ಕರೋನಾ ಜಾಗೃತಿಗಾಗಿ ನಮ್ಮ ನಡೆ ಗ್ರಾಮ ಪಂಚಾಯಿತಿಗಳ ಕಡೆ ಎಂಬ ವಿನೂತನ ಅಭಿಯಾನವನ್ನು ನಮ್ಮಅಂಬಿಗ ನ್ಯೂಸ್‌ ವಾಹಿನಿಯಿಂದ ಹಮ್ಮಿಕೊಳ್ಳಲಾಗಿದೆ .

ವರದಿ: ಪ್ರಕಾಶ ಮಂದಾರ ದಾವಣಗೆರೆ

ರಾಜ್ಯ ಸುದ್ದಿಗಳು

ನಮ್ಮ ನಡೆ ಗ್ರಾಮ ಪಂಚಾಯತ ಕಡೆ ಕಾರ್ಯಕ್ರಮದ ಮೂಲಕ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಕರೋನಾ ವೈರಸ್ ನಿಯಂತ್ರಣದಲ್ಲಿ ತಮ್ಮ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ಪ್ರಾಮಾಣಿಕ ನಿಭಾಯಿಸುತ್ತಿದ್ದಾರೆ ಎಂಬುದನ್ನು ನಮ್ಮ ದೃಶ್ಯ ಮಾಧ್ಯಮದ ಮೂಲಕ ಜನಸಾಮಾನ್ಯರ ಮುಂದೆ ಇಡುವ ಹಾಗೂ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನವಾಗಿ ನಮ್ಮ ವಾಹಿನಿಯಿಂದ ಒಂದು ಪ್ರಯತ್ನವನ್ನು ಮಾಡುತ್ತಿದ್ದೇವೆ.

ಇಂದು ನಮ್ಮ ವಾಹಿನಿಯ ಮಾಧ್ಯಮ ಪ್ರತಿನಿಧಿ ಹರಿಹರ ತಾಲ್ಲೂಕಿನ ನಂದಿಗಾವಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳು ಕರೊನಾ ವೈರಸ್ ನಿಯಂತ್ರಣದಲ್ಲಿ ಎಷ್ಟರ ಮಟ್ಟಿಗೆ ತಮ್ಮ ಕಾರ್ಯದಕ್ಷತೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂಬ ವರದಿಯನ್ನು ನಮ್ಮ ದೃಶ್ಯ ಮಾಧ್ಯಮದ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಈ ಗ್ರಾಮ ಪಂಚಾಯಿತಿಯಲ್ಲಿ ಕರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನರಲ್ಲಿ ಯಾವುದೇ ರೀತಿಯ ಮುಂಜಾಗೃತಾ ಕ್ರಮದ ಅರಿವನ್ನು ಸಂಬಂಧಿಸಿದ್ದ ಇಲಾಖೆಯ ಅಭಿವೃದ್ಧಿ ಅಧಿಕಾರಿಯಾದ ಚಂದ್ರಶೇಖಪ್ಪ ಇವರು ನಿರ್ವಹಣೆ ಮಾಡುತ್ತಿಲ್ಲ .ತಿಂಗಳಿಗೆ ಒಂದು ದಿನ ಮಾತ್ರ ಕಚೇರಿಗೆ ಬಂದು ಹೋಗುತ್ತಿದ್ದಾರೆ ಇವರು ನಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಚರಂಡಿಯ ಸ್ವಚ್ಛತೆಯನ್ನು ಮಾಡಿಲ್ಲ ರಾಸಾಯನಿಕ ಸಿಂಪಡಣೆ ಮಾಡುತ್ತಿಲ್ಲ ,ಕೇಳಿದರೆ ನೀವೇ ಮಾಡಿಕೊಳ್ಳಿ ಎಂದು ಬೇಜವಾಬ್ದಾರಿತನದ ಉತ್ತರವನ್ನು ನೀಡುತ್ತಾರೆ .ಇಂಥ ಬೇಜವಾಬ್ದಾರಿತನ ತೋರುವ ಅಧಿಕಾರಿಗಳಿಂದಲೇ ಕರೋನಾ ವೈರಸ್ ನಿಯಂತ್ರಣಕ್ಕೆ ಬಾರದೆ ದೇಶಾದ್ಯಂತ ತಾಂಡವವಾಡುತ್ತಿದೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರಹಾಕಿದರು.

