ಲಿಂಗಸ್ಗೂರನಲ್ಲಿ ಇಬ್ಬರು ಕರೋನ‌ ಶಂಕಿತರ ಪತ್ತೆ

ವರದಿ: ಅಮರೇಶ ಕಾಮನಕೇರಿ ಸಂಪಾದಕರು

ರಾಜ್ಯದ ಸುದ್ದಿಗಳು

ಲಿಂಗಸ್ಗೂರ-:- ಇಡೀ ಜಗತ್ತನೆ ಲಾಕ ಡೌನ ಆಗುವಂತೆ ಮಾಡಿರುವ ಮಾಹಾ ಮಾರಿ ಕರೋನ ವೈರಸ ಇಂದು ಲಿಂಗಸ್ಗೂರುನ ಇಬ್ಬರಿಗೆ ತಗುಲಿರಬಹುದು ಎಂದು ಜೀಲ್ಲಾ ಆಸ್ಪತ್ರೆಗೆ ತಪಾಸಣೆ ಕಳಿಸಲಾಗಿದೆ.

ಲಿಂಗಸ್ಗೂರ ಸ್ಥಳೀಯ ವಿವೇಕಾನಂದ ನಗರದ ನಿವಾಸಿಗಳಾದ ಇವರು ಬೆಂಗಳೂರುನಿಂದ ಆಗಮಿಸಿದು ಆಗಮಿಸುವ ವೇಳೆ ಬಾಗಲಕೋಟದಲ್ಲಿ ಮೃತನಾದ ವ್ಯಕ್ತಿಯ ಮಕ್ಕಳು ಆಗಮಿಸಿದ ವಾಹನದಲ್ಲೆ ಆಗಮಿಸಿದ್ದಾರೆ. ಬೆಂಗಳೂರು ನಿಂದ 30 ಜನರನು ಹೊತ್ತು ತಂದ ವಾಹನದಲ್ಲಿ ಬಂದಿರುವ ಇವರು ಇಲಕಲ್ಲನಲ್ಲಿ ಮೃತನ ಮಕ್ಕಳು ಇಳಿದು ಬೇರೊಂದು ವಾಹನದಲ್ಲಿ ಬಾಗಲಕೋಟಗೆ ಪ್ರಯಾಣ ಬೇಳೆಸಿದ್ದಾರೆ.

ಬಾಗಲಕೋಟದಲ್ಲಿ ಮೃತನಾದ ವ್ಯಕ್ತಿ ಸಂಪೂರ್ಣ ಮಾಹಿತಿ ಕಲೆ ಹಾಕುವಾಗ ಲಿಂಗಸ್ಗೂರನ ಇಬ್ಬರು ಮೃತ ವ್ಯಕ್ತಿಯ ಮಗನ ಸಂಪರ್ಕಕ್ಕೆ ಬಂದಿದ್ದು ಮತ್ತು ಪ್ರಯಾಣ ಮಾಡಿದ ಮಾಹಿತಿ ಸಿಕ್ಕಿದೆ ಈ ಖಚಿತ ಮಾಹಿತಿ ಹೊಂದಿಗೆ ವಿವೇಕಾನಂದ ನಗರದ ಯುವತಿ ಮತ್ತು ಯಾದವಾಡ ಆಸ್ಪತ್ರೆ ಸಮೀಪ ಮನೆ ಇರುವ ಯುವಕನ ವಿಚಾರಸಿ ತಪಾಸಣೆಗಾಗಿ ರಾಯಚೂರು ಜೀಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಯಿತು

ಇಬ್ಬರನ್ನೂ ವಿಚಾರಿಸಿದ್ದಾಗ ಬೆಂಗಳೂರು ನಿಂದ ಬಂದಿದ್ದು ಕರೆ ನಮ್ಮ ಜೋತೆ ಕಸಬ ಲಿಂಗಸ್ಗೂರ ಆರು ಜನ ಬಂದಿದ್ದಾರೆ ಅವರು ಕಸಬ ಲಿಂಗಸ್ಗೂರ ನಲ್ಲಿ ಇಳಿದುಕೊಂಡಿದ್ದಾರೆ ಎಂದು ವಿಚಾರಣೆ ವೇಳೆ ಮಾಹಿತಿ ನೀಡಿದ್ದು ಆರು ಜನರನ್ನು ಮಾಹಿತಿ ಕಲೆ ಹಾಕಿ ಅವರನ್ನು ಪರೀಕ್ಷಗೆ ಒಳಪಡಿಸಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

ರಾಯಚೂರು ಜೀಲ್ಲೆಯಲ್ಲಿ ಇದುವರೆಗೂ ಪಾಸಿಟಿವ್ ಕರೋನ ಪ್ರಕರಣಗಳೂ ಇಲ್ಲದೆ ಇದ್ದರಿಂದ ನಿರಾತಂಕವಾಗಿದ ಜೀಲ್ಲೆಯ ಜನತೆ ಇಂದು ಬೆಚ್ಚಿ ಬಿದ್ದಿದೆ ಜೀಲ್ಲೆಗೆ ಮಾಹಾಮಾರಿ ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ ಜೀಲ್ಲಾಡಳಿತಕ್ಕೆ ಈ ಪ್ರಕರಣ ಸವಾಲಾಗಿ ಪರಿಗಣಿಸಿದೆ.ಸೊಂಕಿತರ ಸಂಪರ್ಕದಿಂದ ಬಂದಿರುವ ಈ ಸೋಂಕಿನ ಪ್ರಕರಣದಿಂದ ಪಟ್ಟಣ ಜನತೆ ತಲ್ಲಣ ಗೋಂಡಿದ್ದಾರೆ.

ಶಂಕಿತ ಸೋಂಕಿತರನ್ನು ತಪಾಸಣೆಗೆ ರವಾನಿಲು ತಹಶಿಲ್ದಾರರಾದ ಚಾಮರಾಜ ಪಾಟೀಲ್ ಡಿವೈಎಸಪಿ ಸಂಗಪ್ಪ ಎಸ ಹುಲ್ಲೂರು ಸಿಪಿಆಯ್ ಯಶವಂತ ಬಿಸ್ನಳಿ,ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ರುದ್ರಗೌಡ ಪಿಎಸೈ ಪ್ರಕಾಶರೆಡ್ಡಿ ಡಂಬಳ್, ಪುರಸಭೆ ಮುಖ್ಯಾಧಿಕಾರಿ ಕೆಕೆ ಮುತ್ತಪ್ಪ , ಕಂದಾಯ ಇಲಾಖೆಯ ವಿನಯ ಕುಮಾರ ಸೇರಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಪುರಸಭೆಯ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಇದ್ದರು

Be the first to comment

Leave a Reply

Your email address will not be published.


*