ಕೂಡ್ಲಿಗಿ ಪಪಂ:ಸುರಕ್ಷತೆ ಪಾಲಿಸದ ಪೌರಕಾಮಿ೯ಕರು,ಜೀವನದೊಂದಿಗೆ ಜೂಜಾಟ ಸಲ್ಲದು-ಕಾಮಿ೯ಕ ಮುಖಂಡರ ಖಂಡನೆ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಕೂಡ್ಲಿಗಿ:- ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಪೌರಕಾಮಿ೯ಕರು ಯಾವುದೇ ಕನಿಷ್ಠ ಸುರಕ್ಷತೆಗಳಿಲ್ಲದೇ ತಮ್ಮ ಕಾಯ೯ನಿವ೯ಹಿಸುತ್ತಿದ್ದಾರೆ.ಇದು ಅವರು ತಮ್ಮ ಜೀವ ಹಾಗು ತಮ್ಮನ್ನೇ ನಂಬಿರುವವರ ಜೀವನದೊಂದಿಗೆ ಆಡುವ ಜೂಜಾಟವಾಗಿದೆ.

ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಅವಕಾಶ ಕೊಡಬಾರದು.ಸೂಕ್ತ ಸುರಕ್ಷತಾ ಕ್ರಮಗಳ ಪಾಲನೆ ಖಡ್ಡಾಯ ಮಾಡಬೇಕು ಎಂದು ವಿವಿದ ಕಾಮಿ೯ಕ ಮುಖಂಡರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಈ ಮೂಲಕ ಪಪಂ ಅಧಿಕಾರಿಗೆ ಸೂಚಿಸಿದ್ದಾರೆ.ಕೊರೋನಾ ಮಹಾಮಾರಿ ಭಯದವಾತಾವರಣ ಇದ್ದಾಗ್ಯೂ ಕಾಮಿ೯ಕರು ಯಾವುದೇ ಸುರಕ್ಷತೆಗಳಿಲ್ಲದೇ ತ್ಯಾಜ್ಯವಿಲೇವಾರಿ.ಚರಂಡಿಗಳ ಸ್ವಚ್ಚತೆ.ಸೇರಿದಂತೆ ಇತರೆ ಕಾಯ೯ಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ ಇದು ನಿಲ್ಲಬೇಕು.ಹಾಗೇ ಮುಂದುವರದಲ್ಲಿ ಕಾಮಿ೯ಕ ಹಿತಾಸಕ್ತಿ ಮೇರಿಗೆ ಪಪಂ ಇಲಾಖಾಧಿಕಾರಿಗಳ ವಿರುದ್ಧ ಕಾಮಿ೯ಕ ಸುರಕ್ಷತಾ ನಿಯಮದಡಿ ನ್ಯಾಯಾಲಯಕ್ಕೆ ದೂರು ನೀಡಲಾಗುವುದೆಂದು ಕಾಮಿ೯ಕ ಮುಖಂಡರು ತಿಳಿಸಿದ್ದಾರೆ.ಕೆಲಸಕ್ಕೆ ಹಾಜರಾಗುವವರು ಕೈಕವಚಗಳು.ಮಾಸ್ಕ್.ಕಾಲ್ಕವಚಗಳು ಸೇರಿದಂತೆ ಅಗತ್ಯ ಸುರಕ್ಷತಾ ಸಲಕರಣೆಗಳನ್ನು ಹೊಂದಿರಲೇಬೇಕು ಎಂದರು. ಕೊರೋನಾ ರೋಗದ ಭಯದ ವಾತಾವರಣದಲ್ಲಿಯೂ ಪಟ್ಟಣ ಪಂಚಾಯ್ತಿ ಪೌರಕಾಮಿ೯ಕರು ಅಗತ್ಯ ಸುರಕ್ಷತಾ ಸಾಮಾಗ್ರಿ ಹಾಗು ಉಡುಪುಗಳನ್ನು ಧರಿಸದೇ ಇದ್ದು.ಈ ಮೂಲಕ ಕಾಮಿ೯ಕರು ತಮ್ಮ ಜೀವ ಹಾಗು ಜೀವನ ಮತ್ತು ಅವರ ಕುಟುಂಬಗಳ ಜೀವನದೊಂದಿಗೆ ಅವರೇ ಆಡುವ ಜೂಜಾಟವಾಗಿದೆ.ಇದಕ್ಕೆ ಪಪಂ ಅಧಿಕಾರಿಗಳೇ ಪರೋಕ್ಷವಾಗಿ ಸಹಕಾರ ನೀಡಿದಂತಾಗುತ್ತದೆ. ಕಾರಣ ಅವರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರಿದ್ದಲ್ಲಿ.ಕಥ೯ವ್ಯ ಸಂದಭ೯ದಲ್ಲಿ ಜರುಗುವ ಅನಾಹುತಗಳಿಗೆ ಇಲಾಖಾಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಪೌರಕಾಮಿ೯ಕರು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಖಡ್ಡಾಯಗೊಳಿಸಿ ಸಂಬಂಧಿಸಿದ ಅಧಿಕಾರಿ ಕ್ರಮ ಜರುಗಿಸಬೇಕಿದೆ.ಎಂದು ಕಾಮಿ೯ಕ ಮುಖಂಡರು ಹಾಗು ವಿವಿದ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಈ ಮೂಲಕ ಒತ್ತಾಯಿಸಿದ್ದಾರೆ.

 

Be the first to comment

Leave a Reply

Your email address will not be published.


*