ಹಸುಗಳ ಸಾವು ಜನರಲ್ಲಿ ಆತಂಕ ಆರಿಕೆ ಉತ್ತರ ನೀಡುತ್ತಿರು ಪಶುವೈದ್ಯರು

ವರದಿ :ಕಾಶಿನಾಥ್ ಹಂಗರಗಿ ಯಡ್ರಾಮಿ

ಜೀಲ್ಲಾ ಸುದ್ದಿಗಳು

ಯಡ್ರಾಮಿ : ಕಲಬುರಗಿಜಿಲ್ಲೆ ಯಡ್ರಾಮಿ ತಾಲೂಕಿನ ಹಂಗರಗಾ (ಬಿ) ಗ್ರಾಮದಲ್ಲಿ ಪ್ರತಿದಿನವೂ ಎರಡು-ಮೂರು ಹಸುಗಳು ಅನುಮಾನಸ್ಪದವಾಗಿ ಮೃತಪಟ್ಟಿದ್ದು ಇದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ದೇವಪ್ಪ ಸಿಂದಗಿ ,ತಿಪ್ಪಣ್ಣ ತಳವಾರ್, ಶ್ರೀಶೈಲ್ ಗೌಡ ಪೊಲೀಸ್ ಪಾಟೀಲ್, ಸುಬ್ಬಣ್ಣ ಗೌಡ ಪೊಲೀಸ್ ಪಾಟೀಲ್ ಹಂಗರಗಾ (ಬಿ) ಗ್ರಾಮದ ಅವರಿಗೆ ಸೇರಿದ ದಿನಕ್ಕೆ ಎರಡು ಮೂರು ಹಸುಗಳು ವಿಷಪೂರಿತ ಕಲ್ಲಂಗಡಿ ಬೇಳೆಯನ್ನು ಮತ್ತು ಪ್ಲಾಸ್ಟಿಕ್ ಸೇವಿಸಿ ಮೃತಪಟ್ಟಿವೆ ಎಂದು ಪಶು ಸಂಗೋಪನ ತಾಲೂಕ ವೈದ್ಯಾಧಿಕಾರಿಗಳಾದ ರಾಜು ದೇಶ್ಮುಖ್ ತಿಳಿಸಿದ್ದಾರೆ.
ಸರಣಿ ಹಸುಗಳ ಸಾವಿನಿಂದ ಹಂಗರಗಾ (ಬಿ) ಗ್ರಾಮದ ಜನ ಭಯಭೀತರಾಗಿ ಪಶು ಸಂಗೋಪನ ಇಲಾಖೆಯ ವೈದ್ಯಾಧಿಕಾರಿಗಳಿಗೆ ಗ್ರಾಮದ ಜನರು ಮತ್ತು ಹೋರಾಟಗಾರರು ಹಸುವಿನ ಸಾವಿಗೆ ಕಾರಣ ಕೇಳಿ ಪ್ರಶ್ನೆ ಮಾಡಿದ್ದಾರೆ ನಮ್ಮ ಬಳಿ ಲ್ಯಾಬ್ ವ್ಯವಸ್ಥೆಯಿಲ್ಲ ಎಂದು ಬೇಜವಾಬ್ದಾರಿ ಹಾರಿಕೆಯ ಉತ್ತರವನ್ನು ನೀಡಿದರು ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಸುವಿನ ಸಾವಿಗೆ ಕಾರಣ ತಿಳಿಯಬೇಕು ಎಂದು ಮಾತಿನ ಜಟಾಪಟಿ ನಡೆಯಿತು ನಂತರ ವೈದ್ಯಾಧಿಕಾರಿಗಳು ಹಸುವಿನ ಪೋಸ್ಟ್ ಮಾರ್ಟಂ ಮಾಡಿ ಲಾಬಿಗೆ ಕಳುಹಿಸುವುದಾಗಿ ಒಪ್ಪಿಕೊಂಡರು.
ಹಸುಗಳು ಮೃತಪಟ್ಟಿರುವ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಶಿವಪುತ್ರಯ್ಯ ಹಿರೇಮಠ್, ತಿಪ್ಪಣ್ಣ ಸಿಂದಗಿ ,ಭಾಗಪ್ಪ ಮಾಗಣಗೇರಿ , ಸಿದ್ದರಾಮ ನಾಯ್ಕೋಡಿ ಹಾಗೂ ಗ್ರಾಮದ ಜನರು ಒತ್ತಾಯಿಸಿದ್ದಾರೆ.
ವರದಿ :ಕಾಶಿನಾಥ್ ಹಂಗರಗಿ

Be the first to comment

Leave a Reply

Your email address will not be published.


*