ಜೀಲ್ಲಾ ಸುದ್ದಿಗಳು
ಬೀದರ್, ಚಿಟಗುಪ್ಪಾ ಪಟ್ಟಣದ ಎಲ್ಲಾ ಪ್ರದೇಶಗಳಲ್ಲಿ ಸಾಕಷ್ಟು ಶುಚಿತ್ವ ಕಾಯ್ದುಕೊಂಡಲ್ಲಿ ರೋಗ ರುಜೀನು ತಡೆಯಬಹುದು ಎಂದು ಸಂಸದರಾದ ಭಗವಂತ ಖೂಬಾ ಅವರು ಹೇಳಿದರು
ಚಿಟಗುಪ್ಪಾ ಪುರಸಭೆಯ ಸಭಾಂಗಣದಲ್ಲಿ ಏ.7 ರಂದು ತಹಸೀಲ್ದಾರ, ತಾಲೂಕು ವೈದ್ಯಾಧಿಕಾರಿಗಳು ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಅವಶ್ಯಕತೆ ಇರುವಲ್ಲಿ ಫಾಗಿಂಗ್ ಮಾಡಿಸಬೇಕು. ಕರೋನಾ ವೈರಾಣು ಹರಡದಂತೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದ ಸಂಸದರು, ಕರೋನಾ ತಡೆಗೆ ಎಲ್ಲ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕು. ಮುಖ್ಯವಾಗಿ ವೈದ್ಯಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಜನರಲ್ಲಿ ಮನವಿ: ಕರೋನಾ ನಿಯಂತ್ರಣದ ವಿಷಯದಲ್ಲಿ ಸಾರ್ವಜನಿಕರ ಪಾತ್ರ ಕೂಡ ಅಷ್ಟೇ ಮಹತ್ವದ್ದಾಗಿದೆ.
ಜನರು ಸ್ಪಂದನೆ ಮಾಡಬೇಕು. ವಿನಾಕಾರಣ ಹೊರಗೆ ಬರಬಾರದು ಎಂದು ಚಿಟಗುಪ್ಪಾ ಜನರಲ್ಲಿ ಸಂಸದರು ಮನವಿ ಮಾಡಿದರು.
ಕರೋನಾ ತಡೆಗೆ ತಾಲೂಕಾಡಳಿತದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಪುರಸಭೆಯಿಂದಲೂ ಹಲವು ಕಾರ್ಯಕ್ರಮಗಳನ್ನು ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆ ಎರಡು ಮತ್ತು ಬಿಸಿಎಂ ಇಲಾಖೆಯ ಒಂದು ಹಾಸ್ಟೇಲ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ಸೇರಿ 60 ಐಸೋಲೇಶನ್ ಬೆಡ್ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ ಮಹಮ್ಮದ್ ಜಿಯಾಉದ್ದೀನ್ ಅವರು ತಿಳಿಸಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ ರಾಜಪುರೋಹಿತ್, ತಾಲೂಕು ವೈದ್ಯಾಧಿಕಾರಿ ಅಶೋಕ ಮೈನಾರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರಾದ ರಾಚಪ್ಪ ಪಾಟೀಲ, ಪುರಸಭೆ ಪರಿಸರ ಅಭಿಯಂತರರಾದ ಪೂಜಾ ಹಾಗೂ ಇನ್ನೀತರ ಅಧಿಕಾರಿಗಳು ಇದ್ದರು.
Be the first to comment