ಜೀಲ್ಲಾ ಸುದ್ದಿಗಳು
ಬಳ್ಳಾರಿ ಕೂಡ್ಲಿಗಿ ತಾಲೂಕು ಸಿದ್ದಾಪುರ,ಸಾವ೯ಜನಿಕರೇ ನಮ್ಮ ನಿಮ್ಮೆಲ್ಲರ ಜೀವ ಮತ್ತು ಜೀವನ ಲಾಕ್ ಡೌನ್ ನ್ನು ನಾವೆಷ್ಟು ಪಾಲಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ.ಎಂದು ಆಶಾಕಾಯ೯ಕತೆ೯ ಗೀತಮ್ಮ ಹೇಳುವ ಮೂಲಕ ಜನತೆಯಲ್ಲಿ ಕೊರೋನಾ ರೋಗದ ಕುರಿತು ಹಾಗೂ ಲಾಕ್ ಔಟ್ ಮಹತ್ವದ ಕುರಿತು ಅರಿವು ಮೂಡಿಸಿದರು.ಕೊರೋನಾ ಜಾಗೃತಿ ಕರಪತ್ರಗಳನ್ನು ಜನತೆಗೆ ವಿತರಿಸುತ್ತ ಸಹಪಾಟಿಗಳೊಡಗೂಡಿ ಗ್ರಾಮಗಳಲ್ಲಿ ಸಂಚರಿಸಿದರು. ಮನೆ ಮನೆಗಳಿಗೆ ತೆರಳಿ ಜನತೆಯಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸಿ ಅವರಿಂದ ಅಗತ್ಯ ವಿವಿರಗಳನ್ನು ಪಡೆದರು.ಅವರು ಮಾತನಾಡಿ ಬೆಂಗಳೂರಿನಲ್ಲಿ ಸಕಾ೯ರಿಸೇವೆಯಲ್ಲಿದ್ದ ಆಶಾಕಾಯ೯ಕಾತೆ೯ ಕೃಷ್ಣವೇಣಿಯ ಮೇಲೆ ಕಿಡಿಗೇಡಿಗಳು ಹಲ್ಲೆನಡೆಸಿರುವುದು ಅನಾಗರೀಕ ಗೂಂಡಾವತ೯ನೆಯಾಗಿದೆ. “ಸಕಾ೯ರಿ ಸೇವೆಗೆ ಅಡ್ಡಿ”ಪಡಿಸಿದ ಮತ್ತು ಮಹಿಳಾ”ದೌಜ೯ನ್ಯ ನಿಯಂತ್ರಣ ಕಾಯ್ದೆ”ಅನ್ವಯ ಕಿಡಿಗೇಡಿಗಳ ಮೇಲೆ ಪ್ರಕರಣ ದಾಖಲು ಮಾಡಿ ಶೀಘ್ರವೇ ಬಂಧಿಸಬೇಕೆಂದು ಆಶಾಕಾಯ೯ಕತೆ೯ ಗೀತಮ್ಮ ಈ ಮೂಲಕ ಸಕಾ೯ರಕ್ಕೆ ಒತ್ತಾಯಿಸಿದ್ದಾರೆ.ಮಹಿಳಾ ಮುಖ್ಯಪೇದೆ ಮಹಾಲಕ್ಷ್ಮೀ.ಪೇದೆ ಪ್ರೇಮಲತಾ.ಅಂಗನವಾಡಿಯ ಭಾಗ್ಯಮ್ಮ.ದಲಿತ ಮುಖಂಡ ಈಶ್ವರಪ್ಪ.ಗ್ರಾಮಪಂಚಾಯ್ತಿ ಸದಸ್ಯ ಶಿವಪ್ರಸಾದ.ಅಂಜಿನಪ್ಪ.ರವಿಕುಮಾರ.ನೀರಗಂಟಿ ಮಲಿಯಪ್ಪ.ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು.✍️
Be the first to comment