ಕ್ರೈಮ್-ಪೋಕಸ್
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಅಬಕಾರಿ ನಿರೀಕ್ಷಕರು ಕೊಟ್ಟೂರು ಪಟ್ಟಣದಲ್ಲಿ ಮಧ್ಯಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ದಾಳಿ ಮಾಡಿದ್ದಾರೆ.ಎಪ್ರೇಲ್ 8ರಂದು ಕೊಟ್ಟೂರು ಪಟ್ಟಣದ ಕೊಟ್ಟೂರು ಕಂಪಟ್೯ನಲ್ಲಿರುವ ಲಾಡ್ಜ್ ಆಂಡ್ ರೆಸ್ಟೋರೆಂಟ್ ನಲ್ಲಿ ಮಧ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ದೊರಕ್ಕಿದ್ದು. ಕೊಟ್ಟೂರು ತಹಶಿಲ್ದಾರರಾದ ಜಿ.ಅನಿಲ್ ಕುಮಾರ ನೇತೃತ್ವದಲ್ಲಿ.ಕೊಟ್ಟೂರು ಪಿಎಸ್ಐ ಕಾಳಿಂಗಪ್ಪರ ಸಹಯೋಗದೊಂದಿಗೆ ಕೂಡ್ಲಿಗಿ ಅಬಕಾರಿ ನಿರೀಕ್ಷಕರಾದ ಯು.ಸಿದ್ದಪ್ಪನವರು ದಾಳಿ ಮಾಡಿದ್ದಾರೆ.ಸಕಾ೯ರ ಕೊರೋನಾ ಎಮಜೆ೯ನ್ಸಿ ಸಂದಭ೯ದಲ್ಲಿ ಲಾಕ್ ಡೌನ್ ಹಾಗೂ 144ಸೆಕ್ಷನ್ ಜಾರಿ ಇರೋ ಹಿನ್ನಲೆಯಲ್ಲಿ ಮದ್ಯ ನಿಷೇಧಾಜ್ಞೆ ಜಾರಿ ಇದ್ದು.ಸಕಾ೯ರದ ಆದೇಶದನ್ವಯ ಇಲಾಖೆ ಮಧ್ಯಮಾರಾಟ ಮಾಡಬಾರದೆಂದು ಸೂಚಿಸಿ ಮಾರಾಟ ಮಳಿಗೆಯನ್ನು ಬಂದ್ ಮಾಡಿ ಬೀಗಹಾಕಿ ಸಕಾ೯ರದ ಮೊಹರು ಹಾಕಲಾಗಿತ್ತು.ಅಕ್ರಮವಾಗಿ ಮೊಹರು ಒಡೆದು ಬೀಗ ತೆಗೆದು ಮಧ್ಯ ಮಾರಲಾಗುತ್ತಿತ್ತು. ಸಕಾ೯ರದ ಆದೇಶ ಉಲ್ಲಂಘನೆ ಮತ್ತು ಮಧ್ಯ ಮಾರಾಟ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿದ್ದ ಸ್ಥಳದಲ್ಲಿ ಒಟ್ಟು7496.ಲೀಟರ್ ನಷ್ಟು ಮಧ್ಯ ಸಂಗ್ರಹವಿತ್ತು ಅದನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ತಿಪ್ಪೇಸ್ವಾಮಿ ಎಸ್ ಮತ್ತು ಶರಣಬಸವ ಎ.ಎನ್ ಎಂಬುವರನ್ನು ಬಂಧಿಸಲಾಗಿದೆ ಎಂದು ಕೂಡ್ಲಿಗಿ ಅಬಕಾರಿ ನಿರೀಕ್ಷಕರಾದ ಸಿದ್ದಪ್ಪ ತಿಳಿಸಿದ್ದಾರೆ.
Be the first to comment