ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಸುರಪುರ
ಇಡೀ ದೇಶಾದ್ಯಂತ ಹೊರಡಿಸಲಾಗಿರುವ ಲಾಕ್ ಡೌನ್ ಆದೇಶ ಉಲ್ಲಂಘನೆ ಆಗದಿರಲಿ ಎನ್ನುವ ಉದ್ದೇಶದಿಂದ ಕಿರಾಣಿ ಮತ್ತು ಹಣ್ಣು ತರಕಾರಿ ಅಂಗಡಿಗಳನ್ನು ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿಯವರೆಗೆ ತೆರೆದಿರಲು ಅವಕಾಶವನ್ನು ನೀಡಲಾಗಿತ್ತು.
ಆದರೆ ಇಂದು ಜಿಲ್ಲಾಧಿಕಾರಿಗಳ ಆದೇಶದಂತೆ ಇನ್ನು ಮುಂದೆ ಮೆಡಿಕಲ್ ಮತ್ತು ಹಾಲು ಹಾಗೂ ಆಸ್ಪತ್ರೆಗಳನ್ನು ಹೊರತುಪಡಿಸಿ ಇನ್ನುಳಿದಂತೆ ಕಿರಾಣಿ, ತರಕಾರಿ ಹಣ್ಣಿನ ಅಂಗಡಿಗಳನ್ನು ಬೆಳಿಗ್ಗೆ ೦೪ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ಮಾತ್ರ ತೆರೆದಿರಲಿವೆ ಸಾರ್ವಜನಿಕರು ಏನೇ ಖರೀದಿಸುವದಿದ್ದರೆ ಮದ್ಯಾಹ್ನ ೧೨ ಗಂಟೆಯೊಳಗೆ ಮಾತ್ರ ತೆಗೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತ ಜೀವನ್ ಕುಮಾರ್ ಕಟ್ಟಿಮನಿ ತಿಳಿಸಿದ್ದಾರೆ.
ನಮ್ಮ ಟಾಸ್ಕ್ ಫೋರ್ಸ್ ಸಭೆ ನಡೆಸಿ ಬೆಳಿಗ್ಗೆ ೦೪ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ.
ಅದರಂತೆ ಪೆಟ್ರೋಲ್ ಬಂಕ್ ಗಳು ಮಾತ್ರ ಬೆಳಿಗ್ಗೆ ೦೪ ಗಂಟೆಯಿಂದ ಸಂಜೆ ೦೪ ಗಂಟೆಯವರೆಗೆ ತೆಗೆದಿರಲಿವೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು..
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ ಅವರು ಜಿಲ್ಲಾಧಿಕಾರಿಗಳು ಸಂಜೆ ೦೪ ಗಂಟೆಯವರೆಗೆ ತೆರೆಯುವ ಅವಕಾಶವನ್ನು ಆಯಾ ತಾಲ್ಲೂಕಿನ ಆಡಳಿತಕ್ಕೆ ನಿರ್ಣಯ ಕೈಗೊಳ್ಳಲು ತಿಳಿಸಿದ್ದಾರೆ.
Be the first to comment