ಇನ್ನು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಇತರ ಸಿಬ್ಬಂದಿಗಳನ್ನು ಮಾತನಾಡಿಸಿದರೆ ನಾವು ಏನು ಮಾಡೋಣ ಸಾರ್. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಿಂಗಳಿಗೊಮ್ಮೆ ಬಂದು ಹೋಗುತ್ತಾರೆ ,ನಾವು ಏನೇ ಕೆಲಸ ಕಾರ್ಯಗಳನ್ನು ಮಾಡಬೇಕಾದರೆ ಅವರ ಅವಶ್ಯಕತೆ ತುಂಬಾ ಇರುತ್ತದೆ .ಅವರು ಆದೇಶ ನೀಡಿದರೆ ನಾವು ಏನಾದರೂ ಮಾಡಲು ಸಾಧ್ಯವಾಗುತ್ತದೆ ಚರಂಡಿಯ ಸ್ವಚ್ಛತೆ ಮಾಡಿಸಲು ಜನರನ್ನು ಕರೆಸಬೇಕಾಗುತ್ತದೆ.
ಅವರಿಗೆ ಕೂಲಿಯನ್ನು ನೀಡಬೇಕು ,ಅದಕ್ಕೆ ಅಭಿವೃದ್ಧಿ ಅಧಿಕಾರಿಗಳು ಇರಬೇಕು ಆದರೆ ನಮ್ಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖಪ್ಪ ರವರು ಬರುವುದೇ ತಿಂಗಳಿಗೊಮ್ಮೆ ಕುಳಿತುಕೊಂಡೇ ಎಲ್ಲವನ್ನೂ ಆದೇಶಿಸುತ್ತಾರೆ ನಾವು ಹೇಗೆ ಕೆಲಸ ಮಾಡಬೇಕು ನೀವೇ ಹೇಳಿ ಎಂದು ತಮ್ಮ ಅಳಲನ್ನು ನಮ್ಮ ಮಾಧ್ಯಮದ ಕ್ಯಾಮೆರಾದ ಮುಂದೆ ತೋಡಿಕೊಂಡರು.

ಇನ್ನು ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರೋನಾ ವೈರಸ್ ನಿಯಂತ್ರಣ ಸಂಬಂಧಿಸಿದಂತೆ ಆರೋಗ್ಯ ಸಹಾಯಕಿಯರು ,ಆಶಾ ಕಾರ್ಯಕರ್ತರು ,ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯಿತಿಯ ಕೆಲವು ಸಿಬ್ಬಂದಿಗಳು ಕರೋನಾ ವೈರಸ್ ನಿಯಂತ್ರಣದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗುತ್ತಿದ್ದಾರೆ ಆದರೆ ಇಲ್ಲಿ ಕಾರ್ಯನಿರ್ವಹಿಸುವ ಅಭಿವೃದ್ಧಿ ಅಧಿಕಾರಿ ಚಂದ್ರಶೇಖಪ್ಪ ಇವರಿಂದ ಇವರೆಲ್ಲರ ಶ್ರಮ ‘ನೀರಿನಲ್ಲಿ ಹುಣಸೆಹಣ್ಣು ಹಿಂಡಿದಂತಾಗಿದೆ.

ಇನ್ನು ಮುಂದಾದರೂ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ನಂದಿಗಾವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ ಅವರನ್ನು ಬೇರೆ ಕಡೆ ವರ್ಗಾವಣೆಗೊಳಿಸಿ ಉತ್ತಮ ಅಭಿವೃದ್ಧಿ ಅಧಿಕಾರಿಯನ್ನು ನೇಮಕ ಮಾಡುತ್ತಾರೆ ಹಾಗೂ ಕರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾವೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಸಿಬ್ಬಂದಿಗಳಿಗೆ ಕರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಅಗತ್ಯ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುವಂತೆ ಆದೇಶ ನೀಡುತ್ತಾರೆ ಕಾದು ನೋಡಬೇಕಾಗಿದೆ .

Be the first to comment

Leave a Reply

Your email address will not be published.


*