ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಸುರಪುರ
ಮಾರ್ಚ್ 6 ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುರಪುರ ಮತ್ತು ಹುಣಸಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಗುಳೆಯಿಂದ ಬಂದ ಜನರು ಉಪವಾಸದಿಂದ ಇರಬಾರದೆಂಬ ಉದ್ದೇಶದಿಂದ ಎಲ್ಲ ಕುಟುಂಬದವರಿಗೆ ಪಡಿತರ ಆಹಾರ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ರಾಜೂಗೌಡರು ಹೇಳಿದರು.
ಸೋಮವಾರ ಅವರ ನಿವಾಸದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ನ್ಯಾಯ ಬೆಲೆ ಅಂಗಡಿಯವರಿಗೆ 2-3 ಅಂಗಡಿಗಳಿಗೆ ಜೋಡಣೆ ಮಾಡಿರುವುದರಿಂದ ಅವರು ತಮಗೆ ನೀಡಿದ ಗ್ರಾಮಕ್ಕೆ ಹೋಗಿ ಸರ್ಕಾರಿ ಶಾಲೆ ಅಥವಾ ಅಂಗನವಾಡಿಯಲ್ಲಿ ಎಲ್ಲರಿಗೂ ಪಡಿತರ ಹಂಚಬೇಕು ಒಂದು ವೇಳೆ ಯಾರಿಗಾದರೂ ಹಂಚಿಕೆ ಮಾಡದೆ ದೂರು ಬಂದಲ್ಲಿ ಅಂಥವರ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ.
6 ತಿಂಗಳು ಬೇಲ್ ಸಿಗುವುದಿಲ್ಲ ಎಂದು ಎಚ್ಚರಿಸಿದರು.
ಈಗಾಗಲೇ ಗ್ರಾಮ ಸೇವಕರಿಗೆ ಗುಳೆಯಿಂದ ಬಂದವರ ಪಟ್ಠಿ ಕೊಡಲು ಸೂಚಿಸಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಹೆಬ್ಬೆರಳು ಒತ್ತುವುದನ್ನು ನಿಲ್ಲಿಸಲಾಗಿದೆ ತಮ್ಮ ಮೊಬೈಲ್ ಗೆ ಓಟಿಪಿ ಬರುತ್ತದೆ.
ಇನ್ನೋ ಕೆಲವರ ಆಧಾರ ಕಾರ್ಡ್ ಗೆ ಹಳೆಯ ಮೊಬೈಲ್ ನಂಬರ್ ಹೊಂದಾಣಿಕೆಯಾಗುತ್ತಿಲ್ಲ ಅಂತವರಿಗೂ ಪಡಿತರ ವ್ಯವಸ್ಥೆ ಮಾಡಲಾಗುವುದು ಎಂದರು.
ಇದಕ್ಕಾಗಿಯೇ ಜಾಗೃತ ತಂಡ ಕೂಡಾ ರಚಿಸಲಾಗಿದೆ. ಪ್ರತಿ ವರ್ಷ ಶಾಸಕರ 2 ಕೋಟಿ ಅನುದಾನದಲ್ಲಿ ಕೊರಾನಾ ವೈರಸ್ ಹೋಗಲಾಡಿಸಲು ಆರೋಗ್ಯ ಇಲಾಖೆಗೆ ಉಪಕರಣಗಳು,ಮಾಸ್ಕ್, ಸೇರಿದಂತೆ ಕೊವಿಡ್ -19 ಸಿಎಂ ಪರಿಹಾರ ನಿಧಿಗೆ 50 ಲಕ್ಷ ನೀಡಲಾಗುವುದು ಎಂದರು.
ಸ್ತ್ರಿಶಕ್ತಿ ಸಂಘದವರು ಮಾಸ್ಕ್ ಹೊಲಿದು ಕೊಡಲು ಮುಂದೆ ಬಂದರೆ ಅವುಗಳನ್ನು ಖರೀದಿಸಲಾಗುವುದು ಎಂದರು.
ತಾಲೂಕಿನ ಕರಿಭಾವಿ,ಕೋಳಿಹಾಳದಲ್ಲಿ ನೀರಿನ ಅಭಾವವಿದ್ದು ಕೂಡಲೇ ತಾಲೂಕ ಪಂಚಾಯತ ಇಒ ಅವರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ ಅದೇ ರೀತಿಯಾಗಿ ಗ್ರಾಮೀಣ ಪ್ರದೇಶದಲ್ಲಿ ನೀರಿನ ಅಭಾವವಿದ್ದಲ್ಲಿ ಪಿಡಿಒ ಗಳು ನೋಡಿಕೊಳ್ಳಬೇಕು ಹೊರತು ಕೊರಾನಾ ನೆಪ ಹೇಳಿ ನೀರಿನ ಅಭಾವ ಸೃಷ್ಠಿಯಾದರೆ ಸಹಿಸಿಕೊಳ್ಳುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
Be the first to comment