ಸಾಹಿತ್ಯ
ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ ವತಿಯಿಂದ ವಿಜಯ ಪಾವ೯ತಿ ಸೋನಾರೆ ನಿವಾಸದಲ್ಲಿ ಪ್ರಾರಂಭವಾದ ಓದಿನ ಮನೆ ಕಾರ್ಯಕ್ರಮಕ್ಕೆ 13ನೇ ದಿನ. ಇಂದು ಮಕ್ಕಳು ಎ.ಆರ್ ಮಣಿಕಾಂತ್ ಅವರು ಬರೆದ ಎರಡು ಕಥೆಗಳನ್ನು ಓದಿದರು .
ಮೊದಲ ಕಥೆ
” ಅವನ ಒಳಗಣ್ಣಿಗೆ ನಾಟ್ಯ ಒಲಿಯಿತು “
ಕುರುಡನೊಬ್ಬನು ಭರತ ನಾಟ್ಯ ಕಲಿತು ಬೆಳೆದು ನಿಂತ ಕಥೆ.ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲವೆಂದು ತೋರಿಸಿ ಕೊಟ್ಟ ಕಥೆ. Impossible ಎಂಬ ಪದದೊಳಗೆ possible ಇದೆ ಎಂಬುದನ್ನು ನಿರೂಪಿಸಿದ ಕುರುಡು ಬುಸೇಗೌಡರ ಸಾಧನೆಯನ್ನು ಹೇಳುವ, ಎಂಥವರಿಗೂ ಸ್ಪೂರ್ತಿ ನೀಡುವ ಕಥೆ.
ಎರಡನೇ ಕಥೆ
” ಇಷ್ಟಕ್ಕೂ ಕ್ಯಾರೆಕ್ಟರ್ ಸರಿಗಿರೋದು ಅಂದ್ರೆ ಏನು? “
ಸಂಪಿಗೆ ಅನ್ನುವ ಹುಡುಗಿಯೊಬ್ಬಳು
ಕಷ್ಟದಲ್ಲಿಯೇ ಬೆಳೆದು ಓದಿ ಬರೆದು ಭರತನಾಟ್ಯ ಕಲಿತು ಒಂದಿಷ್ಟು ಹೆಸರು ಮಾಡಿದ ಹುಡುಗಿಯ ಎಂಗೇಜ್ಮೆಂಟ್ ನ ದಿವಸ ” ಬೆಂಗಳೂರಿನಲ್ಲಿರುವ ಹುಡುಗಿಯರ ಕ್ಯಾರೆಕ್ಟರ್ ಚೆನ್ನಾಗಿರಲ್ಲ. ಅದರಲ್ಲೂ ಹಾಡು ಡಾನ್ಸು ಅಂತೆಲ್ಲ ತಿರುಗಾಡುವವರ ಬಗ್ಗೆಯಂತೂ ಭರವಸೆ ಇರಲ್ಲ ಅಂತ ಹೇಳಿದ ಗಂಡಿನ ಕಡೆಯವರಿಗೆ ಸರಿಯಾಗಿ ಉತ್ತರ ಕೊಡುವ ಹುಡುಗಿಯ ಕಥೆ. ಒಮ್ಮೆ ನೀವು ಕೂಡ ಓದಿನೋಡಿ.
ಬಾಂಧವರೇ
ಹೀಗೆ ಮನೆಯಲ್ಲಿ ಕುಳಿತುಕೊಂಡು ಮಕ್ಕಳು ವಿವಿಧ ರೀತಿಯ ಪುಸ್ತಕಗಳನ್ನು ಓದಿ, ಅದರಲ್ಲಿ ಮುಖ್ಯವಾಗಿ ಕಥೆಗಳು,ಲೇಖನಗಳು, ಕವಿಗಳ ಜೀವನ ಪರಿಚಯವನ್ನು ಓದಿ ಹೇಳುವುದು. ಇದರಿಂದಾಗಿ ಮಕ್ಕಳಲ್ಲಿ ಅಡಗಿರುವ ವಿವಿಧ ಕೌಶಲ್ಯಗಳನ್ನು ಅವರಲ್ಲಿರುವ ಪ್ರತಿಭೆಯನು ಗುರುತಿಸಲು ಸಾಧ್ಯವಾಗುತ್ತದೆ. ಎನ್ನುತ್ತಾರೆ ಕಥೆಗಾರ್ತಿ ಪಾವ೯ತಿ ಸೋನಾರೆ ಅವರು ಹೀಗೆ ಸಾಮಾಜಿಕ ಹೋರಾಟಗಾರರು ಕಲಾವಿದರಾದ ವಿಜಯಕುಮಾರ್ ಸೋನಾರೆ ಅವರು ಸಾಯಂಕಾಲದ ಸಮಯದಲ್ಲಿ ತಮ್ಮ ಮಕ್ಕಳನ್ನು ಮನೆಯ ಅಂಗಳದಲ್ಲಿ ಕೂಡಿಸಿಕೊಂಡು ಮಕ್ಕಳು ಹೇಳುವ ಕಥೆಗಳನ್ನು ಕೇಳುವುದು. ಈ ಲಾಕಡೌನ್ ಸಮಯವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಸಾಹಿತ್ಯ, ಲೇಖನಗಳು, ಬರಹಗಳ ಬಗ್ಗೆ ಆಸಕ್ತಿ ಮೂಡಿಸಿ ಸಾಹಿತ್ಯದಡೆಗೆ ಕೊಂಡೊಯ್ಯುತ್ತಿರುವುದು ತುಂಬಾನೇ ಖುಷಿ ವಿಷಯವಾಗಿದೆ. ಈ ದಂಪತಿಗಳು ವಿನೂತನವಾದ ಕಾರ್ಯಕ್ರಮವನ್ನು ಮಾಡಿ ನಿಜಕ್ಕೂ ಮಾದರಿಯಾಗಿದ್ದಾರೆ…
ಮನೆಯಲ್ಲೇ ಇರಿ ಕರೋನಾ ಓಡಿಸಲು ಕೈ ಜೋಡಿಸಿ….ಅನ್ನುತ್ತಾರೆ ಈ ದಂಪತಿಗಳು
Be the first to comment