ಸುರಪುರದ ದರ್ಬಾರ್ ಶಾಲೆಯಲ್ಲಿ ಶಾಸಕ ರಾಜೂಗೌಡರಿಂದ ನಿರ್ಗತಿಕರ ಗಂಜೀ ಕೇಂದ್ರಕ್ಕೆ ಚಾಲನೆ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಡೆಸ್ಕ್

ಹಸಿವಿನಿಂದ ಬಳುಲುತ್ತಿರುವವರಿಗೆ ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡಲು ಸರ್ಕಾರ ನಿರ್ಗತಿಕರ ಗಂಜೀ ಕೇಂದ್ರಗಳನ್ನು ತೆಗೆಯಲಾಗಿದ್ದು ಇದರ ಸದುಪಯೋಗವನ್ನು ಪಡಿಸಿಕೊಳ್ಳಲು ನಿರ್ಗತಿಕರಿಗೆ ತಿಳಿಸಿರಿ ಎಂದು ಶಾಸಕ ರಾಜೂಗೌಡರು ಹೇಳಿದರು.

ಸೋಮವಾರ ಸುರಪುರದ ದರಬಾರ ಶಾಲೆಯಲ್ಲಿ ನಿರ್ಗತಿಕರ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೊರಾನಾ ವೈರಸ್ ನಿಂದ ತಾಲೂಕ ಲಾಕ್ ಡೌನ್ ಆಗಿದೆ.

ಇದರಿಂದ ಹೋಟೆಲ್,ಖಾನಾವಳಿ ಬಂದಾಗಿವೆ ಬಸ್ ನಿಲ್ದಾಣ ಸೇರಿದಂತೆ ಅಲ್ಲಲ್ಲಿರುವ ನಿರ್ಗತಿಕರು,ಕಡುಬಡವರು ಯಾವುದೇ ಕಾರಣಕ್ಕೂ ಹಸಿವಿನಿಂದ ಬಳಸಬಾರದೆಂದು ಈಗಾಗಲೇ ನನ್ನ ಟೀಮ್ ನವರು ಲಾಕ್ ಡೌನ್ ಆಗಿರುವಾಗಿನಿಂದ ನಿರ್ಗತಿಕರಿಗೆ ಹಾಗೂ ವಿವಿಧ ನಗರಗಳಿಂದ ಸಾವಿರಕ್ಕೂ ಅಧಿಕ ಜನರು ಸುರಪುರ-ಹುಣಸಗಿ ಆಸ್ಪತ್ರೆಗೆ ತಪಾಸಣೆಗೆ ಬಂದವರಿಗೆ ಊಟ,ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಪೌರಾಕಾರ್ಮಿಕರು ಮೊದಲು ನೀವು ಸುರಕ್ಷತೆಯಿಂದ ಇದ್ದು ಕೆಲಸ ಮಾಡಲು ಮುಂದಾಗಿ ಎಂದರು.

ತಹಸೀಲ್ದಾರ ನಿಂಗಣ್ಣ ಬಿರಾದಾರ ಮಾತನಾಡಿ, ಈಗಾಗಲೇ ಕೆಂಭಾವಿ,ಸುರಪುರ,
ಹುಣಸಗಿ ಸೇರಿ ಮೂರು ಕಡೆ ನಿರ್ಗತಿಕರಿಗೆ ಮೂರು ಒತ್ತು ಊಟದ ವ್ಯವಸ್ಥೆ ಮಾಡಲಾಗಿದೆ.
ಅವರು ಬಂದು ಕೇಂದ್ರಗಳಲ್ಲಿ ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ ಬರಲಾಗದಿದ್ದವರಿಗೆ ಅವರು ಇರುವ ಸ್ಥಳಕ್ಕೆ ನಗರಸಭೆಯ ವಾಹನದಲ್ಲಿ ಹೋಗಿ ಊಟ ಕೊಟ್ಟು ಬರಲು ಕೂಡ ವ್ಯವಸ್ಥೆ ಮಾಡಲಾಗಿದೆ ಎಂದರು.

ಶಿರಸ್ತೆದಾರ ಅಶೋಕ ಸುರಪುರಕರ್,ನಗರಸಭೆ ಸದಸ್ಯರಾದ ನಾಸಿರ್ ಕುಂಡಾಲೆ,ಖಮುರುದ್ದಿನ್ ನಾರಾಯಣಪೇಟ,ಪ್ರದೀಪ ಶಿಕ್ಷಕ ಸೋಮರಡ್ಡಿ ಮಂಗಿಹಾಳ, ಭೀಮಣ್ಣ ಬೇವಿನಾಳ ಇತರರು ಇದ್ದರು.

Be the first to comment

Leave a Reply

Your email address will not be published.


*