ವೈದ್ಯರು, ಶುಶ್ರೂಷಕರ ಹುದ್ದೆಗಳಿಗೆ ಸಂದರ್ಶನ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಯಾದಗಿರಿ,

ಏಪ್ರಿಲ್ 02 ಕೋವಿಡ್-19 ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞವೈದ್ಯರು/ ವೈದ್ಯರು ಹಾಗೂ ಶುಶ್ರೂಷಕರನ್ನು ಗುತ್ತಿಗೆ ಆಧಾರದ ಮೇಲೆ 6 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಏಪ್ರಿಲ್ 3ರಿಂದ ಸಂದರ್ಶನ ನಡೆಯಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ನಾರಾಯಣಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೊನಾ ವೈರಸ್ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರತಿ ಜಿಲ್ಲಾಸ್ಪತ್ರೆಗೆ ತಾತ್ಕಾಲಿಕವಾಗಿ ವೈದ್ಯರು/ತಜ್ಞರು, ಶುಶ್ರೂಷಕರ ಹುದ್ದೆಗಳನ್ನು ಗರಿಷ್ಠ 6 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಮಂಜೂರಾತಿ ನೀಡಿದೆ.

ಅದರಂತೆ ಯಾದಗಿರಿ ಜಿಲ್ಲೆಗೆ ವೈದ್ಯರು/ತಜ್ಞರ 10 ಹುದ್ದೆಗಳಿಗೆ ಪ್ರತಿ ತಿಂಗಳು 60,000 ರೂ. ವೇತನ ಇದ್ದು, ಶುಶ್ರೂಷಕರ 20 ಹುದ್ದೆಗಳಿಗೆ ಪ್ರತಿ ತಿಂಗಳು 20,000 ರೂ. ವೇತನ ನಿಗದಿಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳನ್ನು ತೆಗೆದುಕೊಂಡು ವಾಕ್-ಇನ್-ಇಂಟರ್‍ವ್ಯೂವ್‍ಗೆ ಹಾಜರಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಿದ ಶುಶ್ರೂಷಕರಿಗೆ ಮೊದಲ ಆದ್ಯತೆ ನೀಡಲಾಗುವುದು.
ರಾಜ್ಯಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆಸ್ಪತ್ರೆಗಳಲ್ಲಿನ ಇನ್‍ಸೆಂಟಿವ್ ವಾರ್ಡ್ ಹಾಗೂ ಐಸೊಲೇಷನ್ ವಾರ್ಡ್‍ಗಳಲ್ಲಿ ದಿನದ 24 ಗಂಟೆಗಳು ಕೋವಿಡ್ ಶಂಕಿತರು ಹಾಗೂ ಸೋಂಕಿತರ ನಿಗಾವಣೆಗಾಗಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಒಂದುತಂಡದಲ್ಲಿ 10 ಸಿಬ್ಬಂದಿಗಳ ಅವಶ್ಯಕತೆ ಇರುತ್ತದೆ. ಇಲಾಖೆಯಲ್ಲಿ ಶೇ.30ರಷ್ಟು ಹುದ್ದೆಗಳು ಖಾಲಿ ಇದ್ದು, ಆಸ್ಪತ್ರೆಗಳಲ್ಲಿ ಪ್ರಸ್ತುತ ಸಾಂಕ್ರಾಮಿಕ ನಿರ್ವಹಣೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*