ಕೆ.ಬಸಾಪುರ ತಾಂಡ ಸ ಹಿ ಪ್ರಾ ಶಾಲೆ:ಸಕಾ೯ರಿ ಶಾಲೆ ಮಕ್ಕಳೇ ಸಮಾಜದ ಸಂಪತ್ತು-ಕೃಷ್ಣ ನಾಯ್ಕ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು


ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕೆ.ಬಸಾಪುರ ತಾಂಡ( ದೂಪದಳ್ಳಿ ತಾಂಡಾ) ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ನಿಭ೯ಂಧನಾ ರಜಾ ಘೋಷಣೆ ಅವಧಿಯ ಆಹಾರ ವಿತರಿಸಲಾಯಿತು.ಈ ಸಂದಭ೯ದಲ್ಲಿ ಪೋಷಕರನ್ನುದ್ಧೇಶಿಸಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಾನಾಯ್ಕ ಮಾತನಾಡಿದರು. ಮನುಷ್ಯನಿಗೆ ಬದುಕಲಿಕ್ಕೆ ಓದು ಒಕ್ಕಾಲು ಬುದ್ಧಿ ಮುಕ್ಕಾಲು ಅಗತ್ಯ ಎಂಬ ಮಾತಿದೆ.ಆದರೆ ಎರಡನ್ನೂ ಪರಿಪೂಣ೯ವಾಗಿ ಸಕಾ೯ರಿಶಾಲಾ ವಿದ್ಯಾರ್ಥಿಗಳು ಹೊಂದಲಿದ್ದಾರೆ.ಸಕಾ೯ರಿ ಶಾಲೆಯಲ್ಲಿ ಓದಿದವರು ಪಠ್ಯದೊಂದಿಗೆ ಜೀವನದ ಪಾಠವನ್ನೂ ಕಲಿಯಬಹುದಾಗಿದೆ.ಅವರೇ ನಿಜವಾದ ಸಮಾಜ ಸೇವಕರಾಗೋದು ಮತ್ತು ರಾಷ್ಟ್ರಪ್ರೇಮಿಗಳಾಗಲಿದ್ದಾರೆ. ಅದಕ್ಕೆ ರಾಷ್ಟ್ರಕಂಡ ಮಹಾನ್ ವ್ಯಕ್ತಿಗಳು.ವಿಜ್ಞಾನಿಗಳು.ಹೋರಾಟಗಾರರು.ವೀರಯೋಧರೇ ಸಾಕ್ಷಿಯಾಗಿದ್ದಾರೆ.ಆದ್ದರಿಂದ ಸಕಾ೯ರಿ ಶಾಲಾಮಕ್ಕಳೇ ಸಮಾಜದ ಹಾಗೂ ರಾಷ್ಟ್ರದ ಸಂಪತ್ತು ಕಾರಣ ಎಲ್ಲರೂ ತಮ್ಮ ಮಕ್ಕಳನ್ನು ಸಕಾ೯ರಿ ಶಾಲೆಯಲ್ಲಿಯೇ ಸೇರಿಸಿ ಎಂದು ಕೃಷ್ಣಾನಾಯ್ಕ ಗ್ರಾಮಸ್ಥರಿಗೆ ಕರೆನೀಡಿದರು.ಮುಖ್ಯಶಿಕ್ಷಕ ಹಾಗೂ ಶಿಕ್ಷಕರು.ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು. ಸದಸ್ಯರು.ವಿದ್ಯಾಥಿ೯ಗಳು.ಪೋಷಕರು.ಗ್ರಾಮದ ಪ್ರಮುಖರು ಇದ್ದರು.

Be the first to comment

Leave a Reply

Your email address will not be published.


*