ಸಾಹೇಬ್ರಿಗೆ ಹಸಿರು ಪ್ರೀತಿ.? ಕೇಸರಿಯಿಂದ ಆಕ್ರೋಶ .!

ಅಂಕಣ: ಪ್ರಕಾಶ ಮಂದಾರ ಹರಿಹರ

ಅಂಕಣ

ಹರಿಹರ:-ಚೀನಾದಲ್ಲಿ ಜನ್ಮ ತಾಳಿ ಇಡೀ ವಿಶ್ವಾದ್ಯಂತ ತನ್ನ ವಂಶಾಭಿವೃದ್ಧಿಯನ್ನು ವೃದ್ಧಿಸಿಕೊಂಡು ಹೋಗುತ್ತಿರುವ ಕರೊನಾವು ಅನೇಕ ಅವಾಂತರಗಳಿಗೆ ಕಾರಣವಾಗುತ್ತಿದೆ.

ಕರೋನ ಹುಟ್ಟಿನಿಂದ ಜನಸಾಮಾನ್ಯರು ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಹುಟ್ಟು ಇನ್ನೊಂದು ಸಾವಿಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.ಪ್ರಸ್ತುತ ಸನ್ನಿವೇಶ ನೋಡಿದರೆ ಇದು ಸತ್ಯವಾದ ಮಾತು ಎನ್ನುವಂತಾಗಿದೆ .

ವಿಶ್ವದ ಪ್ರತಿ ದೇಶದವರು ಕರೋನಾ ವಿರುದ್ಧ ಮೂರನೇ ಮಹಾಯುದ್ಧವನ್ನು ನಡೆಸುತ್ತಿದ್ದಾರೆ .ಸದ್ಯದ ಪರಿಸ್ಥಿತಿಯಲ್ಲಿ ಕರೋನ ವಿಜಯಶಾಲಿಯಾಗಿ ತನ್ನ ಹೋರಾಟವನ್ನು ಮುಂದುವರಿಸುತ್ತಿದೆ.ವಿಶ್ವದ ನಾನಾ ದೇಶದ ಆಳುವಂಥ ಸೇನಾಧಿಪತಿಗಳು ಕರೋನಾ ವಿರುದ್ಧದ ಯುದ್ಧದಲ್ಲಿ ನಿರಾಶೆಯ ಸೋಲುಗಳನ್ನು ಕಾಣುತ್ತಿದ್ದಾರೆ ,ತಮ್ಮ ದೇಶದ ಜನರ ಸಾವು ನೋವು ನೋಡದೆ ತಮ್ಮ ಪದವಿಯನ್ನು ತ್ಯಾಗ ಮಾಡುತ್ತಿದ್ದಾರೆ, ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ .

ಕರೋನ ವಿರುದ್ಧ ನೇರವಾಗಿ ಹೋರಾಟ ಮಾಡುತ್ತಿರುವವರು ನಮ್ಮ ಖಾಕಿ ರಕ್ಷಕರು, ವೈಟ್ ಸೇವಕರು,ಪಿಂಕ್ ಸಮಾಜ ಸುಧಾರಕರು ಇವರು ಕರೋನ ವಿರುದ್ಧ ಯುದ್ಧದಲ್ಲಿ ನೇರವಾಗಿ ಭಾಗವಹಿಸಿ ನಮ್ಮ ಜನರ ಸಾವು ನೋವಿನ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಮ್ಮನ್ನು ರಕ್ಷಕರಾಗಿ, ಸೇವಕರಾಗಿ, ಸುಧಾರಕರಾಗಿ, ಕಾಪಾಡುತ್ತಿದ್ದಾರೆ .

ನಮ್ಮಗಳ ರಕ್ಷಣೆಗೆ ಹಗಲು, ಇರುಳು ,ತಮ್ಮ ಮನೆ, ಮಠ ,ಮಕ್ಕಳು, ಮಡದಿಯರನ್ನು ಬಿಟ್ಟು ಕರೋನ ವಿರುದ್ಧ ಹೋರಾಟ ಮಾಡುತ್ತಿರುವ ಖಾಕಿ, ವೈಟ್, ಪಿಂಕ್ ,ಇವರ ಮೇಲೆ ಹಸಿರು ಬಣ್ಣ ಹಲ್ಲೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ .?.

ಈ ದೇಶದಲ್ಲಿ ಹಸಿರು ಬಣ್ಣದಿಂದ ದೌರ್ಜನ್ಯಗಳು ಹೆಚ್ಚಾಗುತ್ತಿದೆ ಎಂದು ಕೇಸರಿ ಬಣ್ಣದವರು ತಮ್ಮ ಆಕ್ರೋಶ ಅನೇಕ ದೃಶ್ಯ ಮಾಧ್ಯಮ ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸುತ್ತಿರುವುದನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ .

ಕೇಸರಿ ಬಣ್ಣದ ನೇರ ಆರೋಪ ಈ ದೇಶದಲ್ಲಿ ಕರೋನಾ ವೈರಸ್ ಹೆಚ್ಚಳಕ್ಕೆ ಕಾರಣ ಹಸಿರು ಬಣ್ಣವಾಗಿದೆ .

ಹಸಿರು ಬಣ್ಣದವರು ಈ ದೇಶದಲ್ಲಿ ಕರೋನಾ ಎಂಬ ಭಯೋತ್ಪಾದನೆಯ ಬೀಜವನ್ನು ಪ್ರತಿ ಗ್ರಾಮ ಗ್ರಾಮದ ಮೂಲೆ ಮೂಲೆಗಳಲ್ಲಿ ಬಿತ್ತರಿಸುತ್ತಿದ್ದಾರೆ ಎಂಬ ಆರೋಪವನ್ನು ಕೇಸರಿ ಬಣ್ಣ ಮಾಡುತ್ತಿದೆ .

