ಸಂಸದರಾದ ಭಗವಂತ ಖೂಬಾ ಪ್ರತಿಕ್ರಿಯೆ ಕರೋನಾ ಹಿಮ್ಮೆಟ್ಟಿಸುವ ಕ್ರಮಕ್ಕೆ ಸಂಸದರ ನಿಧಿ, ವೇತನ ಬಳಕೆಗೆ ಕೇಂದ್ರದ ನಿರ್ಧಾರ ಸ್ವಾಗತಾರ್ಹ

ವರದಿ:- ಸುನೀಲ್ ಬಾವಿಕಟ್ಟಿ ಸುದ್ದಿ ಸಂಪಾದಕರು

ಜೀಲ್ಲಾ ಸುದ್ದಿಗಳು

ಬೀದರ್, ದೇಶದ ಬಡವರ, ಮಧ್ಯಮ ವರ್ಗದವರ ಆರೋಗ್ಯ ರಕ್ಷಣೆ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಕರೋನಾ ಹಿಮ್ಮೆಟ್ಟಿಸುವ ಕ್ರಮಕ್ಕಾಗಿ ಸಂಸದರ ನಿಧಿ ಮತ್ತು ಅವರ ವೇತನವನ್ನು ಬಳಸಿಕೊಳ್ಳುವ
ಕೇಂದ್ರ ಸರ್ಕಾರದ ನಿರ್ಧಾರವನ್ನು ತಾವು ಹೃದಯಪೂರ್ವಕವಾಗಿ ಸ್ವಾಗತಿಸುವುದಾಗಿ ಸಂಸದರಾದ ಭಗವಂತ ಖೂಬಾ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೊರೊನಾದಿಂದಾಗಿ ದೇಶದಲ್ಲಿ ಉಂಟಾಗಿರುವ ಸಂಕಷ್ಟದಿಂದ ದೇಶವನ್ನು ಪಾರುಮಾಡಲು ಕೇಂದ್ರ ಸರ್ಕಾರವು ಸದ್ಯಕ್ಕೆ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು ಅಲ್ಲದೇ ಇನ್ನಿತರ ಮುಂಜಾಗ್ರತಾ ಕ್ರಮಗಳು ತೆಗೆದುಕೊಳ್ಳಲಾಗಿದೆ. ಸರ್ಕಾರದ ಈ ಕ್ರಮಗಳಿಗೆ ಸಮಸ್ತ ಭಾರತದ ಜನತೆ ಸಹಕರಿಸುತ್ತಿದ್ದಾರೆ. ಆದರು ಸಹ ಇನ್ನಷ್ಟು ಮುಂಜಾಗ್ರತಾ ಕ್ರಮಗಳು ಮತ್ತು ಕೊರೊನಾವನ್ನು ದೇಶದಿಂದ ಸರ್ವನಾಶ ಮಾಡಿ ದೇಶದ ಜನತೆಯನ್ನು ರಕ್ಷಿಸುವ ಸಲುವಾಗಿ ಸರ್ಕಾರಕ್ಕೆ ಅನುದಾನದ ಅವಶ್ಯಕತೆ ಇರುತ್ತದೆ.
ಅದಕ್ಕಾಗಿ ಕೇಂದ್ರ ಸರ್ಕಾರವು ಪ್ರತಿ ಸಂಸದರಿಂದ 2 ವರ್ಷಗಳ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ನೀಡುವ ಅನುದಾನವನ್ನು 10 ಕೋಟಿ ರೂ.ಗಳನ್ನು ಪೂರ್ತಿಯಾಗಿ ಬಳಸಿಕೊಳ್ಳುತ್ತಿದೆ ಹಾಗೆ ಎಲ್ಲಾ ಸಂಸದರ ಒಟ್ಟು 2 ವರ್ಷಗಳವರೆಗೆ ನೀಡುವ ವೇತನದಲ್ಲಿ ಶೇ.30 ಅನುದಾನವನ್ನು ಕೊರೊನಾ ಸಂಕ್ರಮಣದ ಸರ್ವನಾಶಕ್ಕಾಗಿ ಪಿಎಂ ಕೇರ್ಸ್‍ಗೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ

*ದೇವರಲ್ಲಿ ಪ್ರಾರ್ಥನೆ*:

ದೇಶವು ಇಂದು ಕೊರೊನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಹಲವಾರು ಕಟ್ಟುನಿಟ್ಟಿನ ಕ್ರಮಗಳು ಅನುಸರಿಸುತ್ತಿದೆ. ಕೊರೊನಾ ವಿರುದ್ಧ ನಮ್ಮ ದೇಶ ಗೆಲ್ಲುವುದು ಅವಶ್ಯಕವಾಗಿದೆ. ನಮ್ಮ ದೇಶವು ಆದಷ್ಟು ಬೇಗ ಈ ಮಹಾಮಾರಿ ಕೊರೊನಾದಿಂದ ಮುಕ್ತವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಇದೆ ವೇಳೆ ಸಂಸದರು ತಿಳಿಸಿದ್ದಾರೆ.

*ಕ್ಷೇತ್ರದ ಜನತೆಯಲ್ಲಿ ಮನವಿ*:

ನಾನು ತಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಈ ಎರಡು ವರ್ಷಗಳ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನವನ್ನು ಪಿಎಂ ಕೇರ್ಸ್ ಗೆ ನೀಡುತ್ತಿರುವುದರಿಂದ ಕ್ಷೇತ್ರದ ಜನತೆಯು ಸಂಸದÀರ ಸೃಳೀಯ ಪ್ರದೇಶಾಭಿವೃದ್ಧಿ ನಿಧಿ ಅಡಿಯಲ್ಲಿ ಬೇಡಿಕೆ ಇಟ್ಟಿರುವ ಅಭಿವೃದ್ಧಿ ಕಾಮಗಾರಿಗಳು ಸದ್ಯಕ್ಕೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕ್ಷೆತ್ರದ ಜನತೆ ಸಹಕರಿಸಿ ತನ್ನ ಹೃದಯವಂತಿಕೆಯನ್ನು ಮೆರೆಯಬೇಕೆಂದು ಕೋರುತ್ತೇನೆ.  ನಾನು ನಿಮ್ಮೆಲ್ಲರ ಹಿತಕ್ಕಾಗಿ ತೆಗೆದುಕೊಂಡ ಈ ಕ್ರಮಕ್ಕೆ ತಾವೆಲ್ಲರೂ ಸಹ ಸಹಕರಿಸಿ ಸ್ವಾಗತಿಸಬೇಕೆಂದು ಸಚಿವರು ಕೋರಿದ್ದಾರೆ.

Be the first to comment

Leave a Reply

Your email address will not be published.


*