪವಾಸ ಸತ್ತ್ಯಾಗ್ರಹ ಮಾಡುವ ಮೂಲಕ ರಾಜ್ಯ ಸಂಘಟನೆಯ ಕರೆಗೆ ಹಾಗೂ ಸಕಾ೯ರ ಕರೆ ಕೊಟ್ಟಿರುವ ಲಾಕ್ ಡೌನ್ ಮತ್ತು 144ಸೆಕ್ಷನ್ ಪಾಲನೆ ಮಾಡಲಾಗುತ್ತಿದೆ ಎಂದು ಎಂ.ಬಿ.ಕೊಟ್ರಮ್ಮ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*