ಕೇಸರಿ ಬಣ್ಣದ ಆರೋಪಕ್ಕೆ ಕಾರಣ ಹಸಿರು ಬಣ್ಣವೂ ದೆಹಲಿ ಒಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿರುವುದೇ ಕರೋನಾ ವೈರಸ್ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತನ್ನ ವಾದವನ್ನು ಖಾದಿಯ ಮುಂದೆಯೇ ವಾದಿಸುತ್ತಿದೆ .

ಖಾದಿಯು ಈ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ ಹಸಿರು ಬಣ್ಣದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಇದೇ ರೀತಿ ಮುಂದುವರಿಸುತ್ತಾ ಬಂದರೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಿನ್ನೆಯ ದಿನ ಸಂದರ್ಶನದಲ್ಲಿ ಹೇಳಿದ್ದೆ ತಡ ಕೇಸರಿ ಬಣ್ಣ ತುಂಬಾ ನೊಂದು ಕೊಂಡಿದೆ .

ಅದು ಹೇಳುವುದು ಒಂದೇ ಮಾತು ಇನ್ನು ಮುಂದೆ ಖಾಕಿ ,ಬಿಳಿ,ಗುಲಾಬಿ ಬಣ್ಣದವರ ಮೇಲೆ ಹಸಿರು ಬಣ್ಣದಿಂದ ದೌರ್ಜನ್ಯವಾದರೆ ನಾವು ಏನು ಮಾಡಲು ಸಾಧ್ಯವಿಲ್ಲ .ಇದುವರೆಗೂ ನಾವು ಆ ಬಣ್ಣಗಳ ರಕ್ಷಣೆಗೆ ನಿಂತಿದ್ದೇವೆ ಆ ಬಣ್ಣಗಳಿಗೆ ರಕ್ಷಕರಾಗಿ ನಮ್ಮ ಕೃತಜ್ಞತೆ ಭಾವಗಳನ್ನು ಸಲ್ಲಿಸುತ್ತಿದ್ದೇವು.ಈಗ ನಮ್ಮ ಸಾಹೇಬ್ರು ಹಸಿರು ಬಣ್ಣಕ್ಕೆ ತೊಂದರೆ ನೀಡಿದರೆ ಕಠಿಣ ಕ್ರಮ ಎಂದು ಹೇಳಿದ್ದಾರೆ ಇದರಿಂದ ಕೇಸರಿ ಬಣ್ಣ ತುಂಬಾ ನೊಂದು ಕೊಂಡಿದೆ .

ಏನೇ ಹೇಳಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಬಣ್ಣಗಳು ಅತ್ಯವಶ್ಯಕ .ಸಮಾಜದಲ್ಲಿ ಯಾವುದಾದರೂ ಒಂದು ಬಣ್ಣದ ಕೊರತೆಯಾದರೆ ಆ ಸಮಾಜ ಸುಂದರವಾಗಿ ಕಾಣುವುದಿಲ್ಲ .ಖಾದಿ ಸಮಾಜದಲ್ಲಿ ಕಾಮನಬಿಲ್ಲಿನಂತೆ ಎಲ್ಲಾ ಬಣ್ಣಗಳು ರಾರಾಜಿಸುತ್ತ ಇರಲಿ ಎಂಬ ಉದ್ದೇಶದಿಂದ ತನ್ನ ಅಂತಿಮ ತೀರ್ಪನ್ನು ಎಲ್ಲ ಆಯಾಮಗಳಲ್ಲಿ ಯೋಚನೆ ಮಾಡಿ ನೀಡಿರುತ್ತದೆ ಎಂಬ ವಿಚಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕು .

ಏನೇ ಹೇಳಿ ಕರೋನಾ ವೈರಸ್ ನಿಯಂತ್ರಣದಲ್ಲಿ ಬಣ್ಣಗಳ ಪಾತ್ರ ಅತಿ ಮುಖ್ಯವಾಗಿದೆ .ಅವು ತಮ್ಮ ನೈಜ ಬಣ್ಣವನ್ನು ಬದಲಾಯಿಸಿಕೊಳ್ಳದೆ ತಮ್ಮ ಸೇವೆಯನ್ನು ಕಾಯಾ, ವಾಚಾ ,ಮನಸಾ ಮುಂದುವರಿಸಿಕೊಂಡು ಹೋದರೆ ಭವ್ಯ ಭಾರತವು ವಿಶ್ವದ ಗುರುವಾಗಿ ,ಇತರ ದೇಶದವರಿಗೆ ಮಾರ್ಗದರ್ಶಕರಾಗಿ, ಸಲಹೆಯೇ, ಸೂಚನೆಗಳನ್ನು ನೀಡುತ್ತಾ ಬಣ್ಣಗಳ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರುವ ಕೆಲಸ ಮಾಡುವಂತಾಗುತ್ತದೆ .

ವರದಿ ಪ್ರಕಾಶ ಮಂದಾರ ಬರಹಗಾರರು ,
ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ವರದಿಗಾರರು ,
ಮಾಧ್ಯಮ ಸಲಹೆಗಾರರು ದಾವಣಗೆರೆ ,ಶಿವಮೊಗ್ಗ ಉಸ್ತುವಾರಿ ಅಧ್ಯಕ್ಷರು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ (ರಿ)
8880499904.

Be the first to comment

Leave a Reply

Your email address will not be published.


*