ಲೈನ್ ಮೆನ್ ರವರೇ ನಾಗರೀಕತೆಯ ಭಾಗ್ಯ ಜ್ಯೋತಿಗಳು -ಸಾಮಾಜಿಕ ಕಾಯ೯ಕತ೯ ನಿಂಗೇಶ್ ಎಂ.ಎಸ್.ನಾಯಕ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಕೂಡ್ಲಿಗಿ:-ವಿದ್ಯುತ್ ಇಲ್ಲದ ಪ್ರಪಂಚ ಕಲ್ಪನೆಗೂ ಅಸಾಧ್ಯ.ವಿದ್ಯುತ್ ಜೀವನದ ಅವಿಭಾಜ್ಯ ಅಂಗವಾಗಿದೆ.ಅದನ್ನು ಅಗತ್ಯಕ್ಕನುಗುಣವಾಗಿ ನಾಗರೀಕರಿಗೆ ಸಮಪ೯ಕವಾಗಿ ಒದಗಿಸುವ ಕಾಯ೯ವನ್ನು ಇಲಾಖೆಯ ಸಿಬ್ಬಂದಿಯವರು ಮಾಡುತ್ತಿದ್ದಾರೆ.ಅವರ ಸೇವೆ ಶ್ಲಾಘನೀಯವಾದದ್ದು ಎಂದು ಸಾಮಾಜಿಕ ಕಾಯ೯ಕತ೯ ನಿಂಗೇಶ್ಎಂ.ಎಸ್.ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಲಾಕ್ ಡೌನ್ ಸಂದಭ೯ಹಿರುವ ಕಾರಣ ಎ6ರಂದು.ಕೂಡ್ಲಿಗಿಯ ವಿದ್ಯುತ್ ಇಲಾಖೆಯ ಸಿಬ್ಬಂದಿಯವರಿಗೆ ತಂಪು ಪಾನೀಯ ವಿತರಿಸಿ ಮಾತನಾಡಿದರು.ವಿದ್ಯುತ್ ಇಲಾಖಾಧಿಕಾರಿಗಳು ಪ್ರಮುಖವಾಗಿ ಸಿಬ್ಬಂದಿಗಳು ಕೊರೋನಾದಂತಹ ತುತು೯ಪರಿಸ್ಥಿತಿಯಲ್ಲಿ ಕೆಲ ಗಂಭೀರ ಪರಿಸ್ಥಿತಿಗಳಲ್ಲಿ ಸೈನಿಕರಂತೆ ಕಾಯ೯ನಿವ೯ಹಿಸುತ್ತಾರೆ.

ಲೈನ್ ಮೆನ್ ಅವರೇ ನಾಗರೀಕ ಸಮಾಜಕ್ಕೆ ಬೆಳಕು ನೀಡೋ ಭಾಗ್ಯಜ್ಯೋತಿಗಳಿದ್ದಂತೆ ಎಂದರು.ಲೈನ್ ಮ್ಯಾನ್ ಸೈನಿಕ ರೀತಿಯಲ್ಲಿ ಪ್ರಾಣದ ಹಂಗುತೊರೆದು ಕಾಯ೯ನಿವ೯ಹಿಸುತ್ತಿದ್ದಾರೆ ಎಂದರು.ವೃದ್ಧಾಶ್ರಮದಲ್ಲಿದ್ದ ವೃದ್ಧರಿಗೆ.ಕಥ೯ವ್ಯ ನಿರತ ಪತ್ರಕತ೯ರಿಗೆ.ಸಾವ೯ಜನಿಕ ಆಸ್ಪತ್ರೆ ಸಿಬ್ಬಂದಿಯವರಿಗೆ.ಪಟ್ಟಣ ಪಂಚಾಯ್ತಿ ಪೌರಕಾಮಿ೯ಕರಿಗೆ.ಪೊಲೀಸ್ ಸಿಬ್ಬಂದಿಗೆ.ನಿಂಗೇಶ್ ಎಂ.ಎಸ್.ನಾಯಕ ರವರು ತಮ್ಮ ಗೆಳೆಯರಾದ ಯು.ಸುನೀಲ್.ಜುಬೇರ್.ಪುನೀತ್.ಸಹಯೋಗದೊಂದಿಗೆ ತಂಪು ಪಾನೀಯ ವಿತರಿಸಿದರು.✍️

Be the first to comment

Leave a Reply

Your email address will not be published.


*