ಜನರಲ್ಲಿ ಕರೋನಾ ಜಾಗೃತಿ ಮೂಡಿಸುವಲ್ಲಿ ಎಡವುತ್ತಿರುವ ರಾಜನಹಳ್ಳಿ ಗ್ರಾಮ ಪಂಚಾಯಿತಿ

ವರದಿ: ಪ್ರಕಾಶ ಮಂದಾರ ಹರಿಹರ

ಜೀಲ್ಲಾ ಸುದ್ದಿಗಳು

ಹರಿಹರ: ಕರೋನ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸದೆ ಕೇವಲ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾತ್ರ ಕರೋನಾ ಜಾಗೃತಿ ಮೂಡಿಸುತ್ತಿರು ರಾಜನಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು .

ಕರೊನ ಕುರಿತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜನರನ್ನು ಒಂದು ಕಡೆ ಸೇರುವಂತೆ ಮಾಡಿ ,ಸಾಮಾಜಿಕ ಅಂತರದಲ್ಲಿ ಅವರನ್ನು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ .ಆ ನಂತರ ಅವರಲ್ಲಿ ಕರೊನ ವೈರಸ್ ಸಂಬಂಧಿಸಿದಂತೆ ಜನರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅವರಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಇವರದ್ದಾಗಿರುತ್ತದೆ.

ಆದರೆ ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದರ ಹೊರತಾಗಿ ಇಲಾಖೆ ಇಲಾಖೆಯವರೇ ಕುಳಿತು ಚರ್ಚೆ ಮಾಡುವಂತಹ ಜಾಗೃತಿ ಕಾರ್ಯಕ್ರಮವನ್ನು ಮಾಡಿದ್ದಾರೆ.

ಇವರ ಜಾಗೃತಿ ಕಾರ್ಯಕ್ರಮ ಹೇಗಿತ್ತು ಎಂದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಹಾಗೂ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ,ಮತ್ತು ಆರೋಗ್ಯ ಇಲಾಖೆ ,ಹಾಗೂ ಆಶಾ ಕಾರ್ಯಕರ್ತೆಯರು ,ಮತ್ತು ಅಂಗನವಾಡಿ ಕಾರ್ಯಕರ್ತರು . ಇವರ ಜೊತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು.ಒಂದು ಕ್ಷಣ ನೋಡಿದವರಿಗೆ ಇದು ಮೀಟಿಂಗ್ ಅಥವಾ ಕರೊನ ಕುರಿತು ಜಾಗೃತಿಯ ಕಾರ್ಯಕ್ರಮವೋ ಎಂಬ ಅನುಮಾನ ಮೂಡುವಂತಿತ್ತು.

ಅವರವರೇ ಜಾಗೃತಿ ಕಾರ್ಯಕ್ರಮ ಮಾಡಿಕೊಂಡರೆ ಜನಸಾಮಾನ್ಯರಿಗೆ ಮುಟ್ಟುವುದಾದರೂ ಹೇಗೆ ,ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವಂಥ ಪರಿಣಾಮಕಾರಿ ಕಾರ್ಯಕ್ರಮ ಆಗಬೇಕು, ಆ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದಾಗ ಮಾತ್ರ ಕರೊನ ವೈರಸ್ಸನ್ನು ತೊಲಗಿಸಲು ಸಾಧ್ಯವಾಗುತ್ತದೆ .

Be the first to comment

Leave a Reply

Your email address will not be published.


*