ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಶಾಲಾ ಶುಲ್ಕ ವಿನಾಯಿತಿ  ನೀಡಿ: ವಿದ್ಯಾರ್ಥಿ ಸಂಘಟನ ಆಗ್ರಹ

ವರದಿ: ಅಮರೇಶ ಕಾಮನಕೇರಿ ಸಂಪಾದಕರು

 

ಪರೀಕ್ಷಾ ಶುಲ್ಕ ಪಾವತಿಯ ಗೊಂದಲದ ನಿವಾರಣೆ ಮಾಡಿ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹಾಗೂ ಶಾಲಾ ಕಾಲೇಜಿನ ಶುಲ್ಕಗಳಿಗೆ ರಿಯಾಯಿತಿ ನೀಡಿ. 

ಕಲಬುರಗಿ : ಇಡೀ ಪ್ರಪಂಚವೇ ಇಂದು ಕರೋನ ವೈರಸ್‌ನಿಂದಾಗಿ ಮಹಾ ಮಾನವದುರಂತವನ್ನು ಅನುಭವಿಸುವಂತಾಗಿದೆ. ಅದರಲ್ಲೂ ಭಾರತದಲ್ಲಿ ಲಾಕ್‌ಡೌನ್ ನಂತರದಲ್ಲಿ ಸುಮಾರು 12 ಕೋಟಿ ಉದ್ಯೋಗಗಳು ನಷ್ಟವಾಗಿದೆ ಎಂದು ವರದಿಗಳು ಹೇಳುತ್ತಿದೆ. ಅಲ್ಲದೆ ನಾಲಕ್ಕು ಕೋಟಿಗೂ ಹೆಚ್ಚು ದಿನಗೂಲಿ ಕಾರ್ಮಿಕರ ವಲಸೆ ಇಂದಾಗಿ ಆರ್ಥಿಕತೆಯ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ದಿನದ ಕೂಲಿ ನಂಬಿಕೊಡು ಜೀವನ ನಡೆಸುತ್ತಿದ್ದವರ ಪರಿವಾರದ ಕಥೆಯೂ ಚಿಂತಾಜನಕವಾಗಿದೆ.

ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷ ಶುಲ್ಕ ಕಟ್ಟುವ ಕುರಿತಾಗಿ ಗೊಂದಲ ಗಳು ಉಂಟಾಗಿದೆ. ದಿನಾಂಕ ೨೦-೩-೨೦೨೦ ರಂದು ಬೆಂಗಳೂರಿನ ಕೇಂದ್ರಿಯ ವಿಶ್ವವಿದ್ಯಾಲಯ ಹೊರಡಿಸಿರುವ ಪತ್ರದ ಪ್ರಕಾರ ವಿದ್ಯಾರ್ಥಿಗಳು ಏಪ್ರಿಲ್ ೧೩ರ ವರೆಗೂ ದಂಡದ ಜೊತೆ ಶುಲ್ಕ ಹಾಗೂ ಏಪ್ರಿಲ್ ೧೭ರ ಒಳಗಾಗಿ ವಿಶೇಷ ದಂಡದ ಜೊತೆ ಶುಲ್ಕ ಪಾವತಿ ಮಾಡಲು ಕಡೆಯ ದಿನಾಂಕದ ಗಡುವು ನೀಡಲಾಗಿತ್ತು. ಆದರೆ ಲಾಕ್‌ಡೌನ್ ನಂತರ ಅಂದರೆ ಮಾರ್ಚ್ ೨೫ ರಂದು ಮತ್ತೊಂದು ಸುತ್ತೋಲೆ ಹೊರಡಿಸಿ ಅನಿರ್ಧಿಷ್ಠಾವಧಿಗೆ ಪರೀಕ್ಷಾ ಶುಲ್ಕ ಹಾಗೂ ಪರೀಕ್ಷೆಯ ವೇಳಾಪಟ್ಟಿಯನ್ನು ಮುಂದೂಡಲಾಗಿದೆ ಎಂದು ತಿಳಿಸಲಾಗಿತ್ತು. ಪರೀಕ್ಷ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಇದರಂತೆ ರದ್ಧಾಗುತ್ತದೆ. ಇದು ಒಳ್ಳೆಯ ನಿಲುವೇ ಆಗಿದೆ. ಆದರೆ ಇದರ ಹೊರತಾಗಿಯೂ ಕೆಲವು ಕಾಲೇಜುಗಳು ಆನ್‌ಲೈನ್ ಮುಖೇನ ದಂಡ+ಶುಲ್ಕವನ್ನು ಪಾವತಿ ಮಾಡಿಸಿಕೊಂಡಿದ್ದು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಮತ್ತು ಹಲವು ವಿದ್ಯಾರ್ಥಿಗಳು ಆತಂಕಕ್ಕೂ ಒಳಗಾಗಿದ್ದಾರೆ. ೨೫ ರಂದು ಹೊರಡಿಸಿರುವ ಸುತ್ತೋಲೆ ಕಾಲೇಜು ಹಾಗೂ ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪದಿರುವುದೇ ಇದಕ್ಕೆ ಕಾರಣವಾಗಿದೆ. ಈ ಸಂಧರ್ಬದಲ್ಲಿ ಹಾಗೂ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಅಲ್ಲದೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯವೂ ಶಿಕ್ಷಣದಿಂದ ದೂರ ಉಳಿಯುವ ಆತಂಕವೂ ಇದೆ.
ಹಾಗಾಗಿ
೧. ಸರ್ಕಾರ ಈ ಕೂಡಲೇ ಮಧ್ಯಪ್ರವೇಶ ಮಾಡಿ ವಿದ್ಯಾರ್ಥಿಗಳಲ್ಲಿ ಇರುವ ಪರೀಕ್ಷಾ ಶುಲ್ಕದ ಈ ಗೊಂದಲ ಹಾಗೂ ಆತಂಕವನ್ನು ನಿವಾರಣೆ ಮಾಡಬೇಕು.
೨. ಆರ್ಥಿಕ ಬಿಕ್ಕಟಿನ ಈ ಕಾಲದಲ್ಲಿ ಮುಂಬರುವ ಪರೀಕ್ಷಾ ಶುಲ್ಕ ಹಾಗೂ ಪ್ರವೇಶಾತಿ ಸಮಯದಲ್ಲಿಯೂ ಶುಲ್ಕವನ್ನು ಸಾಧ್ಯವಾದಷ್ಟು ಸರ್ಕಾರವೇ ಭರಿಸಬೇಕು, ಅಥವಾ ಕಂತುಗಳಲ್ಲಿ ಪಾವತಿಸುವ ಹಾಗೂ ಶುಲ್ಕದಲ್ಲಿ ರಿಯಾಯಿತಿಯನ್ನು ನೀಡುವ ಕ್ರಮಗಳನ್ನು ಸರ್ಕಾರ ಅಗತ್ಯವಾಗಿ ಮಾಡಬೇಕು. ಖಾಸಗೀ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣವನ್ನೂ ಹೇರಬೇಕು.
-ರಾಜೇಂದ್ರ ರಾಜವಾಳ
ಜಿಲ್ಲಾ ಸಂಚಾಲಕರು

Be the first to comment

Leave a Reply

Your email address will not be published.


*