ದೇಶದ ಸುದ್ದಿಗಳು
ಇನ್ಮುಂದೆ 5ಕ್ಕಿಂತ ಹೆಚ್ಚು ಸಲ ಫಾರ್ವಡ್ ಆದ ವಾಟ್ಸ್ಯಾಪ್ ಮೆಸೇಜ್, ಒಬ್ಬರಿಗಷ್ಟೇ ಕಳಿಸಲು ಸಾಧ್ಯ!
ವಾಟ್ಸ್ಯಾಪ್ನಲ್ಲಿ ಕೊರೊನಾ ಬಗೆಗಿನ ಮಾಹಿತಿಗಳು ವಿಪರೀತವಾಗಿ ಹರಿದಾಡುತ್ತಿವೆ. ಇದರಲ್ಲಿ ಹಲವು ಫೇಕ್ ನ್ಯೂಸ್ ಕೂಡ ಹರಿದಾಡುತ್ತಾ ಜನರಲ್ಲಿ ಗಾಬರಿ ಹುಟ್ಟಿಸುತ್ತಿವೆ. ಫಾರ್ವರ್ಡ್ ಆಗಿ ಬರೋ ಸಂದೇಶಗಳಲ್ಲಿ ಸತ್ಯ ಯಾವುದು, ಸುಳ್ಳು ಯಾವುದು ಎಂದು ತಿಳಿದುಕೊಳ್ಳುವುದೇ ದೊಡ್ಡ ಸಾಹಸದ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಹಲವು ದೂರು ಕೇಳಿಬಂದ ಹಿನ್ನೆಲೆ ವಾಟ್ಸ್ಯಾಪ್ ಇದೀಗ ಹೊಸ ಟ್ರಿಕ್ ಜಾರಿಗೆ ತಂದಿದೆ.
ಈಗಾಗಲೇ ಐದಕ್ಕಿಂತ ಹೆಚ್ಚು ಸಲ ಫಾರ್ವಡ್ ಆದ ಮೆಸೇಜ್ಗಳನ್ನು, ನೀವು ಕೇವಲ ಒಬ್ಬರಿಗಷ್ಟೆ ಫಾರ್ವಡ್ ಮಾಡಬಹುದಾಗಿದೆ. ಇದರಿಂದಾಗಿ ಮೆಸೇಜ್ ಹರಡುವುದನ್ನು ನಿಲ್ಲಿಸಲಾಗುವುದಿಲ್ಲವಾದರೂ, ಫಾರ್ವರ್ಡ್ ಆಗುವುದನ್ನು ಸ್ಲೋ ಮಾಡಬಹುದು ಎಂದು ವಾಟ್ಸ್ಯಾಪ್ ಹೇಳಿಕೊಂಡಿದೆ.
Be the first to comment