ಜೀಲ್ಲಾ ಸುದ್ದಿಗಳು
ಬಳ್ಳಾರಿ ಕೂಡ್ಲಿಗಿ ಪಟ್ಟಣದ ತಹಶಿಲ್ದಾರವರ ಕಚೇರಿಯಲ್ಲಿ ಅಪರಾ ಜಿಲ್ಲಾಧಿಕಾರಿಗಳಾದ ಮಂಜುನಾಥರವರ ಅಧ್ಯಕ್ಷತೆಯಲ್ಲಿ.ಕೊರೋನಾ ಸೋಂಕು ನಿಯಂತ್ರಿಸುವ ಕುರಿತು ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರ ನೇತೃತ್ವದಲ್ಲಿ ತಾಲೂಕು ಮಟ್ಟದ ವಿವಿದ ಇಲಾಖಾಧಿಕಾರಿಗಳ ಸಭೆ ಜರುಗಿತು.ಮಂಜುನಾಥ ರವರು ಮಾತನಾಡಿ ಮಹಾಮಾರಿ ಕೊರೋನಾ ಸೋಂಕು ರಾಜ್ಯದ ಹಲವೆಡೆಗಳಲ್ಲಿ ಹರಡಿದ್ದು ಜನತೆಯನ್ನ ಭಯಭೀತಿಗೊಳಿಸಿದೆ.ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಬೇಕಿದೆ. ಅಗತ್ಯವಾದರೆ ಖಾಸಗೀ ಆಸ್ಪತ್ರೆಗಳನ್ನು ಕಾಲಿ ಇರುವ ಸಕಾ೯ರಿ ಕಟ್ಟಡಗಳನ್ನು ವಸತಿ ನಿಲಯಗಳನ್ನು ಬಳಸಿಕೊಳ್ಳಬಹುದಾಗಿದೆ.ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಜನವಸತಿ ಸ್ಥಳಗಳಲ್ಲಿ ನೈಮ೯ಲ್ಯತೆ ಕಾಪಾಡಿಕೊಳ್ಳಬೇಕಿದೆ.ಕೊರೋನಾ ಸೋಂಕು ಹರಡದಂತಹ ಅಗತ್ಯ ಮುಂಜಾಗೃತ ಕ್ರಮಗಳನ್ನು ಎಲ್ಲರೂ ಪಾಲಿಸುವಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಿದೆ.ಅಪರಿಚಿತರು ಬೇರೆಡೆಯಿಂದ ವಾಪಾಸಾಗುವ ವ್ಯಕ್ತಿಯನ್ನು ಸೂಕ್ತ ತಪಾಸಣೆಗೆ ಒಳಪಡಿಸಬೇಕು ಎಂದರು.ಕೂಡ್ಲಿಗಿ ತಾಲೂಕಿನಲ್ಲಿ ಸಿದ್ದಾಪುರ.ಕಸಾಪುರ.ಆಲೂರು ಗಳಲ್ಲಿ ಒಟ್ಟು ಮೂರು ಚೆಕ್ ಪೋಸ್ಟ್ ಗಳಿದ್ದು.ಪೊಲೀಸ್ ಇಲಾಖಾಧಿಕಾರಿಗಳು ಹೊರಗಿನಿಂದ ಸೋಂಕಿತರು ಒಳ ನುಸುಳದಂತೆ ತೀವ್ರಕಟ್ಟೆಚ್ಚರ ವಹಿಸಬೇಕಿದೆ. ಸಕಾ೯ರ ಆದೇಶಿಸಿರುವ ಲಾಕ್ ಡೌನ್ ಯಶಸ್ವಿ ಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು. ಕೊರೋನಾ ವಿರುದ್ಧದ ಸಕಾ೯ರದ ಸೆಣಸಾಟದಲ್ಲಿ ಆರೋಗ್ಯ ಇಲಾಖೆಯವರು ಸೈನಿಕರಂತೆ ಕಾಯ೯ನಿವ೯ಹಿಸುತ್ತಿದ್ದಾರೆ.ಈ ಸಂದಭ೯ದಲ್ಲಿ ಎಲ್ಲಾ ಇಲಾಖೆಯವರು ಸಕಾ೯ರದ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಸಹಕರಿಸಬೇಕಿದೆ.ಆರೋಗ್ಯ ಇಲಾಖೆಯವರೊಂದಿಗೆ ಆಶಾ ಕಾಯ೯ಕತೆ೯ಯರು ಆಸರೆಯಾಗಿದ್ದಾರೆ.ಆರೋಗ್ಯ ಇಲಾಖೆಯವರು ಸಾವ೯ಜನಿಕರ ಸೇವೆಯೊಂದಿಗೆ ತಮ್ಮ ಆರೋಗ್ಯದ ಬಗ್ಗೆಯೂ ನಿಗಾವಹಿಸಬೇಕಿದೆ ಎಂದು ಅವರು ಸೂಚಿಸಿದರು. ಡಿವೈಎಸ್ಪಿ ಶಿವಕುಮಾರ. ತಾಲೂಕು ಪಂಚಾಯ್ತಿ ಅಧಿಕಾರಿ ಜಿ.ಎಂ.ಬಸಣ್ಣ.ಸಿಪಿಐ ಪಂಪನಗೌಡ.ತಾಲೂಕು ಆರೋಗ್ಯಾಧಿಕಾರಿ ಷಣ್ಮುಖನಾಯ್ಕ.ಪರಿಶಿಷ್ಟ ಪಂಗಡ ಇಲಾಖಾಧಿಕಾರಿ ಮೆಹಬೂಬ್.ಸಿಡಿಪಿಓ ಮಧುಸೂಧನ.ಸಮಾಜಕಲ್ಯಾಣಾಧಿಕಾರಿ ಜಗಧೀಶ ಹಾಜರಿದ್ದರು.
Be the first to comment